ETV Bharat / bharat

ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಶಾಲೆಯ ಎಲ್ಲ ಸಿಬ್ಬಂದಿ ವಿರುದ್ಧ ಕೇಸ್​ ದಾಖಲು - ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಉತ್ತರಾಖಂಡದ ಕಾಶಿಪುರ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಶಿಕ್ಷಕರು ಥಳಿಸಿದ್ದರಿಂದ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

uttarakhand-class-viii-student-died-in-school-case-filed-against-entire-staff
ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಶಾಲೆಯ ಎಲ್ಲ ಸಿಬ್ಬಂದಿ ವಿರುದ್ಧ ಕೇಸ್​ ದಾಖಲು
author img

By

Published : Nov 16, 2022, 4:18 PM IST

ಕಾಶಿಪುರ (ಉತ್ತರಾಖಂಡ): ಶಾಲಾ ಆವರಣದಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಉತ್ತರಾಖಂಡದ ಕಾಶಿಪುರದಲ್ಲಿ ನಡೆದಿದೆ. ಸೋಮವಾರ ಇಲ್ಲಿನ ಪಂಡಿತ್‌ ಗೋವಿಂದ್‌ ಬಲ್ಲಭ್‌ ಪಂತ್‌ (ಪಿಜಿಬಿಪಿ) ಇಂಟರ್‌ ಕಾಲೇಜಿನಲ್ಲಿ ಈ ಘಟನೆ ಜರುಗಿದೆ. ಈ ಸಂಬಂಧ ಕಾಲೇಜಿನ ಎಲ್ಲ ಸಿಬ್ಬಂದಿ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಂಟನೇ ತರಗತಿ ಓದುತ್ತಿದ್ದ ಮೋಕ್ಷ ಗುಪ್ತಾ ಎಂಬಾತನೇ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಶಾಲೆಗೆ ಹೋದಾಗ ಮೋಕ್ಷ ಚೆನ್ನಾಗಿಯೇ ಇದ್ದ. ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳು ಇರಲಿಲ್ಲ. ಶಾಲೆಯಲ್ಲಿ ಶಿಕ್ಷಕರು ಥಳಿಸಿದ್ದರಿಂದ ಮೋಕ್ಷ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಜೊತೆಗೆ ಶಾಲೆಯಲ್ಲಿ ಮೋಕ್ಷ ಸಾವನ್ನಪ್ಪಿದ ಎರಡು ಗಂಟೆಗಳ ನಂತರ ಶಾಲಾ ಆಡಳಿತ ಮಂಡಳಿಯವರು ನಮಗೆ ಮಾಹಿತಿ ನೀಡಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ. ಅಲ್ಲದೇ, ಈ ಘಟನೆಯ ನಂತರ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು ಮಂಗಳವಾರ ಸಂಜೆ ಮಹಾರಾಣಾ ಪ್ರತಾಪ್ ಚೌಕ್‌ನಲ್ಲಿ ಶಾಲಾ ಆಡಳಿತದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಆದರೆ, ಶಾಲಾ ಆಡಳಿತ ಮಂಡಳಿಯು ಈ ಆರೋಪವನ್ನು ತಳ್ಳಿಹಾಕಿದ್ದು, ವಿದ್ಯಾರ್ಥಿ ಮೋಕ್ಷ ಮಧ್ಯಾಹ್ನದ ಊಟದ ಸಮಯದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದ. ನಂತರ ವಿದ್ಯಾರ್ಥಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಶಾಲಾ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಈ ಬಗ್ಗೆ ಸಿಒ ವಂದನಾ ವರ್ಮಾ ಪ್ರತಿಕ್ರಿಯಿಸಿ, ಮೃತ ವಿದ್ಯಾರ್ಥಿಯ ಕುಟುಂಬ ಸದಸ್ಯರಿಂದ ದೂರು ಸ್ವೀಕರಿಸಲಾಗಿದೆ. ಈ ದೂರಿನ ಮೇರೆಗೆ ಶಾಲೆಯ ಎಲ್ಲ ಸಿಬ್ಬಂದಿ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸಾಕ್ಷ್ಯ ಮತ್ತು ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಿಯಕರ ಆತ್ಮಹತ್ಯೆ.. ಜಾಲತಾಣದಲ್ಲಿ ಜೋಡಿ ಫೋಟೋ ವೈರಲ್, ಯುವತಿ ಬಾರದಲೋಕಕ್ಕೆ ಪಯಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.