ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಏಪ್ರಿಲ್ 21ರ ಶ್ರೀ ರಾಮ ನವಮಿಯಂದು ಅಂಜನಾದ್ರಿಯೇ ಭಗವಂತ ಆಂಜನೇಯನ ಮೂಲ ಜನ್ಮಸ್ಥಳವೇ ಎಂಬುವುದರ ಬಗ್ಗೆ ತನ್ನ ಅಧ್ಯಯನ ವರದಿ ಸಾರ್ವಜನಿಕವಾಗಿ ಘೋಷಿಸಲಿದೆ ಎಂದು ಹೇಳಿದೆ.
ಐತಿಹಾಸಿಕ ಮತ್ತು ಎಪಿಗ್ರಾಫಿಕಲ್ ಸಾಕ್ಷಿಗಳನ್ನು ಆಧರಿಸಿ ತಿರುಪತಿಯ ಅಂಜನಾದ್ರಿಯೇ ಆಂಜನೆಯನ ಮೂಲ ಜನ್ಮಸ್ಥಳ ಎಂಬುದರ ಬಗ್ಗೆ ಘೋಷಿಸಲು ನಿರ್ಧಾರ ತೆಗೆಕೊಳ್ಳಲಾಗಿದೆ ಎಂದು ಟಿಟಿಡಿ ಹೇಳಿದೆ.
ಆರಂಭದಲ್ಲಿ ಯುಗಾದಿಯಂದು ಹನುಮಾನ್ ಜನ್ಮಸ್ಥಳಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಬಿಡುಗಡೆ ಮಾಡಲು ಟಿಟಿಡಿ ಯೋಜಿಸಿತ್ತು. ಆದರೆ, ಶ್ರೀ ರಾಮನ ಭಕ್ತನಾಗಿರುವುದರಿಂದ ಶ್ರೀ ರಾಮನವಮಿಯಂದು ಘೋಷಿಸಲು ತೀರ್ಮಾನಿಸಿದೆ.
ಟಿಟಿಡಿ ಇಒ ಜವಾಹರ್ ರೆಡ್ಡಿ ಅವರು 2020ರ ಡಿಸೆಂಬರ್‌ನಲ್ಲಿ ಸಮಗ್ರವಾಗಿ ಅಧ್ಯಯನ ಮಾಡಲು ಸಮಿತಿಯನ್ನು ರಚಿಸಿದ್ದರು. ಇದು ತಿರುಪತಿಯ ಅಂಜನಾದ್ರಿ ಭಗವಾನ್ ಹನುಮನ ಜನ್ಮಸ್ಥಳವೆಂದು ದೃಢಪಡಿಸುತ್ತದೆ.