ETV Bharat / bharat

ಕೆಂಪು ಪಟ್ಟಿಯಿಂದ ಹಳದಿ ಸೇರಿದ ಭಾರತ: ಇಂಗ್ಲೆಂಡ್​ ಪ್ರಯಾಣದ ನಿರ್ಬಂಧ ಕೊಂಚ ಸಡಿಲಿಕೆ

ಭಾರತದಿಂದ ಸಂಪೂರ್ಣ ಲಸಿಕೆ ಪಡೆದ (ಎರಡು ಡೋಸ್‌) ಪ್ರಯಾಣಿಕರು ಇನ್ನುಮುಂದೆ ಕಡ್ಡಾಯವಾಗಿ 10 ದಿನಗಳ ಹೋಟೆಲ್ ಕ್ವಾರಂಟೈನ್‌ಗೆ ಒಳಗಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಭಾರತವನ್ನು ಕೆಂಪು ಪಟ್ಟಿಯಿಂದ ಯೆಲ್ಲೋ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಬ್ರಿಟನ್​ ಸರ್ಕಾರ ತಿಳಿಸಿದೆ.

Travel curb
ಇಂಗ್ಲೆಂಡ್​ ಪ್ರಯಾಣಕ್ಕೆ ಕೊಂಚ ರಿಲೀಫ್​
author img

By

Published : Aug 5, 2021, 7:29 AM IST

ಲಂಡನ್: ಜಗತ್ತಿನಲ್ಲಿ ಕೊರೊನಾ ಪ್ರಮಾಣ ಹೆಚ್ಚಾಗುತ್ತಿದ್ದು ಎಲ್ಲಾ ದೇಶಗಳು ಪ್ರವಾಸಿಗರು, ಉದ್ಯೋಗಸ್ಥರು ತಮ್ಮ ದೇಶಗಳನ್ನು ಪ್ರವೇಶಿಸದಂತೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದ್ದವು. ಆ ಬಳಿಕ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ನಿರ್ಬಂಧ ಸಡಿಲಗೊಳಿಸಿ, ಲಸಿಕೆ ಹಾಕಿಸಿಕೊಳ್ಳುವುದು ಮತ್ತು ಕ್ವಾರಂಟೈನ್​ ನಿಯಮವನ್ನು ಕಡ್ಡಾಯಗೊಳಿಸಿದ್ದವು. ಅದೇ ರೀತಿ, ಬ್ರಿಟನ್​ ಸರ್ಕಾರ ಕೂಡಾ ಭಾರತದಿಂದ ಆಗಮಿಸುವ ಜನರಿಗೆ ಇನ್ನಿತರ ಕೋವಿಡ್‌ ನಿರ್ಬಂಧಗಳ ಜೊತೆಗೆ 10 ದಿನಗಳ ಕಡ್ಡಾಯ ಹೋಟೆಲ್ ಕ್ವಾರಂಟೈನ್‌ ನಿಯಮ ವಿಧಿಸಿತ್ತು.

ಆದರೀಗ ಭಾರತದಿಂದ ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರು ಕಡ್ಡಾಯ ಹೋಟೆಲ್ ಕ್ವಾರಂಟೈನ್‌ಗೆ ಒಳಗಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಭಾರತವನ್ನು ಕೋವಿಡ್‌ ಕೆಂಪು ಪಟ್ಟಿಯಿಂದ ಯೆಲ್ಲೋ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಬ್ರಿಟನ್​ ಸರ್ಕಾರ ತಿಳಿಸಿದೆ. ಭಾರತ ಮತ್ತು ಬ್ರಿಟನ್ ನಡುವಿನ ಪ್ರಯಾಣದ ನಿಯಮಗಳನ್ನು ಸಡಿಲಗೊಳಿಸುವಂತೆ ಅನಿವಾಸಿ ಭಾರತೀಯರು ಒತ್ತಾಯಿಸುತ್ತಿದ್ದರು.

  • UAE, Qatar, India and Bahrain will be moved from the Red List 🔴 to the Amber List 🟠

    All changes come into effect Sun 8th August at 4am.

    See the full list of changes made today here 👇 [2/3]https://t.co/iYAJhsdm3y

    — Rt Hon Grant Shapps MP (@grantshapps) August 4, 2021 " class="align-text-top noRightClick twitterSection" data=" ">

ಬ್ರಿಟನ್‌ನ 'ಟ್ರಾಫಿಕ್ ಲೈಟ್ ವ್ಯವಸ್ಥೆ' ಅಡಿಯಲ್ಲಿ ಯೆಲ್ಲೋ ಲಿಸ್ಟ್​ನಲ್ಲಿರುವ ದೇಶಗಳ ಪ್ರಯಾಣಿಕರು ಆಗಮಿಸಿದರೆ ಮನೆಯಲ್ಲಿಯೇ 10 ದಿನಗಳ ಕ್ವಾರಂಟೈನ್​ ಆಗಬೇಕಿದೆ. "ಯುಎಇ, ಕತಾರ್, ಭಾರತ ಮತ್ತು ಬಹ್ರೇನ್ ದೇಶದ ಜನರನ್ನು ಕೆಂಪು ಪಟ್ಟಿಯಿಂದ ಯೆಲ್ಲೋ ಪಟ್ಟಿಗೆ ವರ್ಗಾಯಿಸಲಾಗಿದೆ. ಎಲ್ಲಾ ಬದಲಾವಣೆಗಳು ಆಗಸ್ಟ್ 8ರ ಬೆಳಿಗ್ಗೆ 4 ಗಂಟೆಯಿಂದ (ಸ್ಥಳೀಯ ಕಾಲಮಾನ) ಜಾರಿಗೆ ಬರಲಿದೆ" ಎಂದು ಯುಕೆ ಸಾರಿಗೆ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ.

"ನಾವು ನಮ್ಮ ಎಚ್ಚರಿಕೆಯ ವಿಧಾನವನ್ನು ಮುಂದುವರಿಸಿದ್ದೇವೆ. ಆದರೆ ಪ್ರಪಂಚದಾದ್ಯಂತ ಕುಟುಂಬಗಳು, ಸ್ನೇಹಿತರು ಮತ್ತು ವ್ಯವಹಾರಗಳೊಂದಿಗೆ ಸಂಪರ್ಕ ಹೊಂದಲು ಬಯಸುವ ಜನರಿಗೆ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ" ಎಂದು ಸ್ಪಷ್ಟನೆ ನೀಡಿದ್ದಾರೆ.

ಯೆಲ್ಲೋ ಪಟ್ಟಿಯಲ್ಲಿರುವ ದೇಶಗಳು ಅನುಸರಿಸಬೇಕಾದ ಕ್ರಮಗಳೇನು?

ಪ್ರಯಾಣಿಕರು ಯುಕೆಗೆ ಹೊರಡುವ ಮೂರು ದಿನಗಳ ಮೊದಲು ಕೋವಿಡ್ ಪರೀಕ್ಷೆ ಮಾಡಿಸಬೇಕು. ಇಂಗ್ಲೆಂಡಿಗೆ ಆಗಮಿಸಿದ ನಂತರ ಪ್ರಯಾಣಿಕರು ಮನೆಯಲ್ಲಿ ಅಥವಾ ಅವರು ತಮ್ಮ ಸ್ಥಳವೆಂದು ದೃಢೀಕರಿಸಿದ ಕೊಠಡಿಯಲ್ಲಿ 10 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಎರಡನೇ ದಿನ ಅಥವಾ ಎಂಟನೇ ದಿನದಲ್ಲಿ ಮತ್ತೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಯುಕೆ, ಇಯು ಮತ್ತು ಯುಎಸ್​ನಲ್ಲಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದ 18 ವರ್ಷದೊಳಗಿನವರು ಹೋಮ್ ಕ್ವಾರಂಟೈನ್​ನಿಂದ ವಿನಾಯಿತಿ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.