ETV Bharat / bharat

ಡ್ರಗ್ಸ್​ ಸೇವಿಸಿ ಹುಚ್ಚಾಟ ಪ್ರದರ್ಶನ.. 10ಕ್ಕೂ ಹೆಚ್ಚು ವಾಹನ ಜಖಂಗೊಳಿಸಿದ ಕಿಡಿಗೇಡಿಗಳು - ಕೇರಳದಲ್ಲಿ ವ್ಯಕ್ತಿಗಳ ಪುಂಡಾಟ

ಕೇರಳದ ತಿರುವನಂತರಪುರಂ ಬಲರಾಮಪುರಂನಲ್ಲಿ ಇಬ್ಬರು ಕಿಡಿಗೇಡಿಗಳು 10ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ ಘಟನೆ ನಡೆದಿದ್ದು, ಓರ್ವನನ್ನು ಬಂಧಿಸಲಾಗಿದೆ.

Two-member gang smashes 12 vehicles, attacks passengers in Thiruvananthapuram
10ಕ್ಕೂ ಹೆಚ್ಚು ವಾಹನ ಜಖಂಗೊಳಿಸಿದ ಇಬ್ಬರು ವ್ಯಕ್ತಿಗಳು, ಓರ್ವ ಬಂಧನ
author img

By

Published : Dec 21, 2021, 7:49 AM IST

ತಿರುವನಂತಪುರಂ(ಕೇರಳ) : ಹತ್ಯೆಗಳು, ಘರ್ಷಣೆಗಳ ಬೆನ್ನಲ್ಲೇ ಬೈಕ್​ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು 10ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ ಘಟನೆ ಕೇರಳದ ಬಲರಾಮಪುರಂನಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.

ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಲರಾಮಪುರಂ, ಎರುತಾವೂರು ಮತ್ತು ರಸೆಲ್‌ಪುರಂ ಪ್ರದೇಶಗಳಲ್ಲಿ ನಿಲ್ಲಿಸಿದ್ದ 9 ಲಾರಿಗಳು, 3 ಕಾರುಗಳು ಮತ್ತು ನಾಲ್ಕು ಬೈಕ್‌ಗಳನ್ನು ಈ ಇಬ್ಬರೂ ಜಖಂಗೊಳಿಸಿದ್ದರು.

ಎರುತಾವೂರು ಮೂಲದ ಅನು ಎಂಬುವರ ಅಂಗಡಿ ಮುಂದೆ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸಂಪೂರ್ಣ ಜಖಂಗೊಂಡಿದೆ. ದಾಳಿಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕ ಜಯಚಂದ್ರ ಮತ್ತು ಬೈಕ್​​ನಲ್ಲಿದ್ದ ಶೀಬಾ ಕುಮಾರಿ ಗಾಯಗೊಂಡಿದ್ದಾರೆ.

ಗಾಬರಿಗೊಂಡ ಸ್ಥಳೀಯರು ಬಲರಾಮಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅವರನ್ನು ಹಿಂಬಾಲಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ನರುವಾಮೂಡು ಮೂಲದ ಮಿಥುನ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮಿಥುನ್ ಡ್ರಗ್ಸ್ ಸೇವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ ಎಂದು ಬಲರಾಮಪುರಂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆಟೋ ಮೇಲೆ ಉರುಳಿಬಿದ್ದ ಲಾರಿಗಳು.. ಅಪ್ಪ-ಅಮ್ಮನೊಂದಿಗೆ ಮಗು ಸ್ಥಳದಲ್ಲೇ ಸಾವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.