ವಡೋದರಾ (ಗುಜರಾತ್): ವಡೋದರಾ ನಗರದ ಕರೇಲಿಬಾಗ್ ಪ್ರದೇಶದಲ್ಲಿ ಕಳೆದ ರಾತ್ರಿ ಏಂಟು ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ. ಓರ್ವ ಅಜ್ಜಿ ತನ್ನ ಮನೆಯ ಹೊರಗೆ ಕುಳಿತಿದ್ದಾಗ, ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಕರೇಲಿಬಾಗ್ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆಯ ತನಿಖೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ:ಝಾನ್ಸಿಯಲ್ಲಿ ಮಹಾಮಳೆ: ನೀರಿನ ರಭಸಕ್ಕೆ ಬೈಕ್ ಸಹಿತ ಕೊಚ್ಚಿ ಹೋದ ಯುವಕ..ಸ್ಥಳೀಯರಿಂದ ರಕ್ಷಣೆ