ಅಹಮದಾಬಾದ್/ಜುನಾಗಢ: ಉತ್ತರಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ಗುಜರಾತ್ನಲ್ಲೂ ವರುಣಾರ್ಭಟ ಜೋರಾಗಿದೆ. ಸೋಮವಾರ ಒಂದೇ ದಿನ ಹಲವೆಡೆ ಕಟ್ಟಡಗಳು ಕುಸಿದ ಘಟನೆಗಳು ವರದಿಯಾಗಿವೆ. ಜುನಾಗಢದಲ್ಲಿ ಎರಡು ಅಂತಸ್ತಿನ ಕಟ್ಟಡ ಧರಾಶಾಹಿಯಾಗಿದ್ದು, ಅದರಲ್ಲಿ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ದುರಂತ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ 10 ಜನರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇತ್ತ ಅಹಮದಾಬಾದ್‌ನಲ್ಲಿ ಮೂರು ಅಂತಸ್ತಿನ ಹಳೆಯ ಕಟ್ಟಡ ಕುಸಿದಿದ್ದು, ಅದರಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಗಿದೆ.
ಜುನಾಗಢದ ಅವಘಡ: ಜುನಾಗಢ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಡಿಯವಾಡ ಪ್ರದೇಶದಲ್ಲಿ ಎರಡು ಅಂತಸ್ತಿನ ಹಳೆಯ ಮನೆಯೊಂದು ಏಕಾಏಕಿ ಧರಾಶಾಯಿಯಾಗಿದೆ. ಇದು ಮಾರುಕಟ್ಟೆ ಪ್ರದೇಶವಾಗಿದ್ದು, ಜನರು ಮಳೆಯ ನಡುವೆಯೂ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಕಟ್ಟಡ ನಿವಾಸಗಳ ಜೊತೆಗೆ ಅಂಗಡಿ ಮುಂಗಟ್ಟುಗಳನ್ನೂ ಹೊಂದಿದೆ. ಹೀಗಾಗಿ ಜನರು ಅವಶೇಷಗಳಡಿ ಸಿಲುಕಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ ನಾಲ್ವರು ಮೃತಪಟ್ಟ ಬಗ್ಗೆ ಮಾಹಿತಿ ಸಿಕ್ಕಿದೆ.
-
#WATCH | Gujarat | A two-storeyed building collapsed in Junagadh. Several feared trapped. Further details awaited. pic.twitter.com/nxVeU0njSn
— ANI (@ANI) July 24, 2023 " class="align-text-top noRightClick twitterSection" data="
">#WATCH | Gujarat | A two-storeyed building collapsed in Junagadh. Several feared trapped. Further details awaited. pic.twitter.com/nxVeU0njSn
— ANI (@ANI) July 24, 2023#WATCH | Gujarat | A two-storeyed building collapsed in Junagadh. Several feared trapped. Further details awaited. pic.twitter.com/nxVeU0njSn
— ANI (@ANI) July 24, 2023
ಮಾಹಿತಿ ತಿಳಿದ ತಕ್ಷಣವೇ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ. ಸ್ಥಳೀಯರ ಜೊತೆಗೂಡಿ, ಜೆಸಿಬಿಗಳನ್ನು ಬಳಸಿ ಅವಶೇಷಗಳ ತೆರವು ಮಾಡಲಾಗುತ್ತಿದೆ. ಈವರೆಗೆ ಯಾರೂ ಪತ್ತೆಯಾಗಿಲ್ಲ. ಮಾರುಕಟ್ಟೆ ಮಧ್ಯೆ ಇರುವ ಕಟ್ಟಡ ಇದಾಗಿದ್ದು, ತುಂಬಾ ಹಳೆಯದು ಎಂದು ಹೇಳಲಾಗಿದೆ. ಮೇಲ್ಭಾಗದಲ್ಲಿ ಜನರ ನಿವಾಸಗಳು ಮತ್ತು ಕೆಳಭಾಗದಲ್ಲಿ ಅಂಗಡಿಗಳು ಇದ್ದವು ಎಂದು ತಿಳಿದು ಬಂದಿದೆ.
ಅಹಮದಾಬಾದ್‌ನಲ್ಲಿ 9 ಜನರ ರಕ್ಷಣೆ: ಇನ್ನೊಂದೆಡೆ ಅಹಮದಾಬಾದ್ನ ಕೋಟ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ನೆಲಸಮವಾಗಿದೆ. ತೀರಾ ಹಳೆಯ ಕಟ್ಟಡದಲ್ಲಿ ಕುಟುಂಬವೊಂದು ವಾಸವಾಗಿತ್ತು. ಮಳೆಗೆ ಕುಸಿದು ಬಿದ್ದು ಜನರು ಅದರಡಿ ಸಿಲುಕಿದ್ದರು. ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿ 9 ಮಂದಿಯನ್ನು ರಕ್ಷಿಸಿದ್ದಾರೆ. ಕಟ್ಟಡ ಹಳೆಯದಾಗಿದ್ದು, ಶಿಥಿಲವಾಗಿದ್ದನ್ನು ಪಾಲಿಕೆ ಗುರುತಿಸಿತ್ತು. ಆದರೂ, ಕುಟುಂಬಸ್ಥರು ಅದರಲ್ಲಿ ವಾಸವಾಗಿದ್ದರು.
ತಿಂಗಳ ಹಿಂದೆ ನಗರದ ಮಿತಾಖಲಿ ಪ್ರದೇಶದಲ್ಲಿ ಶಿಥಿಲಗೊಂಡ ಮನೆ ಕುಸಿದು ಓರ್ವ ಸಾವನ್ನಪ್ಪಿದ ಘಟನೆ ನಡೆದಿತ್ತು. ಅಲ್ಲದೇ, ಮೂವರು ಗಾಯಗೊಂಡಿದ್ದರು. ಅವಶೇಷಳಡಿ ಸಿಲುಕಿದ್ದ ಎಲ್ಲರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಓರ್ವ ತೀವ್ರ ಗಾಯದಿಂದ ಚಿಕಿತ್ಸೆ ಫಲಿಸದೇ ಮೃತಟ್ಟಿದ್ದರು.
ಜಾರಿ ಬಿದ್ದು ನೀರುಪಾಲು: ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಹೋದ ವೇಳೆ ಕಾಲು ಜಾರಿ ವ್ಯಕ್ತಿಯೊಬ್ಬ ನೀರುಪಾಲಾದ ಘಟನೆ ಸಂಭವಿಸಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಕೊಚ್ಚಿಹೋಗಿರುವ ಯುವಕ. ಯುವಕ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಬಂಡೆಯ ಮೇಲೆ ನಿಂತು ಜಲಪಾತ ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿದೆ.
ಇದನ್ನೂ ಓದಿ: Watch: ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ದೃಶ್ಯ ಮೊಬೈಲ್ನಲ್ಲಿ ಸೆರೆ