ETV Bharat / bharat

ತ್ರಿಪುರಾದಲ್ಲಿ ರೋಗ ನಿರೋಧಕ ಆಲೂಗಡ್ಡೆ, ಬಾಳೆಹಣ್ಣು ಅಭಿವೃದ್ಧಿ..

ಸಂಶೋಧನಾಧಿಕಾರಿ ದತ್ತಾ ಅವರ ಪ್ರಕಾರ, ಈ ಎಲ್ಲಾ ಪ್ರಬೇಧಗಳು ಕಠಿಣ ರೋಗ ನಿರೋಧಕ ಶಕ್ತಿ ಹೊಂದಿವೆ ಮತ್ತು ಈ ಬೆಳೆಗಳು ಹೊಲಗಳಲ್ಲಿ ಉತ್ತಮವಾಗಿ ಬೆಳೆಯುವ ಮೂಲಕ, ಒಳ್ಳೆಯ ಫಸಲನ್ನು ನೀಡುವುದರಿಂದ ರೈತರು ಉತ್ತಮ ಲಾಭ ಪಡೆಯಲು ಸಾಧ್ಯವಾಗುತ್ತದೆ..

author img

By

Published : Mar 26, 2021, 5:23 PM IST

Tripura grows disease resilient potato, banana in test tubes
ರೋಗ ನಿರೋಧಕ ಆಲೂಗಡ್ಡೆ, ಬಾಳೆಹಣ್ಣು ಅಭಿವೃದ್ಧಿ

ಅಗರ್ತಲಾ(ತ್ರಿಪುರ) : ತ್ರಿಪುರದ ತೋಟಗಾರಿಕಾ ಸಂಶೋಧನಾ ಸಂಕೀರ್ಣದ ಸಣ್ಣ ಅಂಗಾಂಶ ಸಂಸ್ಕೃತಿ ಪ್ರಯೋಗಾಲಯದಲ್ಲಿ 22,000 ಆಲೂಗಡ್ಡೆ ಮತ್ತು ಸಿಹಿ (ಸಾಬ್ರಿ) ಬಾಳೆಹಣ್ಣನ್ನು ಒಂದೇ ಸೂರಿನಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ರಾಜ್ಯದ ಕೃಷಿಯ ಭವಿಷ್ಯ ಉಜ್ವಲವಾಗಲಿದೆ.

ರೋಗ ನಿರೋಧಕ ಆಲೂಗಡ್ಡೆ, ಬಾಳೆಹಣ್ಣು ಅಭಿವೃದ್ಧಿ..

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಆಗಮನ, ಸಂಶೋಧಕರು ಮತ್ತು ಕೃಷಿ ತಜ್ಞರು ಸತತ ಪ್ರಯತ್ನಗಳನ್ನು ಮಾಡಿ ವಿವಿಧ ವಿಧಾನಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ತ್ರಿಪುರ ಶೀಘ್ರದಲ್ಲೇ ತನ್ನದೇ ಆದ ಆಲೂಗಡ್ಡೆ ಮತ್ತು ಬಾಳೆ ಪ್ರಬೇಧಗಳನ್ನು ಹೊಂದಲಿದೆ.

ಈ ನೂತನ ಪ್ರಬೇಧಗಳು ರೋಗ ಭೀತಿಯಿಂದ ದೂರವಿರಲಿದ್ದು, ಯಾವುದೇ ಸೋಂಕನ್ನು ತಡೆಗಟ್ಟುವಷ್ಟು ಪ್ರಬಲವಾಗಿರಲಿವೆ. ಆಲೂಗಡ್ಡೆ ಹೊರತಾಗಿ, ರೋಗ ನಿರೋಧಕ ಗುಣ ಹೊಂದಿರುವ ವೈವಿಧ್ಯಮಯ (ಸಾಬ್ರಿ) ಸಿಹಿ ಬಾಳೆಹಣ್ಣನ್ನು ಅಭಿವೃದ್ಧಿಪಡಿಸಲು ಇಲಾಖೆ ಪ್ರಯೋಗ ಮಾಡುತ್ತಿದೆ.

ಸ್ಥಳೀಯ ಮಾರುಕಟ್ಟೆಗಳಲ್ಲಿ ಸಾಬ್ರಿ ಬಾಳೆಹಣ್ಣಿನ ಬೇಡಿಕೆ ಹೆಚ್ಚಿರುವುದರಿಂದ, ಅದಕ್ಕಾಗಿ ರೋಗ ನಿರೋಧಕ ವೈವಿಧ್ಯತೆ ಅಭಿವೃದ್ಧಿಪಡಿಸಲು ತಜ್ಞರು ಶ್ರಮಿಸುತ್ತಿದ್ದಾರೆ. ಈ ನಿರ್ದಿಷ್ಟ ವೈವಿಧ್ಯತೆ ಯಶಸ್ವಿಯಾಗಿ ಅಭಿವೃದ್ಧಿಪಡಿಸಲು ಸಾಧ್ಯವಾದರೆ, ರೈತರು ಅದರಿಂದ ಹೆಚ್ಚಿನ ಲಾಭ ಪಡೆಯಬಹುದು.

ಸಂಶೋಧನಾಧಿಕಾರಿ ದತ್ತಾ ಅವರ ಪ್ರಕಾರ, ಈ ಎಲ್ಲಾ ಪ್ರಬೇಧಗಳು ಕಠಿಣ ರೋಗ ನಿರೋಧಕ ಶಕ್ತಿ ಹೊಂದಿವೆ ಮತ್ತು ಈ ಬೆಳೆಗಳು ಹೊಲಗಳಲ್ಲಿ ಉತ್ತಮವಾಗಿ ಬೆಳೆಯುವ ಮೂಲಕ, ಒಳ್ಳೆಯ ಫಸಲನ್ನು ನೀಡುವುದರಿಂದ ರೈತರು ಉತ್ತಮ ಲಾಭ ಪಡೆಯಲು ಸಾಧ್ಯವಾಗುತ್ತದೆ.

ತೋಟಗಾರಿಕೆ ಸಂಶೋಧನಾ ಸಂಕೀರ್ಣ ನಾಗಿಚೆರಾ ಉಪನಿರ್ದೇಶಕ ರಾಜೀಬ್ ಘೋಷ್ ಮಾತನಾಡಿ, ಇದು ಸಂಶೋಧನಾ ಸಂಕೀರ್ಣದ ಅಡಿ ನಡೆಯುತ್ತಿರುವ ಪ್ರವರ್ತಕ ಯೋಜನೆಗಳಲ್ಲಿ ಒಂದಾಗಿದೆ. ಈ ಬೆಳೆಗಳು ರೈತರನ್ನು ತಲುಪಿದಾಗ ಸಕಾರಾತ್ಮಕ ಫಲಿತಾಂಶಗಳು ಕಂಡು ಬರುತ್ತವೆ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.