ನವದೆಹಲಿ; ವಿಶ್ವಾದ್ಯಂತ ಟ್ವಿಟರ್ ಖಾತೆದಾರರು ಒಂದು ಗಂಟೆಗಳ ಕಾಲ ಕಿರಿಕಿರಿ ಅನುಭವಿಸಿದರು. ತಾಂತ್ರಿಕ ಸಮಸ್ಯೆಯಿಂದಾಗಿ ಟ್ವಿಟರ್ ಒಂದು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಬಳಿಕ ಎಲ್ಲವೂ ಸರಿಯಾಗಿದ್ದು, ಈಗ ಸರಾಗವಾಗಿ ಕಾರ್ಯ ನಿರ್ವಹಿಸುತ್ತಿದೆ.
ಡೌನ್‌ಡೆಕ್ಟರ್ ವರದಿ ಪ್ರಕಾರ, ಶುಕ್ರವಾರ ಸಂಜೆ ಒಂದು ಗಂಟೆಗಳ ಕಾಲ ಟ್ವಿಟರ್ ಸರಿಯಾಗಿ ಕೆಲಸ ನಿರ್ವಹಿಸಿರಲಿಲ್ಲ. ಈ ಅವಧಿಯಲ್ಲಿ ಟ್ವಿಟರ್ ಖಾತೆದಾರರು ಪೋಸ್ಟ್ ಮಾಡುವುದು ಸೇರಿದಂತೆ ಇತರ ಕೆಲಸ ಮಾಡುವಾಗ ತೊಂದರೆ ಅನುಭವಿಸಿದರು.
ಒಂದು ಗಂಟೆ ಬಳಿಕ ಎಲ್ಲವೂ ಸರಿಯಾಯಿತು ಎಂದು ಡೌನ್‌ಡೆಕ್ಟರ್ ಹೇಳಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟರ್, ಆಗಿರುವ ತಾಂತ್ರಿಕ ದೋಷವನ್ನು ನಾವು ಸರಿಪಡಿಸಿದ್ದೇವೆ. ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಅಡಚಣೆಗಾಗಿ ಕ್ಷಮಿಸಿ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.
ಹೀಟ್ ಮ್ಯಾಪ್ ಪ್ರಕಾರ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಮೆಕ್ಸಿಕೋ, ಯುಎಸ್ ಮತ್ತು ಭಾರತದಿಂದ (ದೆಹಲಿ, ಮುಂಬೈ ಮತ್ತು ಚೆನ್ನೈ) ಟ್ವಿಟರ್ ಸ್ಥಗಿತದ ವರದಿಯಾಗಿದೆ. ಹೆಚ್ಚಿನ (54 ಪ್ರತಿಶತ) ಸಮಸ್ಯೆಗಳು ವೆಬ್‌ಸೈಟ್‌ಗಳಿಂದ ವರದಿಯಾದರೆ, ಶೇ 33 ಪ್ರತಿಶತದಷ್ಟು ದೂರುಗಳು Twitter ಲಾಗಿನ್‌ಗೆ ಸಂಬಂಧಿದ್ದಾಗಿವೆ.
ಇದನ್ನು ಓದಿ:ಭಾರತದಲ್ಲಿ ಹೈಡ್ರೋಪೋನಿಕ್ಸ್ ಕೃಷಿ.. ಮತ್ತೊಂದು ಹಸಿರುಕ್ರಾಂತಿಗೆ ಅಡಿಪಾಯವಾಗಲಿದೆಯಾ ಹೊಸ ತಂತ್ರಜ್ಞಾನ?