ETV Bharat / bharat

ದೇಶದೆಲ್ಲೆಡೆ ಕುಟುಂಬ ರಾಜಕಾರಣವಿರುವಾಗ 'ಬಿಹಾರ'ವೇ ಹೆಚ್ಚು ಗೋಚರವಾಗುವುದೇಕೆ ಗೊತ್ತೇ!

ಬಿಹಾರದಲ್ಲಿ ಕುಟುಂಬ ರಾಜಕಾರಣ ಹೊಸತಲ್ಲ. ಬಿಹಾರದಲ್ಲಿ ಕುಟುಂಬ ರಾಜಕಾರಣ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಅನೇಕ ಉದಾಹರಣೆಗಳು ಸಾಬೀತುಪಡಿಸುತ್ತವೆ. ಲಾಲೂ ಪ್ರಸಾದ್ ಯಾದವ್​ ಅವರ ಕುಟುಂಬ ಬಿಹಾರದ ಕುಟುಂಬ ರಾಜಕಾರಣಕ್ಕೆ ಅತ್ಯುತ್ತಮ ಉದಾಹರಣೆ. ಲಾಲೂ ಅವರ ಪತ್ನಿ ರಾಬ್ರಿ ದೇವಿ, ಇಬ್ಬರು ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಪ್ರಸಾದ್ ಯಾದವ್, ಮಗಳು ಮಿಸಾ ಭಾರತ್ ಮತ್ತು ಇಬ್ಬರು ಸಹೋದರರಾದ ಸಾಧು ಯಾದವ್ ಮತ್ತು ಸುಭಾಷ್ ಯಾದವ್ ಅವರು ರಾಜಕೀಯದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರು.

dynasty politics
ಕುಟುಂಬ ರಾಜಕಾರಣ
author img

By

Published : Jun 21, 2021, 8:51 PM IST

ಪಾಟ್ನಾ: ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ವಿಭಜನೆಯತ್ತ ತೆರಳುತ್ತಿದ್ದಂತೆ ಬಿಹಾರ ರಾಜಕೀಯದಲ್ಲಿ ಗೊಂದಲ ಉಂಟಾಗಿದೆ. ಇನ್ನು ದೇಶದೆಲ್ಲೆಡೆ ಕುಟುಂಬ ರಾಜಕಾರಣ ಇದ್ದಾಗ ಬಿಹಾರದಲ್ಲಿ ಮಾತ್ರವೇ ನೆಲೆಯೂರಿದೆ ಎನ್ನುವುದು ತಪ್ಪಾಗುತ್ತದೆ.

ಬಿಹಾರದಲ್ಲಿ ಕುಟುಂಬ ರಾಜಕಾರಣವು ಹೊಸತಲ್ಲ. ಬಿಹಾರದಲ್ಲಿ ಕುಟುಂಬ ರಾಜಕಾರಣ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಅನೇಕ ಉದಾಹರಣೆಗಳು ಸಾಬೀತುಪಡಿಸುತ್ತವೆ. ಲಾಲೂ ಪ್ರಸಾದ್ ಯಾದವ್​ ಅವರ ಕುಟುಂಬ ಬಿಹಾರದ ಕುಟುಂಬ ರಾಜಕಾರಣಕ್ಕೆ ಅತ್ಯುತ್ತಮ ಉದಾಹರಣೆ.

ಲಾಲೂ ಅವರ ಪತ್ನಿ ರಾಬ್ರಿ ದೇವಿ, ಇಬ್ಬರು ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಪ್ರಸಾದ್ ಯಾದವ್, ಮಗಳು ಮಿಸಾ ಭಾರತ್ ಮತ್ತು ಇಬ್ಬರು ಸಹೋದರರಾದ ಸಾಧು ಯಾದವ್ ಮತ್ತು ಸುಭಾಷ್ ಯಾದವ್ ಅವರು ರಾಜಕೀಯದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರು.

ದಲಿತ ಮುಖಂಡ ಮತ್ತು ದಿವಂಗತ ಜಗ್ಜೀವನ್ ರಾಮ್ ಅವರು ಒಮ್ಮೆ ಕೇಂದ್ರ ಸಚಿವರೂ ಆಗಿದ್ದರು. ಅವರ ಮಗಳು ಮೀರಾ ಕುಮಾರ್ ಕೂಡ ಲೋಕಸಭಾ ಸದಸ್ಯರಾಗಿದ್ದರು. ಬಳಿಕ ಸ್ಪೀಕರ್​ ಆಗಿ ಮುಂದುವರೆಯುತ್ತಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಜಗನ್ನಾಥ್ ಮಿಶ್ರಾ ಅವರ ಪುತ್ರ ನಿತೀಶ್ ಮಿಶ್ರಾ ಅವರು ಸಹ ಒಂದೊಮ್ಮೆ ಮಂತ್ರ ಸ್ಥಾನ ಅಲಂಕರಿಸಿದ್ದರು.

ಅದೇ ರೀತಿ ಮಾಜಿ ಸಿಎಂ ಭಗವತ್ ಝಾ ಆಜಾದ್ ಅವರ ಪುತ್ರ ಕೃತಿ ಆಜಾದ್ ಸಹ ದರ್ಭಂಗ ಸಂಸದರಾಗಿದ್ದರು. ಮಾಜಿ ಸಚಿವ ನರೇಂದ್ರ ಸಿಂಗ್ ಅವರ ಇಬ್ಬರು ಪುತ್ರರಾದ ಅಜಯ್ ಪ್ರತಾಪ್ ಮತ್ತು ಸುಮಿತ್ ಸಿಂಗ್ ಒಂದು ಕಾಲದಲ್ಲಿ ಶಾಸಕರಾಗಿದ್ದರು.

ಪ್ರಸ್ತುತ ನರೇಂದ್ರ ಅವರ ಕಿರಿಯ ಮಗ ಸುಮಿತ್ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಅದೇ ರೀತಿ ಮಾಜಿ ಸಿಎಂ ಜಿತಾನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಇವೆಲ್ಲವೂ ಕುಟುಂಬ ರಾಜಕಾರಣ ಮುಖ್ಯವಾಗಿ ಬಿಹಾರದಲ್ಲಿ ನಡೆದ ರಾಜಕೀಯ ಸಂಗತಿಗಳಾಗಿವೆ.

ಬಿಹಾರದಲ್ಲಿ ಈಗ ಎಲ್​ಜೆಪಿ ಬಿಕ್ಕಟ್ಟಿನದ್ದೇ ಸದ್ದು

ಬಿಹಾರದಲ್ಲಿ ಕುಟುಂಬ ರಾಜಕೀಯದ ಚರ್ಚೆಯು ಪ್ರಚಲಿತವಾಗಿದೆ. ಏಕೆಂದರೆ ಕಳೆದ ವಾರ ಎಲ್​ಜೆಪಿಯಲ್ಲಿ ರಾಜಕೀಯ ನಾಟಕ ನಡೆದಾಗಿನಿಂದಲೂ ಕುಟುಂಬ ರಾಜಕಾರಣವು ಎಲ್ಲೆಡೆ ಮಾತಾಗಿ ಮಾರ್ಪಟ್ಟಿದೆ. ನೆಹರೂ-ಗಾಂಧಿ ಕುಟುಂಬವನ್ನು ಕುಟುಂಬ ರಾಜಕಾರಣದ ಪ್ರವರ್ತಕ ಎಂದು ಪರಿಗಣಿಸಲಾಗುತ್ತದೆ. ಆದರೆ ಅದು ಕಾಂಗ್ರೆಸ್ ಮಾತ್ರವಲ್ಲಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟರು.

ದೇಶಾದ್ಯಂತ ಕುಟುಂಬ ರಾಜಕಾರಣದ ಛಾಯೆ

ಪಾಟ್ನಾ ಮೂಲದ ರಾಜಕೀಯ ತಜ್ಞ ಡಾ.ಸಂಜಯ್ ಕುಮಾರ್ ಈ ಬಗ್ಗೆ ಮಾತನಾಡಿ “ಕುಟುಂಬ ರಾಜಕೀಯವು ಗೋಚರಿಸುವ ಪ್ಯಾನ್ ಇಂಡಿಯಾ. ನೀವು ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಕುಟುಂಬ, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬ, ಕರ್ನಾಟಕದ ಹೆಚ್​ಡಿ ದೇವೇಗೌಡರ ಕುಟುಂಬ, ಮಧ್ಯಪ್ರದೇಶದ ಸಿಂಧಿಯಾ ಕುಟುಂಬ, ಮಹಾರಾಷ್ಟ್ರದ ಠಾಕ್ರೆ ಕುಟುಂಬ, ರಾಜಸ್ಥಾನದ ರಾಜೇ ಕುಟುಂಬ, ತಮಿಳುನಾಡಿನ ಕರುಣಾನಿಧಿ ಕುಟುಂಬ ಮತ್ತು ಹೀಗೆ ಇನ್ನೂ ಅನೇಕರು ಇದ್ದಾರೆ. ಆದ್ದರಿಂದ ರಾಜಕಾರಣಿಗಳ ಮಕ್ಕಳನ್ನು ರಾಜಕೀಯದಲ್ಲಿ ಉತ್ತೇಜಿಸಬೇಕೇ ಅಥವಾ ಹೊಸ ಯುವ ಮುಖಗಳನ್ನು ಬಯಸಬೇಕೆ ಎಂಬುದು ಜನರು ನಿರ್ಧರಿಸಬೇಕು. ಜನರು ಅವರ ಪರವಾಗಿ ಮತ ಚಲಾಯಿಸುವುದನ್ನು ನಿಲ್ಲಿಸಿದರೆ, ಕುಟುಂಬ ರಾಜಕೀಯವು ಕೊನೆಗೊಳ್ಳುತ್ತದೆ” ಎಂದು ಹೇಳಿದರು.

“ಚಿರಾಗ್ ಪಾಸ್ವಾನ್ ಮತ್ತು ಲಾಲು ಕುಟುಂಬವನ್ನು ಮಾತ್ರ ಏಕೆ ದೂಷಿಸುತ್ತಾರೆ. ಕುಟುಂಬ ರಾಜಕೀಯವು ಎಲ್ಲೆಡೆ ಗೋಚರಿಸುತ್ತದೆ. ಮತದಾರರೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪಕ್ಷದ ಉನ್ನತ ನಾಯಕರು ಬೇರೆಯವರನ್ನು ನಂಬಲು ಸಾಧ್ಯವಿಲ್ಲ. ನಾಯಕರ ಮನಸ್ಥಿತಿಯಲ್ಲಿ ಬದಲಾವಣೆ ತರಬೇಕಾದ ಅವಶ್ಯಕತೆಯಿದೆ" ಎಂದರು.

"ವೈದ್ಯರ ಮಗ ವೈದ್ಯರಾಗಲು ಸಾಧ್ಯವಾದರೆ, ಇಂಜಿನಿಯರ್ ಮಗ ಎಂಜಿನಿಯರ್ ಆದರೆ, ರಾಜಕಾರಣಿಯ ಮಗ ಏಕೆ ರಾಜಕಾರಣಿಯಾಗಲು ಸಾಧ್ಯವಿಲ್ಲ" ಎಂದು ಲಾಲೂ ಒಮ್ಮೆ ಕುಟುಂಬ ರಾಜಕೀಯವನ್ನು ಸಮರ್ಥಿಸಿಕೊಂಡಿದ್ದರು. ಮತ್ತೊಮ್ಮೆ ಲಾಲೂ ಮತ್ತು ಪಾಸ್ವಾನ್ ಕುಟುಂಬವು ಬಿಹಾರದಲ್ಲಿ ಕುಟುಂಬ ರಾಜಕೀಯವನ್ನು ಬೆಂಬಲಿಸುವ ಟೀಕೆಗಳನ್ನು ಎದುರಿಸಬೇಕಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.