ETV Bharat / bharat

ಮಗ ಭಾರತೀಯ ಸೇನೆ ಸೇರುತ್ತಿದ್ದಂತೆ ಸರ್ಕಾರಕ್ಕೆ ಬಿಪಿಎಲ್ ಕಾರ್ಡ್​ ಮರಳಿಸಿದ ತಂದೆ! - Uttarakhand man surrenders BPL ration card

ಮಗ ಭಾರತೀಯ ಸೇನೆ ಸೇರಿಕೊಳ್ಳುತ್ತಿದ್ದಂತೆ ತಂದೆಯೊಬ್ಬ ತಾವು ಬಳಕೆ ಮಾಡ್ತಿದ್ದ ಬಿಪಿಎಲ್ ಕಾರ್ಡ್ ಅ​​ನ್ನು ಸರ್ಕಾರಕ್ಕೆ ಹಿಂತಿರುಗಿಸಿ ಇತರರಿಗೆ ಮಾದರಿಯಾದರು.

Uttarakhand man surrenders BPL ration card

author img

By

Published : Apr 27, 2022, 3:50 PM IST

ಅಲ್ಮೋರಾ(ಉತ್ತರಾಖಂಡ): ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅನೇಕರು ನಕಲಿ ದಾಖಲೆ ಸೃಷ್ಟಿಸಿ, ಸರ್ಕಾರಕ್ಕೆ ವಂಚಿಸುವ ನಿದರ್ಶನಗಳು ನಮ್ಮ ಕಣ್ಮುಂದಿವೆ. ಆದರೆ, ಇಲ್ಲೊಂದು ಕುತೂಹಲಕಾರಿ ವಿದ್ಯಮಾನ ನಡೆದಿದೆ. ಮಗ ಭಾರತೀಯ ಸೇನೆ ಸೇರಿಕೊಳ್ಳುತ್ತಿದ್ದಂತೆ ಕುಟುಂಬವೊಂದು ಖುದ್ದಾಗಿ ಬಿಪಿಎಲ್ ಕಾರ್ಡ್ ಅನ್ನು​ ಸರ್ಕಾರಕ್ಕೆ ಹಿಂತಿರುಗಿಸಿದೆ.

ಬಿಪಿಎಲ್​ ವ್ಯಾಪ್ತಿಗೆ ಬಾರದ ಕುಟುಂಬಗಳು ತಮ್ಮ ಪಡಿತರ ಚೀಟಿಯನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು ಎಂದು ಈಗಾಗಲೇ ಉತ್ತರಾಖಂಡ ಸರ್ಕಾರದ ಆದೇಶವಿದೆ. ಈ ಬೆನ್ನಲ್ಲೇ ಅಲ್ಮೋರಾದ ಸೋಮೇಶ್ವರ ಎಂಬಲ್ಲಿನ ಡೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ರಮೇಶ್ ಸಿಂಗ್ ಮೆಹ್ರಾ ಈ ರೀತಿಯಾಗಿ ನಡೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ನಟಿ ಮೇಲೆ ಅತ್ಯಾಚಾರ; ಖ್ಯಾತ ನಟನ ವಿರುದ್ಧ ಪ್ರಕರಣ

ಕಳೆದ ಕೆಲ ದಿನಗಳ ಹಿಂದೆ ರಮೇಶ್​ ಸಿಂಗ್ ಅವರ ಮಗ ಭಾರತೀಯ ಸೇನೆ ಸೇರ್ಪಡೆಯಾಗಿದ್ದು, ಬಡತನ ರೇಖೆಗಿಂತಲೂ ಕೆಳಗಿರುವವರಿಗೆ ನೀಡುವ ಬಿಪಿಎಲ್​​ ಕಾರ್ಡ್​​ ಅನ್ನು ಅಧಿಕಾರಿಗಳಿಗೆ ವಾಪಸ್ ನೀಡಿದ್ದಾರೆ. ಗ್ರಾಮದ ಇತರೆ ಬಡ ಕುಟುಂಬಗಳು ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.