ETV Bharat / bharat

ಕೊರೊನಾಗೆ ಅವಳಿ ಸಹೋದರರು ಬಲಿ.. ಕಮರಿತು ವಿದೇಶದಲ್ಲಿ ಕೆಲಸ ಮಾಡುವ ಕನಸು - ಕೋವಿಡ್​ ಮಹಾಮಾರಿಗೆ ಬಲಿ

ಮೀರತ್​ನ ಕಂಟೋನ್ಮೆಂಟ್​ ಪ್ರದೇಶದ ನಿವಾಸಿಗಳಾಗಿದ್ದ ಅವಳಿ ಸಹೋದರರು ಕೊರೊನಾಗೆ ಬಲಿಯಾಗಿದ್ದು, ಕುಟುಂಬಸ್ಥರಿಗೆ ಆಘಾತ ಮೂಡಿಸಿದೆ. ಈ ಇಬ್ಬರೂ ಹುಟ್ಟಿದ್ದು 1997ರ ಏಪ್ರಿಲ್ 23 ರಂದು. ವಿಚಿತ್ರ ಎಂದರೆ ಅಲ್ಲಿಗೆ ಸರಿಯಾಗಿ 24 ವರ್ಷಗಳ ನಂತರ ಅಂದರೆ 2021ರ ಏಪ್ರಿಲ್ 23 ರಂದು ಇಬ್ಬರೂ ಸೋಂಕಿಗೊಳಗಾದರು. ಇಬ್ಬರಿಗೂ ಜ್ವರ ಹೆಚ್ಚಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೇ 13 ಹಾಗೂ 14 ರಂದು ಅವಳಿ ಸಹೋದರರು ಇಹಲೋಕ ತ್ಯಜಿಸಿದರು.

twines-brother-died-due-to-coronavirus-in-meerut
ಕೊರೊನಾಗೆ ಅವಳಿ ಸಹೋದರರ ಬಲಿ; ಕಮರಿದ ವಿದೇಶದಲ್ಲಿ ಕೆಲಸ ಮಾಡುವ ಕನಸು
author img

By

Published : May 18, 2021, 6:55 PM IST

Updated : May 18, 2021, 7:21 PM IST

ಮೀರತ್(ಉತ್ತರ ಪ್ರದೇಶ): ಕೊರೊನಾ ಮಹಾಮಾರಿಯ ಕಾರಣದಿಂದ ದೇಶದಲ್ಲಿ ಹಲವಾರು ಕುಟುಂಬಗಳು ತನ್ನವರನ್ನು ಕಳೆದುಕೊಂಡಿವೆ. ಮೀರತ್​​ನಲ್ಲಿಯೂ ಇಂಥಹದ್ದೇ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. 24 ವರ್ಷ ವಯಸ್ಸಿನ ಅವಳಿ ಸಹೋದರರಿಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

ಇಬ್ಬರಿಗೂ ಒಂದೇ ರೀತಿ..

ಇಬ್ಬರಲ್ಲಿ ಒಬ್ಬನಿಗೆ ಯಾವುದಾದರೂ ಕಾಯಿಲೆ ಬಂದಲ್ಲಿ ಅದು ಇನ್ನೊಬ್ಬನಿಗೂ ಬರುತ್ತಿತ್ತು ಎಂದು ಮೃತ ಸಹೋದರರ ಕುಟುಂಬದವರು ಹೇಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಈ ಸಹೋದರರ ಪೈಕಿ ಓರ್ವನಿಗೆ ಅಪಘಾತ ಆಗಿತ್ತು. ಇದಾಗಿ ಕೆಲ ದಿನಗಳಲ್ಲಿ ಮತ್ತೊಬ್ಬನಿಗೂ ಆ್ಯಕ್ಸಿಡೆಂಟ್ ಆಗಿತ್ತು ಎನ್ನುತ್ತಾರೆ ಸಂಬಂಧಿಕರು. ಅದೇ ರೀತಿಯಲ್ಲಿ ಕೊರೊನಾ ಸೋಂಕಿತನಾಗಿದ್ದ ಸಹೋದರನೋರ್ವ ಸೋಂಕಿಗೆ ಬಲಿಯಾದ ಮರುದಿನವೇ ಮತ್ತೊಬ್ಬ ಕೂಡ ಪ್ರಾಣ ಬಿಟ್ಟಿದ್ದಾನೆ.

ಜಿಲ್ಲೆಯ ಕಂಟೋನ್ಮೆಂಟ್​ ಪ್ರದೇಶದ ನಿವಾಸಿಗಳಾಗಿದ್ದ ಈ ಅವಳಿ ಸಹೋದರರು ಕೊರೊನಾಗೆ ಬಲಿಯಾಗಿದ್ದು ಕುಟುಂಬಸ್ಥರಿಗೆ ಆಘಾತ ಮೂಡಿಸಿದೆ. ಈ ಇಬ್ಬರೂ ಹುಟ್ಟಿದ್ದು 1997ರ ಏಪ್ರಿಲ್ 23 ರಂದು. ವಿಚಿತ್ರ ಎಂದರೆ ಅಲ್ಲಿಗೆ ಸರಿಯಾಗಿ 24 ವರ್ಷಗಳ ನಂತರ ಅಂದರೆ 2021ರ ಏಪ್ರಿಲ್ 23 ರಂದು ಇಬ್ಬರೂ ಸೋಂಕಿಗೀಡಾದರು. ಇಬ್ಬರಿಗೂ ಜ್ವರ ಹೆಚ್ಚಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೇ 13 ಹಾಗೂ 14 ರಂದು ಅವಳಿ ಸಹೋದರರು ಇಹಲೋಕ ತ್ಯಜಿಸಿದರು.

ಆರ್​ಟಿಪಿಸಿಆರ್​ ನೆಗೆಟಿವ್ ಆದ್ರೂ ಪ್ರಯೋಜನವಾಗಲಿಲ್ಲ..

ಮೃತ ಯುವಕರ ತಂದೆ ಗ್ರೆಗರಿ ಈ ದುರಂತ ಕುರಿತು ಮಾತನಾಡಿದ್ದು, ಮೇ 1 ರಂದು ನನ್ನ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದೆ. ಅಲ್ಲಿ ಕೊರೊನಾ ಟೆಸ್ಟ್ ಮಾಡಿಸಿದಾಗ ಇಬ್ಬರಿಗೂ ಪಾಸಿಟಿವ್ ಬಂದಿತ್ತು. ಆದರೆ ಇದಾಗಿ ಕೆಲ ದಿನಗಳ ನಂತರ ಇವರಿಬ್ಬರ ಆರ್​ಟಿಪಿಸಿಆರ್ ಟೆಸ್ಟ್​ ನೆಗೆಟಿವ್ ಬಂದಿತ್ತು. ಆದರೂ ಇಬ್ಬರ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಕೊನೆಗೆ ಐಸಿಯು ವಾರ್ಡ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಮೇ 13 ಹಾಗೂ 14 ರಂದು ಇಬ್ಬರೂ ನಮ್ಮನ್ನು ಬಿಟ್ಟು ಹೋದರು ಎಂದು ಕಣ್ಣೀರು ಸುರಿಸಿದರು.

ತಾಯಿಗೆ ಆಗಲೇ ತಿಳಿದಿತ್ತು !

ಮೇ 13 ರಂದು ಮೊದಲಿಗೆ ಜೋಫ್ರೆಡ್​ ಮೃತಪಟ್ಟಿದ್ದ. ಜೋಫ್ರೆಡ್​ ಮೃತಪಟ್ಟ ಸುದ್ದಿ ಕೇಳುತ್ತಲೇ ತಾಯಿ ಸೋಜಾ, ಇನ್ನು ರಾಫ್ಲೆಡ್​ ಕೂಡ ಬದುಕಲಾರ ಎಂದಿದ್ದಳು. ಅದರಂತೆ ಮರುದಿನವೇ ರಾಫ್ಲೆಡ್​ ಕೂಡ ಅಸುನೀಗಿದ.

ವಿದೇಶಕ್ಕೆ ಹೋಗುವ ಕನಸಿತ್ತು..

ತನ್ನ ಇಬ್ಬರೂ ಮಕ್ಕಳು ಎಂಜಿನಿಯರ್​ಗಳಾಗಿದ್ದು, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿಂದ ಅವರಿಬ್ಬರೂ ಹೈದರಾಬಾದ್ ಮೂಲಕ ಕೊರಿಯಾ ಹಾಗೂ ಅಲ್ಲಿಂದ ಜರ್ಮನಿಗೆ ಹೋಗಿ ಕೆಲಸ ಮಾಡುವ ಇರಾದೆ ಹೊಂದಿದ್ದರು ಎಂದು ತಂದೆ ಗ್ರೆಗರಿ ರೇಮಂಡ್ ರಾಫೆಲ್ ಹೇಳಿದರು.

Last Updated : May 18, 2021, 7:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.