ನವದೆಹಲಿ: ಅಕ್ಟೋಬರ್ 10ರಂದು ಕೇಂದ್ರ ಲೋಕಸೇವಾ ಆಯೋಗ (UPSC) ನಾಗರಿಕ ಸೇವೆಗಳ ಪೂರ್ವಭಾವಿ (Prelims) ಪರೀಕ್ಷೆ ನಡೆಸುತ್ತಿದ್ದು ಅಭ್ಯರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ವೈಯಕ್ತಿಕವಾಗಿ ಅರೋಗ್ಯ ಕಾಪಾಡಿಕೊಳ್ಳುವುದು ಸೇರಿದಂತೆ ಸೂಚಿಸಲಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಯುಪಿಎಸ್ಸಿ ತಿಳಿಸಿದೆ.
ಪರಿಶೀಲನೆ ಸಮಯದಲ್ಲಿ ಅಭ್ಯರ್ಥಿಗಳು ಮಾಸ್ಕ್ ತೆಗೆಯಬೇಕೆಂದು ಅಧಿಕಾರಿಗಳು ಸೂಚಿಸಿದರೆ ತೆಗೆದು ಸಹಕರಿಸಬೇಕು ಎಂದು ಸೂಚಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಲಾಗಿದೆ.
ಇದಲ್ಲದೇ, ಪಾರದರ್ಶಕ ಬಾಟಲಿನಲ್ಲಿ ಸ್ಯಾನಿಟೈಸರ್ ಅನ್ನು ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಲು ಅವಕಾಶ ಕೊಡಲಾಗಿದೆ. ಈ ಬಾರಿ ಲಡಾಖ್ನ ಲೇಹ್ನಲ್ಲಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ.
ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗಳು 3 ಹಂತಗಳಲ್ಲಿ ನಡೆಯಲಿವೆ. ಈ ಸೇವೆಗಳಿಗೆ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ, ಮುಖ್ಯಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಐಎಎಸ್, ಐಪಿಎಸ್, ಐಎಫ್ಎಸ್ ಮುಂತಾದ ಹುದ್ದೆಗಳಿಗೆ ಈ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಯುತ್ತದೆ.
ಇದನ್ನೂ ಓದಿ: IMPS ಹಣ ವರ್ಗಾವಣೆ ಮಿತಿಯನ್ನು ₹2 ಲಕ್ಷದಿಂದ ₹5 ಲಕ್ಷಕ್ಕೇರಿಸಿದ ಆರ್‌ಬಿಐ