ETV Bharat / bharat

ಉತ್ತರಾಖಂಡದಲ್ಲಿ ಇಂದಿನಿಂದ ಚಾರ್​ಧಾಮ್ ಯಾತ್ರೆ ಪುನಾರಂಭ - ಉತ್ತರಾಖಂಡ ಮಳೆಗೆ ಹಲವರ ಸಾವು

ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಉತ್ತರಾಖಂಡ ಪೊಲೀಸ್​​ ಮಹಾನಿರ್ದೇಶಕರು ಚಾರ್​ಧಾಮ್ ಪುನಾರಂಭದ ಬಗ್ಗೆ ಮಾಹಿತಿ ನೀಡಿದ್ದಾರೆ.

Uttarakhand rains: Char Dham Yatra will resume today
ಉತ್ತರಾಖಂಡದಲ್ಲಿ ಇಂದಿನಿಂದ ಚಾರ್​ಧಾಮ್ ಯಾತ್ರೆ ಪುನಾರಂಭ
author img

By

Published : Oct 20, 2021, 3:28 AM IST

ನೈನಿತಾಲ್ , ಉತ್ತರಾಖಂಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಾಖಂಡದಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದ್ದು, ಕೆಲವು ಪ್ರದೇಶಗಳು ಈಗ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ 'ಚಾರ್ ಧಾಮ್ ಯಾತ್ರೆ' ಬುಧವಾರದಿಂದ ಪುನಾರಂಭಗೊಳ್ಳಲಿದೆ ಎಂದು ಉತ್ತರಾಖಂಡ ರಾಜ್ಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಂಗಳವಾರ ನೈನಿತಾಲ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಉತ್ತರಾಖಂಡ್​ ಪೊಲೀಸ್​​ ಮಹಾನಿರ್ದೇಶಕ ಅಶೋಕ್ ಕುಮಾರ್ ಚಾರ್​ಧಾಮ್ ಪುನಾರಂಭದ ಬಗ್ಗೆ ಎಎನ್​ಐಗೆ ಮಾಹಿತಿ ನೀಡಿದ್ದಾರೆ.

ಚಾರ್​ಧಾಮ್ ಇರುವ ಗರ್ವಾಲ್ ಬಹುತೇಕ ಪರಿಸ್ಥಿತಿ ಸುಧಾರಿಸಿದೆ. ಬುಧವಾರದಿಂದ ಚಾರ್​​​ಧಾಮ್ ಯಾತ್ರೆ ಸಂಪೂರ್ಣವಾಗಿ ಪುನಾರಂಭಗೊಳ್ಳಲಿದೆ ಎಂದು ಅಶೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನೈನಿತಾಲ್​ನಲ್ಲಿ 40 ಮಂದಿ ಸಾವು

ಇನ್ನು ಮಳೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ರಾಜ್ಯದಲ್ಲಿ 40 ಮಂದಿ ಸಾವನ್ನಪ್ಪಿದ್ದು, ನೈನಿತಾಲ್​​ ಪ್ರದೇಶದಲ್ಲಿಯೇ 25 ಮಂದಿ ಮೃತಪಟ್ಟಿದ್ದಾರೆ. ಮಳೆಯು ನೈನಿತಾಲ್, ಹಲ್ದ್ವಾನಿ, ಉಧಮ್ ಸಿಂಗ್ ನಗರ, ಚಂಪಾವತ್, ಕುಮಾವೋನ್ ಪ್ರದೇಶದಲ್ಲಿ ಅತಿ ಹೆಚ್ಚು ದುಷ್ಪರಿಣಾಮ ಬೀರಿದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.

ಕುಮಾವೋನ್​ನಲ್ಲಿ ಪ್ರವಾಹದ ನೀರಿನ ಮಟ್ಟ ಕಡಿಮೆಯಾಗಿದೆ. ಪೊಲೀಸ್, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಶೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ ಭೀಕರ ಪ್ರವಾಹಕ್ಕೆ 45 ಸಾವು: ಮನೆ ಕಳೆದುಕೊಂಡವರಿಗೆ 1 ಲಕ್ಷ, ಮೃತರಿಗೆ 4 ಲಕ್ಷ ರೂ.ಪರಿಹಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.