ETV Bharat / bharat

ಗುಡಿಸಲುಗಳಿಗೆ ಹಠಾತ್​ ಹೊತ್ತಿಕೊಂಡ ಬೆಂಕಿ: ಇಬ್ಬರು ಪುಟ್ಟ ಕಂದಮ್ಮಗಳು ಬಲಿ - ಇಬ್ಬರು ಪುಟ್ಟ ಕಂದಮ್ಮಗಳು ಬಲಿ

ಫರಿದಾಬಾದ್​ನಲ್ಲಿ ಗುಡಿಸಲುಗಳಿಗೆ ಹೊತ್ತಿಕೊಂಡ ಭಾರೀ ಬೆಂಕಿಗೆ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಹಲವಾರು ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

fire
ಬೆಂಕಿ
author img

By

Published : Dec 19, 2020, 9:44 PM IST

ಫರಿದಾಬಾದ್(ದೆಹಲಿ): ಟೀಗಾಂವ್‌ನ ಟಿಟು ಕಾಲೋನಿಯಲ್ಲಿರುವ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡ ಕಾರಣ ಇಬ್ಬರು ಪುಟ್ಟ ಮಕ್ಕಳು ಬೆಂಕಿಗೆ ಸಜೀವ ದಹನವಾಗಿರುವ ಘಟನೆ ನಡೆದಿದೆ.

ಫರಿದಾಬಾದ್‌ನ ವಾಸುದೇವ್ ಗಾರ್ಡನ್ ಬಳಿಯ ಟಿಟು ಕಾಲೋನಿಯಲ್ಲಿರುವ ಗುಡಿಸಲುಗಳಿಗೆ ಹಠಾತ್​ ಬೆಂಕಿ ಹೊತ್ತಿಕೊಂಡಿತ್ತು. ಅವಘಡದಲ್ಲಿ ಮೂರು ಹಾಗೂ ಐದು ವರ್ಷ ವಯಸ್ಸಿನ ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಮಯದಲ್ಲಿ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದು, ತಾಯಿ ಯಾವುದೋ ಕೆಲಸದ ಕಾರಣ ಹೊರಗಡೆ ಹೋಗಿದ್ದಳು. ಆದ್ರೆ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡು ಮಕ್ಕಳು ಹೊರ ಬರಲಾಗದೆ ಅಲ್ಲೇ ಬೆಂಕಿಯ ಕೆನ್ನಾಲಿಗೆಗೆ ಬೆಂದು ಹೋಗಿದ್ದಾರೆ ಎಂದು ನೆರೆಮನೆಯಾಕೆ ಹೇಳಿದ್ದಾಳೆ.

ಇನ್ನು ಅವಘಡಕ್ಕೆ ಸುಮಾರು ಹತ್ತಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಹೋಗಿವೆ. ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.