ETV Bharat / bharat

ಯುಪಿ ಎಂಎಲ್​​ಸಿ ಚುನಾವಣೆ: 36ರಲ್ಲಿ 33 ಸ್ಥಾನ ಗೆದ್ದ ಬಿಜೆಪಿ, ಎಸ್‌ಪಿಗೆ ಮುಖಭಂಗ! - UP MLC Election Result

ಉತ್ತರ ಪ್ರದೇಶ ವಿಧಾನ ಪರಿಷತ್​ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ದಾಖಲು ಮಾಡಿದ್ದು, 36 ಸ್ಥಾನಗಳ ಪೈಕಿ 33ರಲ್ಲಿ ಗೆಲುವಿನ ನಗೆ ಬೀರಿತು.

UTTAR PRADESH MLC ELECTION 2022 RESULT
UTTAR PRADESH MLC ELECTION 2022 RESULT
author img

By

Published : Apr 12, 2022, 5:50 PM IST

ಲಖನೌ(ಉತ್ತರ ಪ್ರದೇಶ): ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರ ಬೆನ್ನಲ್ಲೇ ನಡೆದ ಪರಿಷತ್​ ಚುನಾವಣೆಯಲ್ಲೂ ಕಮಲ ಪಕ್ಷ ಗೆದ್ದು ಬೀಗಿದೆ.

36 ಸ್ಥಾನಗಳ ಪೈಕಿ ಬಿಜೆಪಿ 33ರಲ್ಲಿ ಗೆಲುವು ಪಡೆದಿದೆ. ಪ್ರತಿಪಕ್ಷ ಎಸ್‌ಪಿ ಯಾವುದೇ ಸ್ಥಾನಗಳಲ್ಲೂ ಗೆಲುವು ಸಾಧಿಸದೆ ಮುಖಭಂಗ ಅನುಭವಿಸಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯಲ್ಲಿ ಬಿಜೆಪಿ ಸೋಲು ಕಂಡಿದ್ದು, ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.

36 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದಂತೆ ಚುನಾವಣೆ ಸಂದರ್ಭದಲ್ಲಿ ಬುದೌನ್, ಹರ್ದೋಯ್, ಖೇರಿ, ಮಿರ್ಜಾಪುರ್-ಸೋನ್‌ಭದ್ರ, ಬಂದಾ-ಹಮೀರ್‌ಪುರ್, ಅಲಿಗಢ್, ಬುಲಂದ್‌ಶಹರ್​ನಲ್ಲಿ ಗೆಲುವಿನ ನಗೆ ಬೀರಿದೆ. 100 ಪರಿಷತ್​ ಸದಸ್ಯರ ಪೈಕಿ ಬಿಜೆಪಿ 35 ಸ್ಥಾನ ಪಡೆದುಕೊಂಡಿತ್ತು. ಇದೀಗ ಅದರ ಸ್ಥಾನ 44ಕ್ಕೆ ಏರಿಕೆಯಾಗಿದೆ. ಆದರೆ, ಬಹುಮತಕ್ಕೆ ಏಳು ಸ್ಥಾನ ಕಡಿಮೆ ಇದೆ. ಸಮಾಜವಾದಿ ಪಕ್ಷ 17 ಸದಸ್ಯರನ್ನು ಹೊಂದಿದ್ದು, ಬಿಎಸ್​ಪಿ ನಾಲ್ಕು, ಕಾಂಗ್ರೆಸ್​​ ಮತ್ತು ಬಿಜೆಪಿ ಮಿತ್ರಪಕ್ಷಗಳಾದ ಅಪ್ನಾದಳ, ನಿಶಾದ್​ ಪಕ್ಷ ತಲಾ ಓರ್ವ ಸದಸ್ಯರನ್ನ ಹೊಂದಿದೆ.

ಇದನ್ನೂ ಓದಿ: ಮೋದಿಗೆ ಧನ್ಯವಾದ ತಿಳಿಸಿ ಮತ್ತೆ ಕಾಶ್ಮೀರ ತಗಾದೆ ತೆಗೆದ ಪಾಕ್‌ನ ನೂತನ ಪ್ರಧಾನಿ

ಫಲಿತಾಂಶ ಬಹಿರಂಗಗೊಳುತ್ತಿದ್ದಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಜನರು ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಇಟ್ಟಿರುವ ಅಪಾರ ನಂಬಿಕೆಗೆ ಸಾಕ್ಷಿ. ನಮ್ಮ ಪಕ್ಷ ವಿಧಾನಸಭೆ ಮತ್ತು ವಿಧಾನಪರಿಷತ್​​ನಲ್ಲೂ ಭರ್ಜರಿ ಗೆಲುವು ದಾಖಲು ಮಾಡಿದ್ದು, ಇದೀಗ ರಾಜ್ಯದ ಜನರ ಕಲ್ಯಾಣ, ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಹಕಾರಿಯಾಗಿದೆ ಎಂದಿದ್ದಾರೆ.

  • आपकी शुभकामनाओं हेतु हार्दिक आभार आदरणीय प्रधानमंत्री जी।

    यह विजय आपके लोक-कल्याणकारी नेतृत्व व मार्गदर्शन के प्रति असीम जन-विश्वास और @BJP4UP के प्रतिबद्ध कार्यकर्ताओं के अथक परिश्रम का सुफल है।

    'सबका साथ-सबका विकास' के सुपथ पर चलकर सुशासन की विजय यात्रा ऐसे ही जारी रहेगी। https://t.co/jeYSdE7wu8

    — Yogi Adityanath (@myogiadityanath) April 12, 2022 " class="align-text-top noRightClick twitterSection" data=" ">

ಮೋದಿ ಅಭಿನಂದನೆ: ಎಂಎಲ್​ಸಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಈ ಗೆಲುವು ಬಿಜೆಪಿ ಅಭಿವೃದ್ಧಿಗೆ ಪೂರಕವಾಗಿದೆ. ಯೋಗಿ ಆದಿತ್ಯನಾಥ್​ ಸರ್ಕಾರ ಹಾಗೂ ಪಕ್ಷ ಸಂಘಟನೆಯಲ್ಲಿ ಭಾಗಿಯಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.