ETV Bharat / bharat

ರಾಮಮಂದಿರ, ಯುಪಿ ಸಿಎಂ ಯೋಗಿಗೆ ಬಾಂಬ್ ಬೆದರಿಕೆ: ಇಬ್ಬರ ಬಂಧನ - Ram temple

ರಾಮ ಮಂದಿರ, ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಎಸ್‌ಟಿಎಫ್ ಎಡಿಜಿಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

arrest
ರಾಮಮಂದಿರ, ಯುಪಿ ಸಿಎಂ ಯೋಗಿಗೆ ಬಾಂಬ್ ಬೆದರಿಕೆ: ಇಬ್ಬರ ಬಂಧನ
author img

By PTI

Published : Jan 4, 2024, 8:50 AM IST

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಯ ರಾಮಮಂದಿರ ಹಾಗೂ ಎಸ್‌ಟಿಎಫ್‌ ಎಡಿಜಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್‌ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ ತಂಡವು ತಹರ್ ಸಿಂಗ್ ಮತ್ತು ಓಂಪ್ರಕಾಶ್ ಮಿಶ್ರಾ ಎಂಬುವರನ್ನು ಲಖನೌದ ಗೋಮತಿ ನಗರದ ವಿಭೂತಿ ಖಂಡ್ ಪ್ರದೇಶದಲ್ಲಿ ಬಂಧಿಸಿದೆ.

ನವೆಂಬರ್‌ನಲ್ಲಿ ಸಾಮಾಜಿಕ ಜಾಲತಾಣ ಎಕ್ಸ್​​ನ ಖಾತೆಯೊಂದರಲ್ಲಿ ಇಬ್ಬರು ಆರೋಪಿಗಳು ಸಿಎಂ ಆದಿತ್ಯನಾಥ್, ಎಸ್‌ಟಿಎಫ್ ಮುಖ್ಯಸ್ಥ ಅಮಿತಾಬ್​ ಯಶ್ ಮತ್ತು ನೂತನವಾಗಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮಮಂದಿರಕ್ಕೆ ಬಾಂಬ್​ ಬೆದರಿಕೆ ಹಾಕಿದ್ದರು. ಬೆದರಿಕೆ ಪೋಸ್ಟ್‌ಗಳನ್ನು ಕಳುಹಿಸಲು ಕೆಲ ಇ-ಮೇಲ್ ಐಡಿ ಬಳಸಿರುವುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇ-ಮೇಲ್ ಐಡಿಗಳ ತಾಂತ್ರಿಕ ವಿಶ್ಲೇಷಣೆ ಬಳಿಕ, ತಹರ್ ಸಿಂಗ್ ಇ-ಮೇಲ್ ಖಾತೆಗಳನ್ನು ರಚಿಸಿದ್ದ ಮತ್ತು ಓಂಪ್ರಕಾಶ್ ಮಿಶ್ರಾ ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಬಯಲಾಗಿದೆ. ಸಿಂಗ್ ಮತ್ತು ಮಿಶ್ರಾ ಇಬ್ಬರೂ ಗೊಂಡಾ ನಿವಾಸಿಗಳಾಗಿದ್ದು, ಅರೆವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್‌ಟಿಎಫ್ ಹೆಚ್ಚಿನ ತನಿಖೆ ನಡೆಸುತ್ತಿದೆ.

ಉದ್ಯೋಗಿಗಳಿಂದ ನಕಲಿ ಮೇಲ್ ಐಡಿ ತಯಾರಿ : ಎಸ್‌ಟಿಎಫ್ ಎಸ್‌ಎಸ್‌ಪಿ ವಿಶಾಲ್ ವಿಕ್ರಮ್ ಸಿಂಗ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಎಸ್‌ಟಿಎಫ್ ವಿಶೇಷ ತಂಡ ರಚಿಸಲಾಗಿತ್ತು. ಬುಧವಾರ ತಡರಾತ್ರಿ ಇಬ್ಬರನ್ನು ಬಂಧಿಸಲಾಗಿದೆ. ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್ ಹೆಸರಿನಲ್ಲಿ ಎನ್‌ಜಿಒ ನಡೆಸುತ್ತಿರುವ ಬಂಟ್ರಾ ನಿವಾಸಿ ದೇವೇಂದ್ರ ತಿವಾರಿ ಅವರು ಆಲಂಬಾಗ್‌ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಪ್ಯಾರಾ ಮೆಡಿಕಲ್ ಸೈನ್ಸ್​ ಹೆಸರಿನಲ್ಲಿ ಕಾಲೇಜು ತೆರೆದಿದ್ದಾರೆ ಎಂಬುದನ್ನು ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.

ಆರೋಪಿಗಳು ಈ ಕಾಲೇಜಿನಲ್ಲಿ ತಮ್ಮ ಕಚೇರಿಯನ್ನು ಇಟ್ಟುಕೊಂಡಿದ್ದಾರೆ. ಇದರಲ್ಲಿ ಆರೋಪಿ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಕೆಲಸ ಮಾಡುತ್ತಾರೆ. ದೇವೇಂದ್ರ ತಿವಾರಿ ಸೂಚನೆ ಮೇರೆಗೆ ನಕಲಿ ಇ-ಮೇಲ್‌ಗಳನ್ನು ಸೃಷ್ಟಿಸಿ, ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಗಳು ಎಸ್‌ಟಿಎಫ್‌ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಚರ್ಚೆ ಹುಟ್ಟುಹಾಕುವ ನಿಟ್ಟಿನಲ್ಲಿ ಸಿಎಂ ಯೋಗಿ ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ ಹಾಕಿದ್ದರು ಎಸ್‌ಟಿಎಫ್ ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ಬೆಳಗಾವಿಯಲ್ಲೂ ಬಿಜೆಪಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.