ETV Bharat / bharat

ಉದಯ್​ಪುರ ಹತ್ಯೆ ಭಯೋತ್ಪಾದಕ ಕೃತ್ಯ ಹೌದೋ, ಅಲ್ಲವೋ ಎಂಬ ಜಿಜ್ಞಾಸೆ

author img

By

Published : Jul 3, 2022, 2:29 PM IST

ಉದಯ್​ಪುರ್​ ಹತ್ಯೆ ಘಟನೆ ಭಯೋತ್ಪಾದಕ ಸಂಚು ಅಲ್ಲ ಎಂದು ರಾಜಸ್ಥಾನ ಗೃಹ ಸಚಿವ ರಾಜೇಂದ್ರ ಯಾದವ್​ ಹೇಳಿಕೆ ನೀಡಿದ್ದಾರೆ.

ಉದಯ್​ಪುರ ಹತ್ಯೆ ಭಯೋತ್ಪಾದಕ ಕೃತ್ಯ ಹೌದೋ, ಅಲ್ಲವೋ ಎಂಬ ಜಿಜ್ಞಾಸೆ
ಉದಯ್​ಪುರ ಹತ್ಯೆ ಭಯೋತ್ಪಾದಕ ಕೃತ್ಯ ಹೌದೋ, ಅಲ್ಲವೋ ಎಂಬ ಜಿಜ್ಞಾಸೆ

ಜೈಪುರ (ರಾಜಸ್ಥಾನ): ಉದಯಪುರ ಹಿಂದು ವ್ಯಕ್ತಿ ಶಿರಚ್ಛೇದ ಘಟನೆ ಭಯೋತ್ಪಾದಕ ದಾಳಿಯೇ ಅಥವಾ ಅಲ್ಲವೇ ಎಂಬ ಬಗ್ಗೆ ಎನ್‌ಐಎ ಮತ್ತು ಎಟಿಎಸ್ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿವೆ. ಎನ್​ಐಎ ತನಿಖೆಯಲ್ಲಿ ಹಂತಕ ಪಾಕಿಸ್ಥಾನದ ಜೊತೆ ಸಂಪರ್ಕ ಹೊಂದಿದ್ದಾನೆ ಎಂದರೆ, ಎಟಿಎಸ್​ ಇದು ಭಯೋತ್ಪಾದಕ ದಾಳಿಯಲ್ಲ ಎಂದಿದೆ. ಈ ಮಧ್ಯೆಯೇ ಗೃಹ ಖಾತೆ ರಾಜ್ಯ ಸಚಿವ ರಾಜೇಂದ್ರ ಯಾದವ್ ಕೂಡ ಇದು ಭಯೋತ್ಪಾದಕ ದಾಳಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಂದ್ರ ಯಾದವ್​, ಘಟನೆಯನ್ನು ಎನ್‌ಐಎ ಭಯೋತ್ಪಾದಕ ದಾಳಿ ಎಂದು ಎಲ್ಲಿಯೂ ಹೇಳಿಕೆ ನೀಡಿಲ್ಲ. ಹಂತಕ ವಿರೋಧ ಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಅವರ ಇರುವ ಫೋಟೋಗಳು ಹರಿದಾಡುತ್ತಿವೆ. ಅವನು ಕಟಾರಿಯಾ ಕ್ಷೇತ್ರದ ಮತಗಟ್ಟೆ ಏಜೆಂಟ್ ಕೂಡ ಆಗಿದ್ದ. ಹೀಗಾಗಿ ಇದು ಭಯೋತ್ಪಾದಕ ದಾಳಿ ಎಂದು ಹೇಳಲಾಗದು ಎಂದಿದ್ದಾರೆ.

ಜನಸಮೂಹದಲ್ಲಿ ಶಾಂತಿ ಕದಡಲು ಉದಯ್‌ಪುರ ಹತ್ಯೆ ಮಾಡಲಾಗಿದೆ. ಬಳಿಕ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಶಾಂತಿ ಕದಡುವ ಷಡ್ಯಂತ್ರ ಮತ್ತು ಯಾವುದೋ ಸಂಚು ರೂಪಿಸಿದ್ದಾರೆ. ಹಂತಕರು ಯಾರದ್ದೋ ಬ್ರೈನ್​ವಾಶ್​ಗೆ ಒಳಗಾಗಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಆರೋಪಿ ಮಹಮ್ಮದ್ ರಿಯಾಜ್ ಬಿಜೆಪಿ ಮುಖಂಡ ಗುಲಾಬ್‌ಚಂದ್ ಕಟಾರಿಯಾ ಅವರ ಪೋಲಿಂಗ್ ಏಜೆಂಟ್ ಎಂದು ಹೇಳಲಾಗಿದೆ. ರಿಯಾಜ್ ಬಿಜೆಪಿ ಅಲ್ಪಸಂಖ್ಯಾತ ಘಟಕದ ಸದಸ್ಯ ಎಂದೂ ತಿಳಿದು ಬಂದಿದೆ. ಪ್ರಕರಣ ತನಿಖೆ ಹಂತದಲ್ಲಿದ್ದು, ಬಿಜೆಪಿ ತಾಳ್ಮೆ ವಹಿಸಬೇಕು. ಪ್ರತಿಭಟನೆ ನಡೆಸುವುದರಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗಲಿದೆ ಎಂದರು.

ಓದಿ: ಮಹಾರಾಷ್ಟ್ರ ವಿಧಾನಸಭೆಗೆ ಬಿಜೆಪಿಯ ರಾಹುಲ್‌ ನಾರ್ವೇಕರ್‌ ಸ್ಪೀಕರ್‌; ಮೊದಲ ಪರೀಕ್ಷೆ ಗೆದ್ದ ಶಿಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.