ವಡೋದರಾ (ಗುಜರಾತ್): ಮದುವೆಯಾದ ಎಂಟು ವರ್ಷಗಳ ಬಳಿಕ ಮಹಿಳೆಯೊಬ್ಬರಿಗೆ ತನ್ನ ಗಂಡ 'ಅವನಲ್ಲ ಅವಳು' ಎಂಬುವುದು ಗೊತ್ತಾಗಿದೆ. ಇದರಿಂದ ಆಘಾತಕ್ಕೊಳಗಾದ ಮಹಿಳೆಯು ಇದೀಗ 'ಪತಿ' ವಿರುದ್ಧ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಮತ್ತು ವಂಚನೆ ದೂರು ದಾಖಲಿಸಿದ್ದು, ಕುಟುಂಬದ ಸದಸ್ಯರನ್ನೂ ಆರೋಪಗಳನ್ನಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಡೋದರಾದ 40 ವರ್ಷದ ಮಹಿಳೆಯೊಬ್ಬರು 2014ರಲ್ಲಿ ದೆಹಲಿಯ ಮೂಲದ ಡಾ.ವಿರಾಜ್ ವರ್ಧನ್ (ಹಿಂದಿನ ಹೆಸರು ವಿಜೈತಾ) ಜೊತೆ ಮದುವೆಯಾಗಿದ್ದರು. ಕಾಶ್ಮೀರಕ್ಕೆ ಹನಿಮೂನ್‌ಗೂ ತೆರಳಿದ್ದರು. ಆದರೆ, ಇದಾದ ಹಲವು ದಿನಗಳ ಕಾಲ 'ಪತಿ' ಮದುವೆಯ ಇಚ್ಛೆಯನ್ನು ಪೂರ್ಣಗೊಳಿಸಿರಲ್ಲ. ದೈಹಿಕ ಸಂಪರ್ಕ ಬೆಳೆಸದೇ ನೆಪಗಳನ್ನೊಡ್ಡಿ ದೂರ ಇರುತ್ತಿದ್ದರು.
ಅಪಘಾತದ ಕಥೆ ಕಟ್ಟಿದ್ದ 'ಪತಿ': ದೈಹಿಕ ಸಂಪರ್ಕಕ್ಕೆ ಪತ್ನಿಯೇ ಒತ್ತಡ ಹೇರಿದಾಗ ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿದ್ದಾಗ ನನಗೆ ಅಪಘಾತವಾಗಿತ್ತು. ಇದರಿಂದಾಗಿ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗಲ್ಲ ಎಂದು 'ಪತಿ' ಹೇಳಿಕೊಂಡಿದ್ದರು. ಅಲ್ಲದೇ, ಮುಂದಿನ ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುವುದಾಗಿ ಪತ್ನಿಗೆ ಭರವಸೆ ನೀಡಿದ್ದರು.
ಈ ನಡುವೆ 2020ರ ಜನವರಿಯಲ್ಲಿ ಸ್ಥೂಲಕಾಯತೆ ಶಸ್ತ್ರಚಿಕಿತ್ಸೆಗಾಗಿ ಹೇಳಿ ವಿರಾಜ್ ಕೋಲ್ಕತ್ತಾಗೆ ತೆರಳಿದ್ದರು. ಈ ವೇಳೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪುರುಷ ಅಂಗಗಳನ್ನು ಅಳವಡಿಸಿಕೊಂಡಿದ್ದಾಗಿ ಬಯಲಾಗಿದೆ. ಜೊತೆಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರು. ಇದರ ಬಗ್ಗೆ ಯಾರ ಬಳಿಯೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದರು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಎಲ್ಲ ಘಟನೆಗಳ ಬಗ್ಗೆ ಇದೀಗ ಮಹಿಳೆಯು ತನ್ನ ಅವಳು 'ಪತಿ' ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ವಡೋದರಾ ಪೊಲೀಸರು ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ, ಮುಂದಿನ ವಿಚಾರಣೆಗಾಗಿ ವಡೋದರಾಕ್ಕೆ ಕರೆ ತಂದಿದ್ದಾರೆ.
ಎರಡನೇ ಮದುವೆಯಾಗಿದ್ದ ಮಹಿಳೆ: ಈ ಮಹಿಳೆಗೆ ಈ ಹಿಂದೆ ಬೇರೆಯೊಬ್ಬರನ್ನು ಮದುವೆಯಾಗಿದ್ದರು. ಆದರೆ, ಪತಿ 2011ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಸಮಯದಲ್ಲಿ 14 ವರ್ಷದ ಮಗಳು ಇದ್ದರು. ಇದಾದ ನಂತರ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ದೆಹಲಿಯ ನಿವಾಸಿ ವಿರಾಜ್ ಸಂಪರ್ಕಕ್ಕೆ ಬಂದಿದ್ದರು. ಅಂತೆಯೇ, 2014ರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಔಪಚಾರಿಕವಾಗಿ ವಿವಾಹವಾಗಿದ್ದರು.
ಇದನ್ನೂ ಓದಿ: 15 ದಿನದ ಹಿಂದೆ ಬೇರೆ ಯುವಕನ ಜೊತೆ ಮದುವೆ: ತವರಿಗೆ ಬಂದ ಪ್ರೇಯಸಿಗೆ 20 ಬಾರಿ ಚಾಕು ಚುಚ್ಚಿ, ವಿಷ ಕುಡಿದ ಪ್ರೇಮಿ