ಪಶ್ಚಿಮ ಗೋದಾವರಿ (ಆಂಧ್ರ ಪ್ರದೇಶ): ಮಕರ ಸಂಕ್ರಾಂತಿ ಹಬ್ಬದ ವೇಳೆ ಪ್ರತಿ ವರ್ಷವೂ ಆಂಧ್ರ ಪ್ರದೇಶದಲ್ಲಿ ಕೋಳಿ ಅಂಕ ಅಥವಾ ಕೋಳಿ ಪಡೆ ಆಯೋಜಿಸಲಾಗುತ್ತದೆ. ಸರ್ಕಾರ ನಿಷೇಧ ಹೇರಿದ್ದರೂ ಕೂಡ ಜನ ಲೆಕ್ಕಕ್ಕೇ ತೆಗೆದುಕೊಳ್ಳದೆ ಬೆಟ್ಟಿಂಗ್ ಜೊತೆ ಕೋಳಿ ಕಾಳಗವನ್ನ ನಡೆಸುತ್ತಾರೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಶೃಂಗವಕ್ಷಮ್ ಎಂಬಲ್ಲಿ ಕೊವ್ರು ರಾಮಯ್ಯ ಎಂಬವರು ತಮ್ಮ ಸ್ನೇಹಿತನ ಜೊತೆ ಸೇರಿ ಇತ್ತೀಚೆಗೆ 2.40 ರೂ. ಲಕ್ಷ ಮೌಲ್ಯದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಖರೀದಿಸಿದ್ದರು. ಹಬ್ಬದ ವೇಳೆ ಇವರಿಬ್ಬರೂ ಕೋಳಿ ಪಡೆಯಲ್ಲಿ ಪಾಲ್ಗೊಂಡಿದ್ದು, ಗೆದ್ದವರಿಗೆ ಬುಲೆಟ್ ಬೈಕ್ ಎಂದು ಬೆಟ್ ಕಟ್ಟಿದ್ದರು. ಇದೀಗ ಕೋಳಿ ಕಾಳಗದಲ್ಲಿ ಕೊವ್ರು ರಾಮಯ್ಯ ಅವರ ಹುಂಜ ಗೆದ್ದಿದ್ದು, ಬೈಕ್ ಇವರ ಪಾಲಾಗಿದೆ.
ಇದನ್ನೂ ಓದಿ: ಆಂಧ್ರದಲ್ಲಿ ಸಂಕ್ರಾಂತಿ ಕೋಳಿ ಅಂಕ: ಒಂದೇ ಜಿಲ್ಲೆಯಲ್ಲಿ 12 ಸಾವಿರಕ್ಕೂ ಹೆಚ್ಚು ಹುಂಜ ಬಲಿ, ಕೋಟ್ಯಂತರ ಬೆಟ್ಟಿಂಗ್!
ಆಂಧ್ರದ ಕೃಷ್ಣಾ, ಪ್ರಕಾಶಂ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಾದ್ಯಂತ ಮೂರು ದಿನಗಳ ಕಾಲ ಕೋಳಿ ಕಾಳಗ ಆಯೋಜಿಸಲಾಗಿದ್ದು, ಪೂರ್ವ ಗೋದಾವರಿ ಜಿಲ್ಲೆಯೊಂದರಲ್ಲೇ ಮೊದಲ ದಿನ 12 ಸಾವಿರಕ್ಕೂ ಹೆಚ್ಚು ಹುಂಜಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಜನರು ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದು, ಹಲವೆಡೆ ಪೊಲೀಸರು ದಾಳಿ ನಡೆಸಿ ನಗದು ಹಾಗೂ ಕೋಳಿಯನ್ನು ವಶಪಡಿಸಿಕೊಂಡಿದ್ದಾರೆ.