ETV Bharat / bharat

ಬಯಸಿದ್ದು ಸಿಗದಿದ್ದಾಗ ಎಲ್ಲರೂ ಅತೃಪ್ತರೇ: ನಿತಿನ್​ ಗಡ್ಕರಿ ಶಾಸಕರಿಗೆ ಹೇಳಿದ ಕಿವಿ ಮಾತಿದು! - ಹಾಸ್ಯನಟ ಶರದ್ ಜೋಶಿ

ರಾಜಕೀಯದಲ್ಲಿ ಶಾಸಕರು - ಸಚಿವರು- ಸಿಎಂ ಎಲ್ಲರೂ ಅತೃಪ್ತರೇ ಆಗಿದ್ದಾರೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಿತಿನ್​ ಗಡ್ಕರಿ
ನಿತಿನ್​ ಗಡ್ಕರಿ
author img

By

Published : Sep 14, 2021, 10:04 AM IST

ಜೈಪುರ(ರಾಜಸ್ಥಾನ): ರಾಜಕೀಯದಲ್ಲಿ ಶಾಸಕರು - ಸಚಿವರು- ಸಿಎಂ ಎಲ್ಲರೂ ಅತೃಪ್ತರೇ ಆಗಿದ್ದಾರೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಶಾಸಕರು ತಾವು ಸಚಿವರಾಗಲು ಸಾಧ್ಯವಾಗದಿದ್ದಾಗ, ಸಚಿವರಿಗೆ ‘ಉತ್ತಮ’ ಖಾತೆ ಸಿಗದಿದ್ದಾಗ ಅಥವಾ ಸಿಎಂ ಆಗಲು ಸಾಧ್ಯವಾಗದೇ ಇದ್ದಾಗ ಎಲ್ಲರೂ ಅತೃಪ್ತರಾಗಿರುತ್ತಾರೆ. ಸಿಎಂ ತನ್ನ ಕುರ್ಚಿ ಉಳಿಸಿಕೊಳ್ಳುವ ಹೋರಾಟದಲ್ಲಿ ನಿರತರಾಗಿದ್ದು, ಅವರೂ ದುಃಖಿತರಾಗಿದ್ದಾರೆ.

ರಾಜಸ್ಥಾನ ಶಾಸಕಾಂಗ ಸಭೆಯಲ್ಲಿ ನಿತಿನ್​ ಗಡ್ಕರಿ ಮಾತು

ಈ ಎಲ್ಲಾ ಸಮಸ್ಯೆಗಳಿಗೆ ನಿಮ್ಮ ಮನಸ್ಸಿನಲ್ಲಿಯೇ ಪರಿಹಾರವಿದೆ. ಆದ್ದರಿಂದ ಎಲ್ಲರೂ ಸಂತೋಷವಾಗಿರಿ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಶರದ್ ಜೋಶಿ ಕವಿತೆ ಉಲ್ಲೇಖ

ರಾಜಸ್ಥಾನ ವಿಧಾನಸಭೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾರ್ವಜನಿಕ ನಿರೀಕ್ಷೆ ಕುರಿತ ಸೆಮಿನಾರ್ ಉದ್ದೇಶಿಸಿ ಅವರು ಮಾತನಾಡಿದರು. ನಾನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗಲೂ, ಅಸಮಾಧಾನವಿಲ್ಲದ ಯಾವುದೇ ವ್ಯಕ್ತಿಯನ್ನು, ಸಾರ್ವಜನಿಕರ ಪ್ರತಿನಿಧಿಯನ್ನೂ ಕಾಣಲಿಲ್ಲ.

ಗಡ್ಕರಿ, ಹಾಸ್ಯನಟ ಶರದ್ ಜೋಶಿಯವರ ಕವಿತೆ ಉದಾಹರಣೆ ನೀಡಿ ಮಾತನಾಡಿದರು. ‘ರಾಜ್ಯಕ್ಕೆ ಉಪಯೋಗವಿಲ್ಲದವರನ್ನು ದೆಹಲಿಗೆ ಕಳುಹಿಸಲಾಗಿದೆ, ದೆಹಲಿಗೆ ಉಪಯೋಗವಿಲ್ಲದವರನ್ನು ರಾಜ್ಯಪಾಲರನ್ನಾಗಿ ಮಾಡಲಾಗಿದೆ ಮತ್ತು ರಾಜ್ಯಪಾಲರಾಗಲು ಸಾಧ್ಯವಾಗದವರನ್ನು ರಾಯಭಾರಿಯನ್ನಾಗಿ ಮಾಡಲಾಗಿದೆ’ ಎಂದು ಹೇಳಲಾಗಿದೆ. ಇದು ಪ್ರಸ್ತುತ ವ್ಯವಸ್ಥೆಗೆ ಈ ಕವಿತೆ ಕೈಗನ್ನಡಿಯಾಗಿದೆ ಎಂದರು.

‘ಪಡೆದಿದ್ದರಲ್ಲಿ ತೃಪ್ತಿಯಿದೆ’

ನಾನು ಪಡೆದಿದ್ದರಲ್ಲಿ ನನಗೆ ತೃಪ್ತಿಯಿರುವುದರಿಂದ ನಾನು ಯಾವಾಗಲೂ ಸಂತೋಷವಾಗಿರುತ್ತೇನೆ. ಭವಿಷ್ಯದ ಬಗ್ಗೆ ಚಿಂತಿಸದೇ, ಪ್ರಸ್ತುತ ಕ್ಷಣಗಳನ್ನು ಆನಂದಿಸಬೇಕಿದೆ ಎಂದು ಶಾಸಕರಿಗೆ ಸಲಹೆ ನೀಡಿದರು.

ನಮ್ಮ ದೇಶದ ಪ್ರಜಾಪ್ರಭುತ್ವವು ನಾಲ್ಕು ಸ್ತಂಭಗಳ ಮೇಲೆ ನಿಂತಿದೆ. ಇದರಲ್ಲಿ ನಾಲ್ಕನೇ ಸ್ತಂಭವು ಸಂಸದೀಯ ಪ್ರಜಾಪ್ರಭುತ್ವ. ಅದು ಪ್ರಬಲವಾಗಿದ್ದರೆ ಪ್ರಜಾಪ್ರಭುತ್ವವೂ ಬಲವಾಗಿರುತ್ತದೆ ಎಂದು ಗಡ್ಕರಿ ಹೇಳಿದರು. ಪ್ರಜಾಪ್ರಭುತ್ವದ ನಿಜವಾದ ಉದ್ದೇಶ ಎಂದರೆ ಸಮಾಜದ ಕಟ್ಟಕಡೆಯಲ್ಲಿರುವ ವ್ಯಕ್ತಿಯ ಜೀವನವನ್ನೂ ಸುಧಾರಿಸುವುದು. ಅದು ರಾಜಕೀಯದ ಉದ್ದೇಶವೂ ಆಗಿರಬೇಕು. ಆದರೆ, ಇಂದಿನ ದಿನಗಳಲ್ಲಿ ರಾಜಕೀಯದ ಅರ್ಥವನ್ನು ಶಕ್ತಿಯ ಅಂಶದಿಂದ ಮಾತ್ರ ಅರ್ಥಮಾಡಿಕೊಳ್ಳುವುದು ದುರದೃಷ್ಟಕರ.

ನಮ್ಮ ನಡವಳಿಕೆ ಮೇಲೆ ಪ್ರಜಾಪ್ರಭುತ್ವದ ಭವಿಷ್ಯ

ನಮ್ಮ ನಡವಳಿಕೆಯು ದೇಶದ ಪ್ರಜಾಪ್ರಭುತ್ವದ ಭವಿಷ್ಯವನ್ನು ನಿರ್ಧರಿಸುತ್ತದೆ. ನಾವು ಎಷ್ಟು ಉತ್ತಮವಾಗಿರುತ್ತೇವೆಯೋ ನಮ್ಮ ಪ್ರಜಾಪ್ರಭುತ್ವವೂ ಅಷ್ಟೇ ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ನಮ್ಮ ಸಿದ್ಧಾಂತವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಆ ಮೂಲಕ ದೇಶದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಮಾಡಬಹುದು ಎಂದರು.

‘ಕೇಂದ್ರ ಮತ್ತು ರಾಜ್ಯದ ಕೆಲಸ ಸಂವಿಧಾನದಲ್ಲಿ ಸ್ಪಷ್ಟವಾಗಿದೆ’

ನಮ್ಮ ದೇಶದ ಸಂವಿಧಾನದಲ್ಲಿ ರಾಜ್ಯ ಯಾವ್ಯಾವ ಕೆಲಸಗಳನ್ನು ಮಾಡಬೇಕು. ಕೇಂದ್ರ ಸರ್ಕಾರ ಯಾವ್ಯಾವ ಕೆಲಸ ಮಾಡಬೇಕು, ಕೇಂದ್ರ - ರಾಜ್ಯ ಸರ್ಕಾರಗಳು ಸೇರಿ ಮಾಡಬೇಕಾದ ಕೆಲಸವೇನು ಅನ್ನೋದು ಸ್ಪಷ್ಟವಾಗಿ ಉಲ್ಲೇಖವಾಗಿದೆ ಎಂದು ಹೇಳಿದರು.

‘ಕೆಲವು ಗ್ರಾಮಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲ’

ಮಹಾತ್ಮ ಗಾಂಧಿ ದೇಶದ ಆತ್ಮ ಹಳ್ಳಿಗಳಲ್ಲಿ ನೆಲೆಸಿದೆ ಎಂದು ಹೇಳುತ್ತಿದ್ದರು. ಇಲ್ಲಿಯವರೆಗೆ ಶೇಕಡಾ 85 ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಆದರೆ, ಈಗ ಗ್ರಾಮಗಳಲ್ಲಿ ಮೂಲ ಸೌಕರ್ಯವಿಲ್ಲದ ಕಾರಣ ಎಲ್ಲರೂ ನಗರಗಳತ್ತ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಎಲ್ಲಿವರೆಗೆ ಮೂಲ ಸೌಕರ್ಯಗಳ ವ್ಯವಸ್ಥೆ ಆಗುವುದಿಲ್ಲವೋ, ಆವರೆಗೆ ಗ್ರಾಮಗಳ ಅಭಿವೃದ್ಧಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಾದ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಗಡ್ಕರಿ ಹೇಳಿದರು.

ಪಂಚಾಯಿತಿ ಎಲೆಕ್ಷನ್​ ಭಾರಿ ಹಣ ಪೋಲು

ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಭಾರಿ ಹಣ ವೆಚ್ಚವಾಗುತ್ತಿದೆ. ಸಣ್ಣ ಸಣ್ಣ ಚುನಾವಣೆಗಳಲ್ಲಿ ಹಣ ಪೋಲಾಗುತ್ತಿರುವ ವಿಧಾನ ನಿಲ್ಲಿಸುವುದು ಬಹಳ ಮುಖವಾಗಿದೆ. ವಿಧಾನಸಭಾ, ಲೋಕಸಭಾ ಚುನಾವಣೆಗಳಿಗಿಂತ ಹೆಚ್ಚು ಹಣ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ವ್ಯಯಿಸಲಾಗುತ್ತಿದೆ. ಇದನ್ನು ತಡೆಯುವುದು ಬಹಳ ಮುಖ್ಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.