ರತ್ಲಾಮ್: ಒಂದು ವಾರದ ಹಿಂದೆ ನಡೆದ ತ್ರಿವಳಿ ಕೊಲೆಯ ಪ್ರಮುಖ ಆರೋಪಿಯನ್ನು ಪೊಲೀಸರು ಗುರುವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಖಾಚ್ರೊದ್ ರಸ್ತೆಯಲ್ಲಿ ನಡೆದಿದೆ.
ವಾರದ ಹಿಂದೆ ನಡೆದ ತ್ರಿವಳಿ ಕೊಲೆ:
ರತ್ಲಾಮ್ ನಗರದ ಔದ್ಯೋಗಿಕ ಠಾಣಾ ವ್ಯಾಪ್ತಿಯ ರಾಜೀವ್ ನಗರದ ಮನೆಯೊಂದರಲ್ಲಿ 50 ವರ್ಷದ ಗೋವಿಂದ್ ರಾಮ್ ಸೋಲಂಕಿ, ಆತನ ಪತ್ನಿ ಶಾರದಾ ಮತ್ತು 20 ವರ್ಷದ ಮಗಳು ದಿವ್ಯಾ ವಾಸಿಸುತ್ತಿದ್ದರು. ದಿವ್ಯಾ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು. ನವೆಂಬರ್ 25ರಂದು ಈ ಮೂವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಮನೆಗಳ್ಳತನ ಮಾಡಿ ಪರಾರಿಯಾಗಿದ್ದರು. ದಿವ್ಯಾ ಸ್ನೇಹಿತೆ ನವೆಂಬರ್ 26ರ ಬೆಳಗ್ಗೆ ಮನೆಗೆ ಬಂದು ನೋಡಿದಾಗ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಕೇಸು ದಾಖಲಿಸಿಕೊಂಡ ರತ್ಲಾಮ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು.
![Triple murder main accused, Triple murder main accused killed, Triple murder main accused killed in police encounter, Ratlam police encounter, Ratlam police encounter news, ತ್ರಿವಳಿ ಕೊಲೆಯ ಪ್ರಮುಖ ಆರೋಪಿ ಸಾವು, ಎನ್ಕೌಂಟರ್ನಲ್ಲಿ ತ್ರಿವಳಿ ಕೊಲೆಯ ಪ್ರಮುಖ ಆರೋಪಿ ಸಾವು, ರತ್ಲಾಮ್ ಪೊಲೀಸ್ ಎನ್‌ಕೌಂಟರ್, ರತ್ಲಾಮ್ ಪೊಲೀಸ್ ಎನ್‌ಕೌಂಟರ್ ಸುದ್ದಿ,](https://etvbharatimages.akamaized.net/etvbharat/prod-images/mp-rat-02-encounter-breking-7204864_03122020230923_0312f_1607017163_100.jpg)
ಓದಿ: ಟ್ರಕ್-ಬೊಲೆರೊ ಮುಖಾಮುಖಿ ಡಿಕ್ಕಿ: ಐವರು ಸಾವು, 6 ಜನರಿಗೆ ಗಾಯ
ಪ್ರಮುಖ ಆರೋಪಿ ಎಸ್ಕೇಪ್:
ಬುಧವಾರ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದರು. ಆದ್ರೆ ಈ ವೇಳೆ ಪ್ರಮುಖ ಆರೋಪಿ ದಿಲೀಪ್ ದೇವಲ್ ಪರಾರಿಯಾಗಿದ್ದ.
ಎನ್‌ಕೌಂಟರ್:
![Triple murder main accused, Triple murder main accused killed, Triple murder main accused killed in police encounter, Ratlam police encounter, Ratlam police encounter news, ತ್ರಿವಳಿ ಕೊಲೆಯ ಪ್ರಮುಖ ಆರೋಪಿ ಸಾವು, ಎನ್ಕೌಂಟರ್ನಲ್ಲಿ ತ್ರಿವಳಿ ಕೊಲೆಯ ಪ್ರಮುಖ ಆರೋಪಿ ಸಾವು, ರತ್ಲಾಮ್ ಪೊಲೀಸ್ ಎನ್‌ಕೌಂಟರ್, ರತ್ಲಾಮ್ ಪೊಲೀಸ್ ಎನ್‌ಕೌಂಟರ್ ಸುದ್ದಿ,](https://etvbharatimages.akamaized.net/etvbharat/prod-images/9756180_untitled.jpg)
ಪ್ರಮುಖ ಆರೋಪಿ ದಿಲೀಪ್ ದೇವಲ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರಿಗೆ ಗುರುವಾರ ಆತನ ಲೊಕೇಷನ್ ಪತ್ತೆಯಾಗಿತ್ತು. ಖಾಚ್ರೊದ್ ರಸ್ತೆ ನಗರದಲ್ಲಿ ಅವಿತಿದ್ದ ಆರೋಪಿಯನ್ನು ಪೊಲೀಸರು ಸುತ್ತುವರಿದಿದ್ದಾರೆ. ಈ ವೇಳೆ ಆತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಇದಕ್ಕೆ ಪ್ರತ್ಯುತ್ತರ ನೀಡಿದ ಪೊಲೀಸರು ಗುಂಡಿಕ್ಕಿ ಹೊಡೆದುರುಳಿಸಿದ್ದರು.
ಐವರು ಪೊಲೀಸರಿಗೆ ಗಾಯ:
ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಬ್ ಇನ್ಸ್ಪೆಕ್ಟರ್ ಮತ್ತು ಮೂವರು ಕಾನ್ಸ್ಟೇಬಲ್ಗಳಿಗೆ ಗಾಯವಾಗಿದೆ. ಪ್ರಮುಖ ಆರೋಪಿ ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಓದಿ: ಬೋಟ್ ದುರಂತ: ಮೀನುಗಾರ ಅನ್ಸಾರ್ ಮೃತದೇಹಕ್ಕಾಗಿ ಮುಂದುವರೆದ ಶೋಧ
ಸಿಎಂ ಅಭಿನಂದನೆ:
ಎನ್‌ಕೌಂಟರ್ ನಡೆಸಿದ ಪೊಲೀಸ್ ತಂಡಕ್ಕೆ ಮಧ್ಯಪ್ರದೇಶ ಜನರಿಂದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಭಿನಂದನೆ ಸಲ್ಲಿಸಿದ್ದಾರೆ.