ETV Bharat / bharat

ಲಖನೌದಲ್ಲಿ ಮತ್ತೆ 2 ಝಿಕಾ ವೈರಸ್ ಪತ್ತೆ - ಲಖನೌ ಝಿಕಾ ವೈರಸ್ ನ್ಯೂಸ್​

ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಎರಡು ಝಿಕಾ ವೈರಸ್ (Zika virus) ಪ್ರಕರಣಗಳು ಪತ್ತೆಯಾಗಿವೆ ಎಂದು ಎಂದು ವೈದ್ಯಕೀಯ ಮತ್ತು ಆರೋಗ್ಯ ವಿಭಾಗದ ಮಹಾನಿರ್ದೇಶಕ ವೇದ್ ವ್ರತ್ ಸಿಂಗ್ ತಿಳಿಸಿದ್ದಾರೆ.

Zika virus
Zika virus
author img

By

Published : Nov 12, 2021, 10:11 AM IST

ಲಖನೌ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಬೆನ್ನಲ್ಲೇ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಎರಡು ಝಿಕಾ ವೈರಸ್ (Zika virus) ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

ಲಖನೌದ ಹುಸೈನ್​ಗಂಜ್ ಮತ್ತು ಎಲ್‌ಡಿಎ ಕಾಲೋನಿಯಲ್ಲಿ ತಲಾ ಒಂದೊಂದು ಝಿಕಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ವಿಭಾಗದ ಮಹಾನಿರ್ದೇಶಕ ವೇದ್ ವ್ರತ್ ಸಿಂಗ್ ಹೇಳಿದ್ದಾರೆ.

ಈವರೆಗೆ ಲಖನೌ ಮತ್ತು ಕಾನ್ಪುರ ಜಿಲ್ಲೆಯಲ್ಲಿ ಹೆಚ್ಚು ಝಿಕಾ ವೈರಸ್ ಪ್ರಕರಣಗಳು ಕಂಡು ಬಂದಿದ್ದು, ಇದುವರೆಗೆ ಒಟ್ಟು 105 ಪ್ರಕರಣಗಳು ವರದಿಯಾಗಿವೆ. ಈ ಹಿಂದೆ ಕನೌಜ್ ಜಿಲ್ಲೆಯಲ್ಲಿ ಸಹ ಒಂದು ಪ್ರಕರಣ ದೃಢಪಟ್ಟಿತ್ತು. ಇನ್ನು ಇಬ್ಬರು ಸೋಂಕಿತರ ಆರೋಗ್ಯ ಸ್ಥಿರವಾಗಿದೆ. ಆದರೆ, ಇವರಿಗೆ ಯಾವುದೇ ರೋಗದ ಲಕ್ಷಣಗಳಿಲ್ಲ. ಸೋಂಕಿತರ ಸಂಪರ್ಕಿತರನ್ನು ಭೇಟಿ ಮಾಡಿ, ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಝಿಕಾ ವೈರಸ್ ಲಕ್ಷಣಗಳು:

ಝಿಕಾ ವೈರಸ್, ಇದು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಗಳ ಮೂಲಕ ಹರಡುವ ವೈರಸ್ ಆಗಿದೆ. ಈ ವೈರಸ್​ ದೇಹಕ್ಕೆ ಹೊಕ್ಕಿದರೂ ಕೆಲವರಲ್ಲಿ ರೋಗ ಲಕ್ಷಣಗಳು ಕಂಡು ಬರುವುದಿಲ್ಲ. ಶೇ.80ರಷ್ಟು ರೋಗಿಗಳಿಗೆ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ.

ಒಂದು ವೇಳೆ ಕಂಡು ಬಂದರೆ ಜ್ವರ, ಮೈ-ಕೈ ನೋವು ಮತ್ತು ಕಣ್ಣು ಕೆಂಪಾಗುವುದು ಇಂತಹ ಲಕ್ಷಣಗಳು ಕಂಡು ಬರುತ್ತದೆ. ಝಿಕಾ ವೈರಸ್ ಅಪಾಯ ಹೆಚ್ಚು ಗರ್ಭಿಣಿಯರ ಮೇಲೆ ಬೀರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.