ಬಂಕಾ (ಬಿಹಾರ): ರಾಜ್ಯದ ಬಂಕಾ ಎಂಬಲ್ಲಿ ಭಾನುವಾರ ರಾತ್ರಿ ಎರಡು ವರ್ಷದ ಬಾಲೆಯ ಮೇಲೆ ದುರುಳನೊಬ್ಬ ಅತ್ಯಾಚಾರವೆಸಗಿದ್ದಾನೆ. ಘಟನೆಯನ್ನು ಪೊಲೀಸರು ಖಚಿತಪಡಿಸಿದ್ದಾರೆ. ಸಂತ್ರಸ್ತೆಯನ್ನು ಭಾಗಲ್ಪುರದ ಮಾಯಾಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೀಪ್ ಯಾದವ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.
"ಭಾನುವಾರ ತಡರಾತ್ರಿ ಗ್ರಾಮದಲ್ಲಿ ಕಾರ್ಯಕ್ರಮವೊಂದರ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಬ್ಯಾಂಡ್ ಸದ್ದು ಜೋರಾಗಿ ಕೇಳಿಬರುತ್ತಿತ್ತು. ಇದನ್ನು ಗಮನಿಸಲು ಬಾಲಕಿ ಮನೆಯಿಂದ ಹೊರಬಂದಿದ್ದಾಳೆ. ನಂತರ ನಾವು ಹೋಗಿ ಹುಡುಕಿದಾಗ ಆಕೆ ನಾಪತ್ತೆಯಾಗಿದ್ದಳು. ಅರ್ಧ ಗಂಟೆಯ ಬಳಿಕ ಗ್ರಾಮದ ಪ್ರದೀಪ್ ಯಾದವ್ ಎಂಬ ವ್ಯಕ್ತಿ ಬಾಲಕಿಯನ್ನು ಮನೆಯ ಬಳಿ ತಲುಪಿಸಿ ಸ್ಥಳದಿಂದ ಓಡಿ ಹೋಗಿದ್ದಾನೆ" ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.
ರಕ್ತಸಿಕ್ತ ಪರಿಸ್ಥಿತಿಯಲ್ಲಿ ಬಾಲಕಿಯನ್ನು ಕಂಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಕುಟುಂಬ ಸದಸ್ಯರು ಆಕೆಯನ್ನು ರಾಜೂನ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಆಂಬುಲೆನ್ಸ್‌ನಲ್ಲಿ ಭಾಗಲ್ಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿ ಪರೀಕ್ಷೆ ನಡೆಸಿ ಮತ್ತು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈಕೆಯ ತಂದೆ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಸೆಂಟ್ರಲ್ ಜೈಲಿನಲ್ಲೇ ಗ್ಯಾಂಗ್ ವಾರ್, ಇಬ್ಬರು ಗ್ಯಾಂಗ್ಸ್ಟರ್ಗಳ ಕೊಲೆ
ಕೊಳದ ಮಧ್ಯೆ ಪಲ್ಟಿಯಾದ ಬೋಟ್.. ನಾಲ್ಕು ಜನ ನಾಪತ್ತೆ, ಇಬ್ಬರ ದೇಹ ಪತ್ತೆ.. ಈಜಿ ದಡ ಸೇರಿದ ನಾಲ್ವರು
ಕಳೆದ ವರ್ಷ ನಡೆದ ಘಟನೆ: ಬಂಕಾದಲ್ಲಿ ಇಂತಹ ಘಟನೆ ಮೊದಲಲ್ಲ. ಕಳೆದ ವರ್ಷ ಹೋಳಿ ಹಬ್ಬದಂದು ಚಂದನ್ ಎಂಬ ಪ್ರದೇಶದಲ್ಲಿ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಘಟನೆಯಲ್ಲಿ ನಾಲ್ವರು ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆಯಾಗಿತ್ತು. ಇದೀಗ ಮತ್ತೊಂದು ಹೇಯ ಕೃತ್ಯ ನಡೆದಿದೆ.
ಇದನ್ನೂ ಓದಿ: ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ಚಿನ್ನದ ವ್ಯಾಪಾರಿ ಮತ್ತವರ ಪತ್ನಿ, ಮಗಳ ಕೊಳೆತ ಶವ ಪತ್ತೆ