ತಿರುವಾಂಕೂರು(ಕೇರಳ): ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಶಾಖೆಗಳ ಚಟುವಟಿಕೆಗಳನ್ನು ಬ್ಯಾನ್ ಮಾಡುವ ಮಹತ್ವದ ನಿರ್ಧಾರವನ್ನು ತಿರುವಾಂಕೂರು ದೇವಸ್ವಂ ಮಂಡಳಿ ತೆಗೆದುಕೊಂಡಿದೆ. ಈ ದೇವಸ್ವಂ ಮಂಡಳಿಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ತಿರುವಾಂಕೂರು ದೇವಸ್ವಂ ಮಂಡಳಿ ಅಧೀನಕ್ಕೆ ಒಳಪಡುವ 1,240 ದೇವಾಲಯಗಳಿಗೆ ಈ ಅಧಿಸೂಚನೆ ಅನ್ವಯವಾಗಲಿದ್ದು, ಆರ್ಎಸ್ಎಸ್ ದೇವಾಲಯಗಳ ಆವರಣದಲ್ಲಿ ನಡೆಸುತ್ತಿದ್ದ ತರಬೇತಿ, ಸಾಮೂಹಿಕ ವ್ಯಾಯಾಮಕ್ಕೆ ಕಡಿವಾಣ ಹಾಕಲಾಗಿದೆ.
ದೇವಾಲಯದ ಆವರಣದಲ್ಲಿ ಕೆಲವು ಅಧಿಕಾರಿಗಳಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ವಂನ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಹೆತ್ತು ಸಲುಹಿದ ಹೆತ್ತವ್ವನ ಕಳೆಬರ ಹೊತ್ತು ಹೆಣ್ಮಕ್ಕಳಿಂದ್ಲೇ ಅಗ್ನಿಸ್ಪರ್ಶ!
ಸುತ್ತೋಲೆ ಸಂಬಂಧ ಎಲ್ಲಾ ದೇವಾಲಯಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದ್ದು, ಯಾವುದಾದರೂ ಕಾನೂನುಬಾಹಿರ ಚಟುವಟಿಕೆ ಕಂಡುಬಂದಲ್ಲಿ ಆಯುಕ್ತರ ಕಚೇರಿ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಇದರ ಜೊತೆಗೆ ದೇವಾಲಯದ ಆವರಣದಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೂಡಾ ನೀಡಲಾಗಿದೆ.