ಮಥುರಾ (ಉತ್ತರಪ್ರದೇಶ) : ಆನ್ಲೈನ್ ಗೇಮ್ ಪಬ್ಜಿ(Online Game PUBG) ಆಡಲು ಹೋಗಿ ಈಗಾಗಲೇ ಅನೇಕ ಅವಾಂತರ, ದುರಂತಗಳು ನಡೆದಿವೆ. ಸದ್ಯ ಉತ್ತರಪ್ರದೇಶದ ಮಥುರಾದಲ್ಲಿ ಇಬ್ಬರು ವಿದ್ಯಾರ್ಥಿಗಳು(Two Students) ಇದೇ ಆಟದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ರೈಲ್ವೆ ಹಳಿ ಮೇಲೆ ಪಬ್ಜಿ ಗೇಮ್( PUBG game) ಆಡುತ್ತಿದ್ದ ವೇಳೆ ಅವರ ಮೇಲೆ ರೈಲು(Train) ಹರಿದು ಹೋಗಿದೆ. ಮಥುರಾದ ಲಕ್ಷ್ಮಿನಗರದ ರೈಲ್ವೆ ನಿಲ್ದಾಣ(railway track)ದ ಬಳಿ ಈ ಅಪಘಾತ ನಡೆದಿದೆ. 16 ವರ್ಷದ ಗೌರವ್ ಹಾಗೂ 18 ವರ್ಷದ ಕಪಿಲ್ ಎಂಬುವರು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಬೆಳಗ್ಗೆ ವಾಕಿಂಗ್ ಮಾಡಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕಿವಿಯಲ್ಲಿ ಏರ್ಫೋನ್ ಹಾಕಿಕೊಂಡು ಪಬ್ಜಿ ಗೇಮ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ರೈಲು ಬಂದಿರುವುದು ಗೊತ್ತಾಗಿಲ್ಲ. ಹೀಗಾಗಿ, ಅವರ ಮೇಲೆ ಹರಿದು ಹೋಗಿದೆ.
ಘಟನೆಗೆ ಸಂಬಂಧಿಸಿದಂತೆ ಜಮುನಾ ಪೊಲೀಸ್ ಠಾಣೆಯ ಶಶಿ ಪ್ರಕಾಶ್ ಶರ್ಮಾ ಮಾಹಿತಿ ನೀಡಿದ್ದಾರೆ. ಇಬ್ಬರು ಕಾಳಿಂದಿ ಕುಂಜ್ ಕಾಲೋನಿ(Kalindi Kunj colony) ವಿದ್ಯಾರ್ಥಿಗಳು ಎಂದು ತಿಳಿಸಿದ್ದಾರೆ. ಮೃತರ ಪಕ್ಕದಲ್ಲೇ ಮೊಬೈಲ್ ಫೋನ್ ಕೂಡ ಪತ್ತೆಯಾಗಿವೆ.