ETV Bharat / bharat

ಜಮ್ಮು ಕಾಶ್ಮೀರ: ಭಾರತದೊಳಗೆ ನುಸುಳುತ್ತಿದ್ದ ಇಬ್ಬರು ಪಾಕ್‌ ಉಗ್ರರಿಗೆ ಗುಂಡಿಟ್ಟು ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಪಾಕಿಸ್ತಾನದ ಉಗ್ರರನ್ನು ಹತ್ಯೆ ಮಾಡಲಾಗಿದೆ.

Two terrorists killed
ನುಸುಳುಕೋರರಿಬ್ಬರ ಹತ್ಯೆ
author img

By

Published : Jul 17, 2023, 1:12 PM IST

ಜಮ್ಮು ಮತ್ತು ಕಾಶ್ಮೀರ : ಇಲ್ಲಿನ ಪೂಂಚ್ ಸೆಕ್ಟರ್‌ನ ಬಹದ್ದೂರ್‌ ಎಂಬಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಇಂದು ಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ ದೇಶದ ಗಡಿಯೊಳಗೆ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ. ಸ್ಥಳದಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಸೋಮವಾರ ಬೆಳಗ್ಗೆ ಪೂಂಚ್ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದ್ದು, ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಈ ಪ್ರದೇಶದಲ್ಲಿ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರೆದಿದೆ" ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ಗಳ ಹಾರಾಟ ಹೆಚ್ಚಾಗಿದೆ. ಕಳೆದ ತಿಂಗಳ ಜೂನ್ 5ರಂದು ಅಮೃತಸರ ಬಳಿ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಯೋಧರು ಹೊಡೆದುರುಳಿಸಿದ್ದರು. ಜೂನ್ 5ರ ಬೆಳಗ್ಗೆ 9.45 ರ ಸುಮಾರಿಗೆ ಸೈನಿಕರಿಗೆ ಪಾಕಿಸ್ತಾನದ ಡ್ರೋನ್‌ ಹಾರಾಟದ ಸದ್ದು ಕೇಳಿಸಿತು. ಬಳಿಕ, ಗಡಿಯಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳು ಡ್ರೋನ್ ಮೇಲೆ ಯಶಸ್ವಿ ಗುಂಡಿನ ದಾಳಿ ನಡೆಸಿದವು.

ಇದಾದ ಬಳಿಕ ಜೂನ್ 9ರಂದು ಅಮೃತಸರದ ರಾಯ್​ಗ್ರಾಮದಲ್ಲಿ ಸುಮಾರು ಐದು ಕೆಜಿ ಹೆರಾಯಿನ್ ಅನ್ನು ಬಿಎಸ್ಎಫ್ ಯೋಧರು ವಶಪಡಿಸಿಕೊಂಡಿದ್ದರು. ಪಾಕಿಸ್ತಾನದ ಡ್ರೋನ್‌ಗಳ ಮೂಲಕ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳಿಗೆ ಡ್ರೋನ್‌ಗಳು ಗಡಿಯೊಳಗೆ ಪ್ರವೇಶಿಸಿ ಏನನ್ನೋ ಬೀಳಿಸುವ ಶಬ್ದ ಕೇಳಿಸಿತು. ಕೂಡಲೇ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ : ಎಲ್‌ಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಐವರು ಶಂಕಿತ ಉಗ್ರರ ಬಂಧನ : ಮಾರಕಾಸ್ತ್ರಗಳ ವಶ

ಲಷ್ಕರ್​ ಎ ತೋಯ್ಬಾ ಸಹಚರನ ಬಂಧನ : ಜುಲೈ 5 ರಂದು ಲಷ್ಕರ್​ ಎ ತೋಯ್ಬಾ ಉಗ್ರ ಸಂಘಟನೆಯ ಸಹಚರನೋರ್ವನನ್ನು ಶಸ್ತ್ರಾಸ್ತ್ರಗಳೊಂದಿಗೆ ಸೆರೆ ಹಿಡಿಯಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದರು. ಬಂಧಿತ ನೌಪೋರಾ ಜಾಗೀರ್​ ಕ್ರೀರ್​ ಗ್ರಾಮದ ನಿವಾಸಿ ಮೊಹಮ್ಮದ್​ ಸಿದ್ದಿಕ್ ಎಂದು ಗುರುತಿಸಲಾಗಿತ್ತು. ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ​ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಲಷ್ಕರ್​ ಎ ತೋಯ್ಬಾ ಸಂಘಟನೆ ಸಹಚರನ ಬಂಧನ

ಇನ್ನು ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನವು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಲೇ ಇದೆ. ಉಗ್ರರ ಒಳನುಸುಳುವಿಕೆ ಯತ್ನಗಳು ಮುಂದುವರೆದಿದ್ದು, ಇದನ್ನು ಭಾರತೀಯ ಸೇನೆ ನಿರಂತರವಾಗಿ ವಿಫಲಗೊಳಿಸುತ್ತಿದೆ. ಈ ವರ್ಷ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ಒಳ ನುಸುಳುಕೋರರನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.