ETV Bharat / bharat

ಲಕ್ಷ್ಮಿ ದೇವಿ ಕಮಲದ ಮೇಲೆ ಕುಳಿತುಕೊಳ್ಳುತ್ತಾಳೆ ಹೊರತು ಸೈಕಲ್ ಮೇಲೆ ಅಲ್ಲ: ರಾಜನಾಥ ಸಿಂಗ್​

ಕುಶಿನಗರ ಜಿಲ್ಲೆಯ ರಾಮ್‌ಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿನಯ್ ಗೌರ್ ಅವರ ಪರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ ಯಾಚಿಸಿದ್ದಾರೆ.

Union Minister Rajnath Singh
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
author img

By

Published : Feb 24, 2022, 5:38 PM IST

ಕುಶಿನಗರ (ಉತ್ತರ ಪ್ರದೇಶ): ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರದಂದು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ರಾಮ್‌ಕೋಲಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿನಯ್ ಗೌರ್ ಅವರ ಪರ ಮತ ಯಾಚಿಸಿದ್ದಾರೆ. ಜೊತೆಗೆ ಯೋಗಿ ಆದಿತ್ಯನಾಥ್ ಸರ್ಕಾರ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಕ್ಕಿಂತಲೂ ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ಶ್ಲಾಘಿಸಿದರು.

ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ್​ ಪಕ್ಷ (ಬಿಎಸ್‌ಪಿ) ಮತ್ತು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿವೆ. ಆದರೆ, ರಾಜ್ಯದ ಇತರ ಆಡಳಿತಗಳಿಗೆ ಹೋಲಿಸಿದರೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಆಡಳಿತವು ಉನ್ನತವಾಗಿದೆ. ಯೋಗಿ ಸರ್ಕಾರ ಯುಪಿಯಲ್ಲಿ ಕಳಂಕರಹಿತ ಸರ್ಕಾರವಾಗಿದೆ ಎಂದು ತಿಳಿಸಿದರು.

ಅಂದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಕಳಂಕರಹಿತ ಆಡಳಿತವನ್ನು ನೀಡಿತ್ತು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಯಾರೂ ಕೂಡ ಮೋದಿ ಹಾಗೂ ಅವರ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ರಷ್ಯಾ - ಉಕ್ರೇನ್​ ಸಮರ: ಪ್ರಧಾನಿ ಮೋದಿ ಮಧ್ಯಸ್ಥಿಕೆ ಕೋರಿದ ಉಕ್ರೇನ್ ರಾಯಭಾರಿ

2017ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳನ್ನು ಪಕ್ಷ ಈಡೇರಿಸಿದೆ. ಹಾಗಾಗಿ ಬಿಜೆಪಿಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ದ್ವಿಗುಣಗೊಳಿಸಬೇಕಿದೆ. ಲಕ್ಷ್ಮಿ ದೇವಿ (ಸಂಪತ್ತಿನ ದೇವತೆ) ಕಮಲದ ಮೇಲೆ ಕುಳಿತುಕೊಳ್ಳುತ್ತಾಳೆ ಹೊರತು ಸೈಕಲ್ ಮೇಲೆ ಅಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.