ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ಕಸ್ಟಮ್ಸ್ ಸುಂಕದಲ್ಲಿ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದಾರೆ. ಇದು ಕೆಲವು ಅಗತ್ಯ ವಸ್ತುಗಳ ಬೆಲೆಗಳನ್ನು ಪರಿಣಾಮಕಾರಿಯಾಗಿ ಏರಿಸುತ್ತದೆ ಹಾಗೂ ಕೆಲವು ವಸ್ತುಗಳ ಬೆಲೆಯನ್ನು ಇಳಿಸುತ್ತದೆ.
ಯಾವುದು ಅಗ್ಗ?
- ಚಿನ್ನ - ವಜ್ರಾಭರಣ : ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5ಕ್ಕೆ ಕಡಿಮೆ ಮಾಡಲಾಗಿದೆ. ಹೀಗಾಗಿ, ಚಿನ್ನ ಮತ್ತು ವಜ್ರಾಭರಣದ ಬೆಲೆ ಕಡಿಮೆ ಆಗುವ ಸಾಧ್ಯತೆ ಹೆಚ್ಚಿದೆ.
- ಎಲೆಕ್ಟ್ರಾನಿಕ್ ವಸ್ತುಗಳು : ಮೊಬೈಲ್ ಬಿಡಿಭಾಗಗಳ ಮೇಲಿನ ಬೆಲೆ ಕಡಿಮೆ ಮಾಡಲಾಗಿದ್ದು, ಫೋನ್ ಚಾರ್ಚರ್, ಟ್ರಾನ್ಸ್ಫಾರ್ಮರ್ಗಳ ಮೇಲೆ ಅಬಕಾರಿ ಸುಂಕ ರಿಯಾಯಿತಿ ನೀಡಲಾಗಿದೆ. ಹೀಗಾಗಿ, ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ದರ ಇಳಿಕೆಯಾಗುವ ಸಾಧ್ಯತೆಯಿದೆ.
- ರಾಸಾಯನಿಕಗಳು - ಮೆಥಾನಲ್ ಮೇಲಿನ ಅಬಕಾರಿ ಸುಂಕ ಇಳಿಕೆ
- ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು
- ಕೃಷಿ ಉಪಕರಗಳು
- ವಿದೇಶಿ ಉತ್ಪನ್ನಗಳು
ಇದನ್ನೂ ಓದಿ:ಡಿಜಿಟಲ್ ವಸ್ತುಗಳ ಆಮದಿನ ಮೇಲೆ ಶೇ.30 ಕಸ್ಟಮ್ಸ್ ಸುಂಕ.. ಹೆಚ್ಚಲಿದೆ ಮೊಬೈಲ್, ಟಿವಿ ಬೆಲೆ
ಯಾವುದು ದುಬಾರಿ?
- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಸುಂಕವನ್ನು ಶೇಕಡಾ 20ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ, ಅದರಡಿ ಉತ್ಪಾದನೆಯಾಗುವ ವಸ್ತುಗಳ ಬೆಲೆ ಹೆಚ್ಚಾಗಲಿದೆ.
- ವರ್ಚುವಲ್ ಡಿಜಿಟಲ್ ಸಂಪತ್ತಿನ ಮೇಲೆ ಶೇ.30 ಕಸ್ಟಮ್ಸ್ ಸುಂಕ
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ