ಬರೇಲಿ: ಬರೇಲಿ ಜಂಕ್ಷನ್ನಲ್ಲಿ ದಿಬ್ರುಗಢದಿಂದ ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸಪ್ರೆಸ್ ರೈಲು ಹತ್ತುವ ವೇಳೆ ಯೋಧರೊಬ್ಬರನ್ನು ಟಿಕೆಟ್ ಪರೀಕ್ಷಕ (ಟಿಟಿಇ) ರೊಬ್ಬರು ಕೆಳಗೆ ತಳ್ಳಿದ್ದಾರೆ. ಕೆಳಗೆ ಬಿದ್ದು ರೈಲಿನಡಿ ಸಿಲುಕಿದ ಯೋಧನ ಎರಡೂ ಕಾಲು ಕಟ್ ಆಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳು ಯೋಧನನ್ನು ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಲಿಸುತ್ತಿದ್ದ ರೈಲಿನಿಂದ ಯೋಧನನ್ನು ಕೆಳಗೆ ನೂಕಿದ ಘಟನೆ ಖಂಡಿಸಿ ಹಲವಾರು ಯೋಧರು ಸ್ಟೇಷನ್ನಲ್ಲಿ ಜಮಾಯಿಸಿ ಪ್ರತಿಭಟನೆ ಮಾಡಿದರು. ಈ ವೇಳೆ, ರೈಲು ನಿಲ್ದಾಣದಲ್ಲಿ ಬಹಳ ಹೊತ್ತು ನಿಂತಿತ್ತು. ಇದೇ ವೇಳೆ ಗಲಾಟೆ ನಡೆದಿರುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಹಲವು ಠಾಣೆಗಳ ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ದಿಬ್ರುಗಢ - ರಾಜಧಾನಿ ಎಕ್ಸ್‌ಪ್ರೆಸ್ ಬರೇಲಿ ರೈಲ್ವೆ ಜಂಕ್ಷನ್‌ಗೆ ಬಂದಿತ್ತು. ಇದಾದ ಬಳಿಕ ರೈಲು ಓಡಲು ಆರಂಭಿಸಿದಾಗ ಯೋಧನೊಬ್ಬ ರೈಲು ಹತ್ತಲು ಯತ್ನಿಸಿದ್ದ. ಇದೇ ವೇಳೆ, ರೈಲಿನಲ್ಲಿದ್ದ ಟಿಟಿಇ ಅವರನ್ನು ಹತ್ತಲು ಬಿಡಲಿಲ್ಲ ಹಾಗೂ ಇದೇ ವಿಚಾರಕ್ಕೆ ಮಾರಾಮಾರಿ ನಡೆದಿದೆ. ಆಗ ಟಿಟಿಇ ಯೋಧನನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.
ರೈಲಿಗೆ ಸಿಲುಕಿ ಯೋಧನ ಎರಡೂ ಕಾಲುಗಳು ತುಂಡಾಗಿವೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಲಾಟೆ ನಡೆದಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಹಲವು ಠಾಣೆಗಳ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ನಂತರ ಪೊಲೀಸರು ರೈಲು ಮುಂದೆ ಸಾಗಲು ವ್ಯವಸ್ಥೆ ಮಾಡಿದರು.
ಇದನ್ನೂ ಓದಿ: ಹಳಿ ದಾಟುತ್ತಿದ್ದಾಗ ಬಂದ ಗೂಡ್ಸ್ ರೈಲು: ಅಲ್ಲೇ ಮಲಗಿ ಜೀವ ಉಳಿಸಿಕೊಂಡ ವ್ಯಕ್ತಿ