ETV Bharat / bharat

ಏಕರೂಪ ನಾಗರಿಕ ಸಂಹಿತೆ ಹಿಂದೂ ರಾಷ್ಟ್ರ ಪರಿಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ: ಅಮರ್ತ್ಯ ಸೇನ್

ಭಾರತದಲ್ಲಿ ಸದ್ಯಕ್ಕೆ ಏಕರೂಪ ನಾಗರಿಕ ಸಂಹಿತೆ ಚರ್ಚೆಯ ಹಾಟ್‌ ಟಾಪಿಕ್ ಆಗಿದೆ. ಈ ಕುರಿತು ನೊಬೆಲ್​ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನೋಬೆಲ್​ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್
ನೋಬೆಲ್​ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್
author img

By

Published : Jul 6, 2023, 11:42 AM IST

ಶಾಂತಿನಿಕೇತನ (ಪಶ್ಚಿಮ ಬಂಗಾಳ): ಮುಂಬರುವ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹೊತ್ತಲ್ಲಿ ಕೇಂದ್ರ ಬಿಜೆಪಿ ಸರ್ಕಾರ 'ಏಕರೂಪ ನಾಗರಿಕ ಸಂಹಿತೆ' (ಯುಸಿಸಿ) ಜಾರಿಗೆ ಉತ್ಸುಕತೆ ತೋರಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ನೊಬೆಲ್​ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರು ಬುಧವಾರ ಮಾತನಾಡಿ, "ಏಕರೂಪ ನಾಗರಿಕ ಸಂಹಿತೆ ಕ್ಲಿಷ್ಟಕರವಾಗಿದೆ. ಅದರ ನಿಯಮಗಳನ್ನು ಸರಳಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು 'ಹಿಂದೂ ರಾಷ್ಟ್ರ'ದ ಪರಿಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ" ಎಂದರು.

"ಏಕರೂಪ ನಾಗರಿಕ ಸಂಹಿತೆ ಜಾರಿ ವಿಷಯದಲ್ಲಿ ವಿಳಂಬ ಸರಿಯಲ್ಲ ಎಂಬ ವಿಚಾರವನ್ನು ನಾನು ಪತ್ರಿಕೆಯಲ್ಲಿ ಓದಿದೆ. ಆದರೆ ಯುಸಿಸಿಯಂತಹ ಅಸಂಬದ್ಧ ಪರಿಕಲ್ಪನೆ ಎಲ್ಲಿಂದ ಬಂದಿದೆ ಎಂಬುದು ನನಗೆ ತಿಳಿದಿಲ್ಲ. ಭಾರತದ ಪ್ರಗತಿಗೆ ಕೇವಲ 'ಹಿಂದೂ ರಾಷ್ಟ್ರ' ಏಕೈಕ ಮಾರ್ಗವಲ್ಲ. ಏಕರೂಪ ನಾಗರಿಕ ಸಂಹಿತೆ ಕಾಯ್ದೆಯ ಮೂಲಕ ಹಿಂದೂ ಧರ್ಮವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಯುಸಿಸಿಯಲ್ಲಿ ಲೋಪವಿದೆ. ಹಿಂದೂ ರಾಷ್ಟ್ರದ ಹಾದಿಯನ್ನು ಸುಗಮಗೊಳಿಸುವ ಉಪಾಯವಿದು" ಎಂದು ಸೇನ್ ದೂರಿದರು.

"ಏಕರೂಪದ ನಾಗರಿಕ ಸಂಹಿತೆ ದೇಶದಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ ಎಲ್ಲರಿಗೂ ಒಂದೇ ನಿಯಮ ಜಾರಿಗೆ ತರುವ ಉದ್ದೇಶ ಹೊಂದಿದೆ. ಈ ಉದ್ದೇಶ ಈಡೇರಿಕೆಗೆ ಯುಸಿಸಿ ಎಂಬ ಕಾಯ್ದೆಯ ಅಗತ್ಯವಿಲ್ಲ. ಭಾರತೀಯರಾದ ನಮ್ಮಲ್ಲಿರುವ ಭಿನ್ನಭಿಪ್ರಾಯ, ಧರ್ಮಗಳಲ್ಲಿರುವ ವ್ಯತ್ಯಾಸ, ನಿಯಮ-ಪದ್ಧತಿಗಳಲ್ಲಿರುವ ವ್ಯತ್ಯಾಸವನ್ನೆಲ್ಲ ನಾವೇ ತೊಲಗಿಸಿ ಒಗ್ಗಟ್ಟಾಗಿರಬೇಕು" ಎಂದು ತಿಳಿಸಿದರು.

ಮುಂದುವರೆದು ಮಾತನಾಡಿ, "ನಾವು ಸಾವಿರಾರು ವರ್ಷಗಳಿಂದ ಇದೇ ಕಲ್ಪನೆಯಲ್ಲಿ ಇದ್ದೇವೆ. ಈಗ ಏಕರೂಪ ನಾಗರಿಕ ಸಂಹಿತೆ ಎಂಬ ಕಲ್ಪನೆಯನ್ನು ಹೊಸದಾಗಿ ಪರಿಚಯಿಸುವುದರಿಂದ ಯಾರಿಗೆ ಲಾಭವಾಗುತ್ತದೆ ಎಂದು ನಾವು ಮೊದಲು ಯೋಚಿಸಬೇಕು" ಎಂದು ಟೀಕಿಸಿದರು.

ಏನಿದು ಏಕರೂಪದ ನಾಗರಿಕ ಸಂಹಿತೆ?: ಏಕರೂಪ ನಾಗರಿಕ ಸಂಹಿತೆಯು ದೇಶದ ಎಲ್ಲ ಜನರಿಗೆ ಅನ್ವಯಿಸುವ ಕಾನೂನು. ಪ್ರಸ್ತುತ ದೇಶದಲ್ಲಿ ವಿವಿಧ ಧರ್ಮಗಳು ವಿವಾಹ, ವಿಚ್ಛೇದನ, ಉತ್ತರದಾಯಿತ್ವ, ಆಸ್ತಿ ಹಕ್ಕು ಮೊದಲಾದ ವಿಚಾರಗಳಲ್ಲಿ ತಮ್ಮದೇ ಆದ ಪ್ರತ್ಯೇಕ ವೈಯಕ್ತಿಕ ಕಾನೂನು ಹೊಂದಿವೆ. ಇವು ಎಲ್ಲರಿಗೂ ಸಮಾನ ಹಕ್ಕು ಕಲ್ಪಿಸಿಲ್ಲ. ಹೀಗಾಗಿ ಇದನ್ನು ತೊಡೆದು ಹಾಕಿ ದೇಶದಲ್ಲಿ ಎಲ್ಲ ಜಾತಿ, ಧರ್ಮದವರನ್ನು ಒಂದೇ ಕಾನೂನಿನಡಿ ತರುವ ಪ್ರಯತ್ನವೇ ಏಕರೂಪದ ನಾಗರಿಕ ಸಂಹಿತೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧ: ಬುಧವಾರ ಏಕರೂಪ ನಾಗರಿಕ ಸಂಹಿತೆಯ ಕುರಿತು ಸಿದ್ಧಪಡಿಸಲಾದ ಕರಡು ಬಗ್ಗೆ ಚರ್ಚಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಆನ್‌ಲೈನ್ ಮೂಲಕ ಸದಸ್ಯರ ಸಭೆ ನಡೆಸಿತು. ಸಭೆಯ ಬಳಿಕ ಮಂಡಳಿಯ ನೂತನ ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಏಕರೂಪ ನಾಗರಿಕ ಸಂಹಿತೆಯು ವಿವಿಧ ಧರ್ಮಗಳು, ಸಂಸ್ಕೃತಿ ಹಾಗೂ ಧಾರ್ಮಿಕ ಹಾಗು ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ನೋಯಿಸುತ್ತಿದೆ. ಹೀಗಾಗಿ ವಿರೋಧಿಸಬೇಕೆಂದು ಕರೆ ನೀಡಿದೆ.

ಉತ್ತರಾಖಂಡ ಯುಸಿಸಿ ಜಾರಿಗೆ ತರುವ ಮೊದಲ ರಾಜ್ಯ?: ಜುಲೈ 4ರಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ಕರಡು ಸಮಿತಿಯ ಅಧ್ಯಕ್ಷೆ ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಅವರ ತಂಡ ಸಿದ್ಧಪಡಿಸಿರುವ ಯುಸಿಸಿ ಕರಡು ಕುರಿತು ಸಿಎಂ ಧಾಮಿ ಅವರು ಮೋದಿಗೆ ವಿವರವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಶೀಘ್ರದಲ್ಲೇ ಉತ್ತರಾಖಂಡವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ದೇಶದ ಮೊದಲ ರಾಜ್ಯವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇನ್ನು ಯುಸಿಸಿ (Uniform Civil Code) ವಿಚಾರ ಕುರಿತು ಪ್ರಧಾನಿ ನರೇಂದ್ರ ಮೋದಿಯವರು, ದೇಶದಲ್ಲಿ 2 ಕಾನೂನು ಯಾಕೆ? ಒಂದು ದೇಶದಲ್ಲಿ ಎರಡು ಕಾನೂನುಗಳು ಕಾರ್ಯನಿರ್ವಹಿಸುವುದು ತರವಲ್ಲ. ದೇಶವೆಂಬುದು ಒಂದು ಕುಟುಂಬ. ಅದರಲ್ಲಿ ಒಬ್ಬರಿಗೆ ಒಂದು ಕಾನೂನು, ಉಳಿದವರಿಗೆ ಇನ್ನೊಂದು ಕಾನೂನು ಅನ್ವಯಿಸಲು ಸಾಧ್ಯವಿಲ್ಲ. ವಿಪಕ್ಷಗಳು ಮುಸ್ಲಿಮರನ್ನು ಬೇಕಂತಲೇ ಎತ್ತಿಕಟ್ಟುತ್ತಿವೆ. ಎರಡೆರಡು ಕಾನೂನುಗಳನ್ನು ಇಟ್ಟುಕೊಂಡು ದೇಶ ಮುನ್ನಡೆಸಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ಈ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿ ಖಚಿತ ಎಂಬ ಸುಳಿವನ್ನು ಪ್ರಧಾನಿ ನೀಡಿದ್ದಾರೆ. ಯಾವಾಗ ಬಿಜೆಪಿ ಈ ನಿಯಮ ಜಾರಿಗೆ ತರುವ ಪ್ರಯತ್ನ ಶುರು ಮಾಡಿತೋ ವಿಪಕ್ಷಗಳು ತಮ್ಮ ಹೇಳಿಕೆಗಳ ಮೂಲಕ ವಿರೋಧ ವ್ಯಕ್ತಪಡಿಸಲು ಪ್ರಾರಂಭಿಸಿದವು.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ವಿರೋಧಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.