ETV Bharat / bharat

ಭೀಕರ ರಸ್ತೆ ಅಪಘಾತ: ದೇವಸ್ಥಾನಕ್ಕೆ ಬಂದಿದ್ದ ಎಂಟು ಜನರ ದುರ್ಮರಣ - ರಾಜಸ್ಥಾನದ ಸಿಕರ್​ ಜಿಲ್ಲೆ

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ-ಪಿಕಪ್ ವಾಹನ ಮತ್ತು ಲಾರಿ ನಡುವೆ ಡಿಕ್ಕಿ-ದೇವಸ್ಥಾನಕ್ಕೆ ಬಂದಿದ್ದ ಎಂಟು ಜನರ ದುರ್ಮರಣ

Etv Bharat
Etv Bharat
author img

By

Published : Jan 1, 2023, 5:41 PM IST

ಸಿಕರ್ (ರಾಜಸ್ಥಾನ): ರಾಜಸ್ಥಾನದ ಸಿಕರ್​ ಜಿಲ್ಲೆಯ ಖಂಡೇಲಾ ಪ್ರದೇಶದಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ನಡೆದಿದ್ದು, ಎಂಟು ಜನರು ಸಾವಿಗೀಡಾಗಿದ್ದಾರೆ. ಪಿಕಪ್ ವಾಹನ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ.

ಇಲ್ಲಿನ ಖಂಡೇಲಾ-ಪಲ್ಸಾನಾ ರಸ್ತೆಯಲ್ಲಿ ಪಿಕಪ್​ ವಾಹನವು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದಾದ ಬಳಿಕ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಪರಿಣಾಮ ಈ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಅಪಘಾತದಲ್ಲಿ ಮೃತಪಟ್ಟವರನ್ನು ಸಮೋದ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಪಿಕಪ್​ ವಾಹನದಲ್ಲಿ ಎಲ್ಲರೂ ಖಂಡೇಲಾದ ದೇವಸ್ಥಾನಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಎಂಟು ಜನರ ಪೈಕಿ ಇಬ್ಬರ ಮೃತದೇಹಗಳನ್ನು ಖಂಡೇಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಇತರ ಆರು ಜನರ ಮೃತ ದೇಹಗಳನ್ನು ಪಲ್ಸಾನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಖಂಡೇಲಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೋಹನ್‌ಲಾಲ್ ಮಾಹಿತಿ ನೀಡಿದ್ದಾರೆ.

ಅಲ್ಲದೇ, ಈ ಘಟನೆಯಲ್ಲಿ ಇತರರು ಸಹ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಪಲ್ಸಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ಸಹ ದಾಖಲಾಗಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಕಮರಿಗೆ ಬಿದ್ದ ಟೂರಿಸ್ಟ್​​ ಬಸ್​​: ಓರ್ವ ವಿದ್ಯಾರ್ಥಿ ಸಾವು, 40 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.