ETV Bharat / bharat

ರೈಲ್ವೇ ಸೇತುವೆ ಮೇಲೆ ರೀಲ್ಸ್​ ಶೂಟ್​ ಮಾಡಲು ಹೋಗಿ ಇಬ್ಬರು ಸಾವು

ಪ್ರಾಣ ತೆಗೆದ ರೀಲ್ಸ್​ ಗೀಳು- ಶೂಟ್​ ಮಾಡಲು ಹೋಗಿ ಜೀವ ಕಳೆದುಕೊಂಡ ಸ್ನೇಹಿತರು- ಇನ್ನೋರ್ವ ಸೇತುವೆಯಿಂದ ಜಿಗಿದು ಪಾರು

two-youth-crushed-by-train-in-khagaria-during-making-reels
ಬಿಹಾರ: ರೈಲ್ವೇ ಸೇತುವೆ ಮೇಲೆ ರೀಲ್ಸ್​ ಶೂಟ್​ ಮಾಡಲು ಹೋಗಿ ಇಬ್ಬರು ಸಾವು
author img

By

Published : Jan 2, 2023, 10:01 PM IST

ಖಗಾರಿಯಾ(ಬಿಹಾರ): ರೈಲ್ವೇ ಸೇತುವೆ ಮೇಲೆ ರೀಲ್ಸ್​ ಶೂಟ್​ ಮಾಡಲು ಹೋಗಿ ಇಬ್ಬರು ಸ್ನೇಹಿತರು ಸಾವನ್ನಪ್ಪಿದ್ದು, ಇನ್ನೋರ್ವ ಬಾಲಕ ನದಿಗೆ ಹಾರಿ ಪ್ರಾಣ ಉಳಿಸಿಕೊಂಡಿರುವ ಘಟನೆ ಬಿಹಾರದ ಖಗಾರಿಯಾದಲ್ಲಿ ನಡೆದಿದೆ.

ಮೃತರನ್ನು ಖಗಾರಿಯ ಮೂಲದ ಸೋನು ಮತ್ತು ನಿತೀಶ್​ ಎಂದು ಗುರುತಿಸಲಾಗಿದೆ. ರೈಲ್ವೇ ಸೇತುವೆಯಿಂದ ನದಿಗೆ ಜಿಗದವನ ಹೆಸರು ಅಮನ್​ ಎಂದು ತಿಳಿದು ಬಂದಿದೆ. ಮೂವರು ಸ್ನೇಹಿತರು ಹೊಸ ವರ್ಷದ ದಿನದಂದು ಧಮಾರಾ ಘಾಟ್​ ನಿಲ್ದಾಣದ ಬಳಿಯ ಮಾ ಕಾತ್ಯಾಯನಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಮುಖ್ಯ ರಸ್ತೆಯಲ್ಲಿ ಜನಸಂದಣಿ ಮತ್ತು ದೂರವಾಗುತ್ತದೆ ಎಂಬ ಕಾರಣಕ್ಕೆ ಪರ್ಯಾಯ ಮಾರ್ಗದ ಮೂಲಕ ದೇವಸ್ಥಾನಕ್ಕೆ ಹತ್ತಿರವಾಗುತ್ತದೆ ಎಂದು ರೈಲ್ವೇ ಸೇತುವೆಯ ದಾರಿ ಹಿಡಿದು ಹೊರಟಿದ್ದರು.

ಅಷ್ಟರಲ್ಲಿ ಸೋನು ಮತ್ತು ನಿತೀಶ್​ ಸೇತುವೆಯ ಮೇಲೆ ರೀಲ್ಸ್​ ಚಿತ್ರೀಕರಣದಲ್ಲಿ ಮಾಡಲಾರಂಭಿಸಿದರು. ರೀಲ್ಸ್​ ಮಾಡುವುದರಲ್ಲೇ ತಲ್ಲೀನರಾಗಿದ್ದರು. ಇದೇ ವೇಳೆ ಸೇತುವೆ ಹಳಿಯ ಮೇಲೆ ರೈಲು ಬಂದಿದೆ. ಆಗ ಹಳಿಯ ಮೇಲಿದ್ದ ಇಬ್ಬರಿಗೂ ರೈಲು ಡಿಕ್ಕಿ ಹೊಡೆದಿದೆ. ಸ್ವಲ್ಪ ದೂರದಲ್ಲಿದ್ದ ಅಮನ್​ ಸೇತುವೆಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.

ಇದನ್ನೂ ಓದಿಳ: ಕಾರಿನಡಿ ಸಿಲುಕಿ ದೆಹಲಿ ಯುವತಿ ಸಾವು: ಲೆಫ್ಟಿನೆಂಟ್​ ಗವರ್ನರ್​ ನಿವಾಸದ ಮುಂದೆ ಭಾರಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.