ಮೆಚೇಡಾ (ಪಶ್ಚಿಮ ಬಂಗಾಳ): ಗುಡಿಸಲಿಗೆ ಬೆಂಕಿ ತಗುಲಿ ತಂದೆ ಮತ್ತು ಮಗಳು ಸಜೀವ ದಹನಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಮೆಚೆಡಾ ಎಂಬಲ್ಲಿ ಸಂಭವಿಸಿದೆ. ಕೋಲ್ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮೆಚೇಡಾ ರೈಲು ನಿಲ್ದಾಣದ ಬಳಿಯ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗೋಕುಲ್ ಕರ್ (70) ಮತ್ತು ಅವರ ಪುತ್ರಿ ಮಲ್ಲಿಕಾ ಕರ್ (40) ಎಂದು ಗುರುತಿಸಲಾಗಿದೆ.
ಬೆಂಕಿಯ ತೀವ್ರತೆ ವ್ಯಾಪಕವಾಗಿ ಹರಡಿದ್ದು, ಆಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ಧಾವಿಸುವುದರೊಳಗೆ ಗುಡಿಸಲಿನ ಜೊತೆಗೆ ಅಕ್ಕಪಕ್ಕ ಇದ್ದ ಸುಮಾರು 15 ಅಂಗಡಿಗಳು ಸುಟ್ಟು ಬೂದಿಯಾಗಿದೆ. ಅಪ್ಪ ಮತ್ತು ಮಗಳು ಗುಡಿಸಿನಲ್ಲಿ ಮಲಗಿರುವ ಸಂದರ್ಭದಲ್ಲಿ ಬೆಂಕಿ ತಗುಲಿದ್ದು, ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ, ಸ್ಥಳೀಯರು ಹೇಳುವ ಪ್ರಕಾರ ಗುಡಿಸಲಿನಲ್ಲಿ ಅಡುಗೆ ಒಲೆಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಿದ್ದಾರೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಅಗ್ನಿಶಾಮಕ ದಳದವರು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ ಎಂದು ಅಗ್ನಿಶಾಮಕ ದಳದವರು ಹೇಳಿದರು.
ಒಂದೇ ಮನೆಯಲ್ಲಿ ಆರು ಜನ ಸಜೀವ ದಹನ: ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆರು ಮಂದಿ ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಮಂಚೇರಿಯಲ್ನಲ್ಲಿ ಇತ್ತೀಚಿಗೆ ವರದಿಯಾಗಿತ್ತು. ಮಂಚೇರಿಯಲ್ ಜಿಲ್ಲೆಯ ಮಂದಮರ್ರಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿರಲಿಲ್ಲ. ಬೆಂಕಿ ಅವಘಡದಲ್ಲಿ ಮನೆಯ ಮಾಲೀಕ ಶಿವಯ್ಯ (50), ಅವರ ಪತ್ನಿ ಪದ್ಮಾ (45), ಮಗಳು ಮೌನಿಕಾ(23), ಮತ್ತು ಮೌನಿಕಾ ಅವರ ಪುತ್ರಿಯರು ಸೇರಿ ಒಟ್ಟು 6 ಜನ ಸಜೀವ ದಹನಗೊಂಡಿದ್ದರು.
ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಬರೋಬ್ಬರಿ 23 ಮನೆ ಸುಟ್ಟು ಭಸ್ಮ: ಮತ್ತೊಂದು ಕಡೆ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 23 ಮನೆಗಳು ಅಗ್ನಿಗೆ ಆಹುತಿಯಾಗಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದರು. ಘಟನೆ ನಡೆದ ಕೂಡಲೆ ಭಾರತೀಯ ಸೈನ್ಯ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ಸ್ಥಳೀಯರೊಂದಿಗೆ ಬೆಂಕಿ ನಂದಿಸಿದ್ದರು.
ಎಲೆಕ್ಟ್ರಿಕ್ ಬೈಕ್ನಲ್ಲಿ ಕಾಣಿಸಿಕೊಂಡ ಬೆಂಕಿ: ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಭಿಮಾವರಂ ಬಡವಾಣೆಯ ನಡುರಸ್ತೆಯಲ್ಲೇ ಎಲೆಕ್ಟ್ರಿಕಲ್ ಬೈಕ್ಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಮಂಗಳವಾರ ನಡೆದಿತ್ತು. ಭೀಮಾವರದ ಮಾದಿಶೆಟ್ಟಿ ಆದಿನಾರಯಣ ಎಂಬುವವರು ಬೈಕ್ ಚಲಾಯಿಸುವ ಸಂದರ್ಭದಲ್ಲಿ ಏಕಾಏಕಿ ಬೈಕ್ನಿಂದ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣವೇ ಗಾಡಿಯನ್ನು ನಿಲ್ಲಿಸಿದ್ದಾರೆ, ಹೊಗೆಯ ತೀವ್ರತೆ ಜಾಸ್ತಿಯಾಗಿ ಬೈಕ್ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಇದರ ಪರಿಣಾಮ ಬೈಕ್ ನಡುರಸ್ತೆಯಲ್ಲೇ ಸುಟ್ಟು ಕರಕಲಾಗಿತ್ತು.
ಇದನ್ನೂ ಓದಿ: ಬಾಲಕಿಯರ ಮೇಲೆ ಅತ್ಯಾಚಾರ: ಓರ್ವನ ಬಂಧನ.. ಗುಜರಾತ್ನಲ್ಲಿ ಹೃದಯಾಘಾತಕ್ಕೆ ಬಾಲಕಿ ಬಲಿ