ETV Bharat / bharat

ರಾಜಸ್ಥಾನದ ದೇವಸ್ಥಾನದಲ್ಲಿ 'ನೈವೇದ್ಯ ಲೂಟಿ' ಮಾಡುವ ಸಂಪ್ರದಾಯ: ಇದಕ್ಕಿದೆ 350 ವರ್ಷಗಳ ಇತಿಹಾಸ! - ನೈವೇದ್ಯ ಕಳ್ಳತನ

ರಾಜಸ್ಥಾನದ ದೇವಸ್ಥಾನದಲ್ಲಿ ನೈವೇದ್ಯವನ್ನು ಲೂಟಿ ಮಾಡುವ ಸಂಪ್ರದಾಯವಿದೆ. ಇದು 350 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಆಚರಣೆಯಾಗಿದೆ.

ನೈವೇದ್ಯ ಲೂಟಿ
ನೈವೇದ್ಯ ಲೂಟಿ
author img

By ETV Bharat Karnataka Team

Published : Nov 14, 2023, 9:26 PM IST

Updated : Nov 14, 2023, 10:18 PM IST

ದೇವಸ್ಥಾನದಲ್ಲಿ ನೈವೇದ್ಯ ಕದ್ದೊಯ್ಯುತ್ತಿರುವ ಜನರು

ಜೈಪುರ, ರಾಜಸ್ಥಾನ: ಕಳ್ಳತನ ಮಾಡಿದರೆ ಕಾನೂನಿನಲ್ಲಿ ಶಿಕ್ಷೆ ಇದೆ. ಆದರೆ, ರಾಜಸ್ಥಾನದ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಅಲ್ಲಿನ ಜನರೇ ಅವಕಾಶ ನೀಡುತ್ತಾರೆ. ಹೀಗೆ ಮಾಡಿದರೆ ಅಲ್ಲಿನವರಿಗೆ ಒಳ್ಳೆಯದಾಗುತ್ತದಂತೆ. ಇಂಥದ್ದೊಂದು ಆಚರಣೆ ದೀಪಾವಳಿಯ ಮರುದಿನ ನಡೆದಿದೆ. ಇದು 350 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಪದ್ಧತಿಯಾಗಿದೆ ಎಂಬುದು ಗಮನಾರ್ಹ ಸಂಗತಿ.

ರಾಜಸ್ಥಾನದ ರಾಜ್‌ಸಮಂದ್‌ನಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ಐವತ್ತಾರು ಪ್ರಕಾರದ ನೈವೇದ್ಯಗಳನ್ನು ಪೂಜೆಗೆ ಇಡಲಾಗುತ್ತದೆ. ಬಳಿಕ ಅನ್ನಕೂಟ ಏರ್ಪಡಿಸಲಾಗುತ್ತದೆ. ಕ್ವಿಂಟಲ್​ಗಟ್ಟಲೆ ಅನ್ನವನ್ನು ನೈವೇದ್ಯ ಮಾಡಲಾಗುತ್ತದೆ. ಅದನ್ನು ಬುಡಕಟ್ಟು ಸಮುದಾಯದ ಜನರು ದೇವಸ್ಥಾನದಿಂದ 'ಲೂಟಿ' ಮಾಡುತ್ತಾರೆ. ಇದನ್ನು ನೋಡಲು ಜನರು ಸುತ್ತಲೂ ನೆರೆದಿರುತ್ತಾರೆ.

ಈ ಹಬ್ಬಕ್ಕಿದೆ ಶತಮಾನಗಳ ಇತಿಹಾಸ: ಸಂಭ್ರಮದ ದೀಪಾವಳಿ ಆಚರಿಸಿದ ಬಳಿಕ ಇಲ್ಲಿ ರಾತ್ರಿ ನಡೆಯುವ ಮಹೋತ್ಸವದಲ್ಲಿ ಶ್ರೀನಾಥ್​ಜಿ ದೇವರಿಗೆ ಅನ್ನ, ಅಕ್ಕಿ ನೈವೇದ್ಯ ಇಡಲಾಗುತ್ತದೆ. ರಾತ್ರಿ 11 ಗಂಟೆ ಸುಮಾರಿಗೆ 'ಅನ್ನಕೂಟ'ವನ್ನು ಇಲ್ಲಿನ ಬುಡಕಟ್ಟು ಸಮುದಾಯದ ಜನರು ಕೊಳ್ಳೆ ಹೊಡೆಯುವ ಸಂಪ್ರದಾಯವಿದೆ. ಆದಿವಾಸಿಗಳು ಶ್ರೀನಾಥಜೀಯವರ ಮುಂದೆ ಇಟ್ಟಿದ್ದ ಐವತ್ತಾರು ಭೋಗ ಮತ್ತು ಅನ್ನ ಪ್ರಸಾದವನ್ನು ದೋಚಿದರು.

ಈ ಹಬ್ಬಕ್ಕೆ 350 ವರ್ಷಗಳ ಇತಿಹಾಸವಿದೆ. ಹೀಗೆ ಕದ್ದೊಯ್ದ ಅಕ್ಕಿ, ಅನ್ನವನ್ನು ಆದಿವಾಸಿಗಳು ತಮ್ಮ ಸಂಬಂಧಿಕರಿಗೆ ವಿತರಿಸುತ್ತಾರೆ. ಇದನ್ನು ಅವರ ಔಷಧವಾಗಿಯೂ ಬಳಸುತ್ತಾರೆ. ಅಕ್ಕಿಯನ್ನು ಮನೆಗಳಲ್ಲಿ ಇಟ್ಟುಕೊಳ್ಳುವುದರಿಂದ ಅಭಿವೃದ್ಧಿ ಸಾಧಿಸುತ್ತೇವೆ. ಯಾವುದೇ ರೀತಿಯ ತೊಂದರೆಗಳನ್ನು ಕಾಡುವುದಿಲ್ಲ. ಅನ್ನ ಪ್ರಸಾದ ಸೇವನೆಯಿಂದ ರೋಗಗಳೂ ವಾಸಿಯಾಗುತ್ತವೆ ಎಂಬ ನಂಬಿಕೆ ಅವರಲ್ಲಿದೆ.

ಶ್ರೀನಾಥ್​ಜೀ ಮಹೋತ್ಸವದಲ್ಲಿ ನಡೆಯುವ ಅನ್ನಕೂಟದಲ್ಲಿ ಎಲ್ಲ ಜಾತಿ, ಧರ್ಮಗಳ ಜನರು ಭಾಗವಹಿಸುತ್ತಾರೆ. ಎಲ್ಲರ ಸಹಭಾಗಿತ್ವ ಇಲ್ಲದೇ ಮಹೋತ್ಸವ ಪೂರ್ಣವಾಗುವುದಿಲ್ಲ. ಅನ್ನವನ್ನು ಕದ್ದೊಯ್ಯುವುದೂ ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಎಂದು ದೇವಸ್ಥಾನದ ಪಟ್ಟಾಧಿಪತಿ ಚಿರಂಜೀವ್ ವಿಶಾಲ್ ಬಾವಾ ಹೇಳಿದರು.

ಬಟ್ಟೆಯಲ್ಲಿ ಅನ್ನ ಲೂಟಿ: ದೀಪಾವಳಿಯ ಮರುದಿನವಾದ ನವೆಂಬರ್​ 13 ರಂದು ಈ ಆಚರಣೆ ನಡೆಯಿತು. ಅನ್ನಕೂಟದ ಹಬ್ಬದ ನಿಮಿತ್ತ ರಾತ್ರಿ 11 ಗಂಟೆ ಸುಮಾರಿಗೆ ಸಂಪ್ರದಾಯದಂತೆ ಬುಡಕಟ್ಟು ಸಮುದಾಯದ ಪುರುಷರು ಮತ್ತು ಮಹಿಳೆಯರು ಅನ್ನಕೂಟದ ಅಕ್ಕಿ ಮತ್ತು ಇತರ ವಸ್ತುಗಳನ್ನು ದೋಚಿದರು. ತಾವು ಕಟ್ಟಿಕೊಂಡಿದ್ದ ಉಡಿಗಳಲ್ಲಿ (ಬಟ್ಟೆಯ ಚೀಲ) ಅನ್ನವನ್ನು ಹೊತ್ತೊಯ್ದರು. ಅನ್ನಕೂಟದ ಲೂಟಿ ನೋಡಲು ವಿವಿಧ ರಾಜ್ಯಗಳಿಂದ ನೂರಾರು ಜನರು ಸೇರಿದ್ದರು.

ಇದನ್ನೂ ಓದಿ: ಹಿಮಾಚಲಪ್ರದೇಶದಲ್ಲಿ ಕಲ್ಲು ತೂರಾಟದ ಜಾತ್ರೆ: ರಕ್ತ ಸುರಿದಲ್ಲಿ ಆಟ ಸ್ಥಗಿತ, ದೇವಿಗೆ ರಕ್ತತರ್ಪಣ!

Last Updated : Nov 14, 2023, 10:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.