ಡೆಹ್ರಾಡೂನ್: ಉತ್ತರಾಖಂಡದ ಸಚಿವ ಡಾ.ಹರಕ್ ಸಿಂಗ್ ರಾವತ್ ಅವರಿಗೆ ರುದ್ರಪ್ರಯಾಗ್ನ ಜಿಲ್ಲಾ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಜೊತೆಗೆ 1,000 ರೂ. ದಂಡ ಹಾಕಿ ಆದೇಶ ನೀಡಿದೆ.
2012ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರ ಜೊತೆ ಅಸಭ್ಯವಾಗಿ ವರ್ತಿಸಿರುವುದಕ್ಕೆ ಈ ಶಿಕ್ಷೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರ ಜೊತೆ ಹರಕ್ ಸಿಂಗ್ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಡಾ. ರಾವತ್ ಮತ್ತು ಅವರ ಬೆಂಬಲಿಗರರು ಪ್ರಕರಣ ದಾಖಲಿಸಿದ್ರು.
ಈ ಪ್ರಕರಣವು ಕಳೆದ ಎಂಟು ವರ್ಷಗಳಿಂದ ರುದ್ರಪ್ರಯಾಗ್ ನ್ಯಾಯಾಲಯದಲ್ಲಿತ್ತು. ಆದರೆ ಮೇಲ್ಮನೆ ಅವಧಿಯವರೆಗೆ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.