ETV Bharat / bharat

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್‌.. ಭಾರಿ ಪ್ರಮಾಣದ ನಗದು, ಚಿನ್ನಾಭರಣ ವಶ - ನಗದು ಹಾಗೂ ಚಿನ್ನಾಭರಣಗಳ ವಶ

ತೆಲಂಗಾಣದಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್​ವೋರ್ವರಿಂದ 34.40 ಲಕ್ಷ ರೂ. ನಗದು, ಮತ್ತು 9.13 ಲಕ್ಷ ರೂ.ಗಳ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

bribe case
ಲಂಚ ಪ್ರಕರಣ
author img

By

Published : Nov 26, 2020, 7:38 AM IST

Updated : Nov 26, 2020, 7:47 AM IST

ಹೈದರಾಬಾದ್​​ (ತೆಲಂಗಾಣ) : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್​​ ಇನ್ಸ್​ಪೆಕ್ಟರ್​​ವೋರ್ವರ ಬ್ಯಾಂಕ್​​ ಲಾಕರ್​​ನಿಂದ ಬರೋಬ್ಬರಿ 34.40 ಲಕ್ಷ ರೂ. ನಗದು ಹಾಗೂ 9.13 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ತೆಲಂಗಾಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ಸ್​ಪೆಕ್ಟರ್ ಇಂದೂರ್ ಜಗದೀಶ್​ ಹಾಗೂ ಈತನ ಸಹಾಯಕ ಎಂ.ಸುಜಯ್ ಬಂಧಿತ ಆರೋಪಿಗಳು. ನವೆಂಬರ್ 20 ರಂದು ಅಧಿಕಾರಿ ಜಗದೀಶ್ ದೂರುದಾರರಿಂದ 5 ಲಕ್ಷ ರೂ. ಲಂಚ ನೀಡುವಂತೆ ಒತ್ತಾಯಿಸಿದ್ದು, ಈ ಸಂಬಂಧ 1988ರ ಭ್ರಷ್ಟಾಚಾರ ತಡೆ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿವಾರ್​ ಅಬ್ಬರ: ಚಂಡಮಾರುತಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಆರೋಪಿ ಅಧಿಕಾರಿ ಹಾಗೂ ಈತನ ಪತ್ನಿ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್​ನ ಲಾಕರ್​ ಅನ್ನು ತೆರೆಯಲಾಗಿದೆ. ಇದರಲ್ಲಿ ನಿವ್ವಳ ನಗದು 34,40,200 ಹಾಗೂ 182.56 ಗ್ರಾಂ. ಚಿನ್ನದ ಮತ್ತು 157 ಗ್ರಾಂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ ಎನ್ನಲಾಗ್ತಿದೆ. ಆಸ್ತಿ ದಾಖಲೆಗಳು ಸಹ ಕಂಡುಬಂದಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಪ್ರಕರಣ ಸಂಬಂಧ ಇನ್ನೂ ಹಲವು ಪ್ರದೇಶಗಳಲ್ಲಿ ಶೋಧಕಾರ್ಯ ಮುಂದುವರೆದಿದೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

Last Updated : Nov 26, 2020, 7:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.