ಪಾಟ್ನಾ(ಬಿಹಾರ): ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಾಗುವ ಕೋವಿಡ್ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ಗೆ 250ರೂ ನೀಡಬೇಕಾಗಿದ್ದು, ಕೇಂದ್ರ ಸರ್ಕಾರವೇ ಇದರ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಮಹತ್ವದ ಪ್ರಕಟಣೆ ಹೊರಡಿಸಿದೆ.
-
Vaccination will be absolutely free in the entire Bihar state. Such facility will be made available even at private hospitals, it will be facilitated by the state government: Bihar Chief Minister Nitish Kumar #COVID19Vaccine pic.twitter.com/t0cVKG7pH9
— ANI (@ANI) March 1, 2021 " class="align-text-top noRightClick twitterSection" data="
">Vaccination will be absolutely free in the entire Bihar state. Such facility will be made available even at private hospitals, it will be facilitated by the state government: Bihar Chief Minister Nitish Kumar #COVID19Vaccine pic.twitter.com/t0cVKG7pH9
— ANI (@ANI) March 1, 2021Vaccination will be absolutely free in the entire Bihar state. Such facility will be made available even at private hospitals, it will be facilitated by the state government: Bihar Chief Minister Nitish Kumar #COVID19Vaccine pic.twitter.com/t0cVKG7pH9
— ANI (@ANI) March 1, 2021
ಆದರೆ ಬಿಹಾರದ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ವ್ಯಾಕ್ಸಿನ್ ಉಚಿತವಾಗಿ ಲಭ್ಯವಾಗಲಿದ್ದು, ಇದರ ವೆಚ್ಚ ಬಿಹಾರ ಸರ್ಕಾರ ಭರಿಸಲಿದೆ. ಕೋವಿಡ್ ವ್ಯಾಕ್ಸಿನ್ ಮೊದಲ ಲಸಿಕೆ ಪಡೆದುಕೊಂಡು ಮಾತನಾಡಿದ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್, ಖಂಡಿತವಾಗಿ ಸರ್ಕಾರಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಲಸಿಕೆ ಉಚಿತವಾಗಿ ಲಭ್ಯವಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ನಮಗೆ ವಯಸ್ಸಾಯ್ತು.. ಯುವಕರಿಗೆ ಮೊದಲು ಕೋವಿಡ್ ಲಸಿಕೆ ನೀಡಿ: ಮಲ್ಲಿಕಾರ್ಜುನ ಖರ್ಗೆ!
ಬಿಹಾರ ವಿಧಾನಸಭೆ ಚುನಾವಣೆ ನಡೆಯುವುದುಕ್ಕೂ ಮುಂಚಿತವಾಗಿ ಉಚಿತವಾಗಿ ತಾವು ಕೋವಿಡ್ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇದೀಗ ಅಲ್ಲಿನ ಜೆಡಿಯು - ಬಿಜೆಪಿ ನೇತೃತ್ವದ ಸರ್ಕಾರ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಮುಂದಾಗಿದೆ. ದೇಶಾದ್ಯಂತ ಇಂದಿನಿಂದ ಮೂರನೇ ಹಂತದ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ರಾಜಕೀಯ ಮುಖಂಡರು ಲಸಿಕೆ ಪಡೆದುಕೊಂಡಿದ್ದಾರೆ.