ETV Bharat / bharat

ಪೊಲೀಸ್​ ಇಲಾಖೆಗೆ 9 ತೃತೀಯ ಲಿಂಗಿಗಳ ಆಯ್ಕೆ.. ಸದ್ಯದಲ್ಲೇ ನಕ್ಸಲ್​ ವಿರುದ್ಧ ಹೋರಾಟಕ್ಕೆ ಟ್ರಾನ್ಸ್‌ಜೆಂಡರ್ಸ್​ ಅಣಿ - ಬಸ್ತಾರ್ ಫೈಟರ್ಸ್‌ನಲ್ಲಿ ಒಂಬತ್ತು ತೃತೀಯ ಲಿಂಗಿಗಳು

ಬಸ್ತಾರ್ ಫೈಟರ್ಸ್‌ನಲ್ಲಿ ಛತ್ತೀಸ್‌ಗಢದ 9 ಟ್ರಾನ್ಸ್‌ಜೆಂಡರ್‌ಗಳನ್ನು ಆಯ್ಕೆ ಮಾಡಲಾಗಿದೆ. ಬಸ್ತಾರ್ ಫೈಟರ್ಸ್‌ನಲ್ಲಿ ಒಂಬತ್ತು ತೃತೀಯ ಲಿಂಗಿಗಗಳು ಏಕಕಾಲದಲ್ಲಿ ನೇಮಕ ಆಗಿರುವುದು ಇದೇ ಮೊದಲು. ಈಗ ಈ ತೃತೀಯ ಲಿಂಗಿಗಳನ್ನು ನಕ್ಸಲರ ಪ್ರದೇಶವಾಗಿರುವ ಬಸ್ತಾರ್‌ಕ್ಕೆ ನಿಯೋಜಿಸಲಾಗುವುದು. ತೃತೀಯ ಲಿಂಗಿಗಳ ಈ ಯಶಸ್ಸು ತೃತೀಯಲಿಂಗಿ ಸಮುದಾಯಕ್ಕೆ ಮನ್ನಣೆ ನೀಡಲಿದೆ.

Transgenders get appointment in Bastar Fighters Police  transgender happy after getting selected in bastar Fighters Police  Transgender selected in Bastar Fighters  Bastar Fighters Police  ಪೊಲೀಸ್​ ಇಲಾಖೆಗೆ 9 ತೃತೀಯ ಲಿಂಗಿಗಳು ಆಯ್ಕೆ  ದ್ಯದರಲ್ಲೇ ನಕ್ಸಲ್​ ವಿರುದ್ಧ ಕಣಕ್ಕಿಳಿಯಲಿರುವ ಟ್ರಾನ್ಸ್‌ಜೆಂಡರ್ಸ್​ ಬಸ್ತಾರ್ ಫೈಟರ್ಸ್ ಪೊಲೀಸ್​ ಪರೀಕ್ಷೆ  ಬಸ್ತಾರ್ ಫೈಟರ್ಸ್​ ಪೊಲೀಸ್​ ಬಸ್ತಾರ್ ಫೈಟರ್ಸ್‌ನಲ್ಲಿ ಛತ್ತೀಸ್‌ಗಢದ 9 ಟ್ರಾನ್ಸ್‌ಜೆಂಡರ್‌ಗಳನ್ನು ಆಯ್ಕೆ
ಪೊಲೀಸ್​ ಇಲಾಖೆಗೆ 9 ತೃತೀಯ ಲಿಂಗಿಗಳು ಆಯ್ಕೆ
author img

By

Published : Aug 16, 2022, 11:11 AM IST

ರಾಯ್‌ಪುರ: ಛತ್ತೀಸ್‌ಗಢಕ್ಕೆ ಇಂದು ಹೆಮ್ಮೆಯ ದಿನ. ಬಸ್ತಾರ್ ಫೈಟರ್ಸ್ ಪೊಲೀಸ್​ ಪರೀಕ್ಷೆಯಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದ 9 ಜನರು ಆಯ್ಕೆಯಾಗಿದ್ದಾರೆ. ಈಗಾಗಲೇ 13 ಮಂದಿ ತೃತೀಯ ಲಿಂಗಿಗಳು ಪೊಲೀಸ್ ಪೇದೆಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೃತೀಯ ಲಿಂಗಿ ಸಮುದಾಯಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಇದು ಹೆಮ್ಮೆ ಸಂಗತಿಯಾಗಿದೆ.

9 ತೃತೀಯ ಲಿಂಗಿಗಳು ಬಸ್ತಾರ್ ಫೈಟರ್ಸ್​ ಪೊಲೀಸ್​ನಲ್ಲಿ ಕಾರ್ಯ ಸಲ್ಲಿಸುವುದಕ್ಕಾಗಿ ಕಠಿಣ ಪರಿಶ್ರಮ ಮತ್ತು ಸಮರ್ಪಣಾಭಾವದಿಂದ ಪೊಲೀಸರ ಬೌದ್ಧಿಕ ಮತ್ತು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಭಾರತ ಮತ್ತು ಜಗತ್ತಿಗೆ ತಮ್ಮ ಕೌಶಲ್ಯ ತೋರಿಸಲು ಈ ತೃತೀಯಲಿಂಗಿಗಳು ಸಜ್ಜಾಗಿದ್ದಾರೆ. ಅವಕಾಶ ಸಿಕ್ಕರೆ ಅವರು ಪುರುಷರು ಮತ್ತು ಮಹಿಳೆಯರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಬಹುದು ಮತ್ತು ಗೌರವಯುತ ಜೀವನಕ್ಕೆ ಅರ್ಹರು ಎಂಬ ಸಂದೇಶವನ್ನು ಸಾರಲಿದ್ದಾರೆ.

ತೃತೀಯ ಲಿಂಗಿಗಗಳಲ್ಲಿ ಸಂತಸ: ಸಮಾಜದಲ್ಲಿ ತೃತೀಯಲಿಂಗಿಗಳನ್ನು ಕಳಂಕ ಎಂದು ಪರಿಗಣಿಸುವುದರಿಂದ ಅವರನ್ನು ಕುಟುಂಬ ಮತ್ತು ಸಮಾಜದಿಂದ ಬಹಿಷ್ಕರಿಸಲಾಗಿದೆ. ಅವರು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಭಾಗವಹಿಸುವವರಾಗಿ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ನನಗೆ ಇಂದು ತುಂಬಾ ಸಂತೋಷವಾಗಿದೆ. ನನ್ನ ಸಂತಸ ವ್ಯಕ್ತಪಡಿಸಲು ನನಗೆ ಪದಗಳಿಲ್ಲ.

ನಾನು ಮತ್ತು ನನ್ನ ಎಲ್ಲಾ ಸಹೋದ್ಯೋಗಿಗಳು ಈ ಪರೀಕ್ಷೆಗಾಗಿ ತುಂಬಾ ಕಷ್ಟಪಟ್ಟಿದ್ದೇವೆ. ಇದು ನಮಗೆ ಅಂತಹ ಅವಕಾಶವಾಗಿತ್ತು. ಇದು ನಮ್ಮ ಜೀವನವನ್ನು ಬದಲಾಯಿಸಬಹುದು. ಅದಕ್ಕಾಗಿಯೇ ಎಲ್ಲರೂ ಹಗಲಿರುಳು ಶ್ರಮಿಸಿದ್ದೇವೆ ಎಂದು ಆಯ್ಕೆಯಾದ ಸ್ಪರ್ಧಿ ದಿವ್ಯಾ ನಿಶಾದ್ ಮನದ ಮಾತಾಗಿದೆ.

ಇದು ಇನ್ನೂ ನಂಬಲಾಗದ ಸುದ್ದಿ. ಏಕೆಂದರೆ ನನಗೆ ಗೌರವ ಮತ್ತು ಗೌರವದ ಕೆಲಸ ಸಿಗುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ ಎಂದು ಜಗದಲ್‌ಪುರದಿಂದ ಆಯ್ಕೆಯಾದ ಬರ್ಖಾ ಸಂತಸದ ಮಾತಾಗಿದೆ. ಆಯ್ಕೆಯಾದ ಟ್ರಾನ್ಸ್‌ಜೆಂಡರ್‌ಗಳು ಛತ್ತೀಸ್‌ಗಢ ಸರ್ಕಾರ (ಗೃಹ ಇಲಾಖೆ), ಛತ್ತೀಸ್‌ಗಢ ಪೊಲೀಸ್ ಪ್ರಧಾನ ಕಚೇರಿ ಮತ್ತು ಬಸ್ತಾರ್ ಫೈಟರ್ಸ್ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಟ್ರಾನ್ಸ್‌ಜೆಂಡರ್‌ ಹಕ್ಕುಗಳ ಕಾರ್ಯಕರ್ತೆ ವಿದ್ಯಾ ರಜಪೂತ್ ಅಭಿನಂದನೆ ಸಲ್ಲಿಸಿದ್ದಾರೆ.

ದಿವ್ಯಾ, ದಾಮಿನಿ, ಸಂಧ್ಯಾ, ಸಾನು, ರಾಣಿ, ಹಿಮಾಂಶಿ, ರಿಯಾ, ಸೀಮಾ (ಕಂಕರ್ ಗ್ರಾಮ), ಬರ್ಖಾ (ಜಗದಲ್​ಪುರ್ ಗ್ರಾಮ) ಸೇರಿ 9 ತೃತೀಯಲಿಂಗಿಗಳು ಬಸ್ತಾರ್​ ಫೈಟರ್ಸ್​ ಪೊಲೀಸ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಬಸ್ತಾರ್​ ಒಂದು ನಕ್ಸಲೈಟ್​ ಪ್ರದೇಶವಾಗಿದ್ದು, ಬಸ್ತಾರ್​ ಫೈಟರ್ಸ್​ ಪೊಲೀಸ್ ವಿಭಾಗವು ಒಟ್ಟು ಏಳು ಜಿಲ್ಲೆಗಳಲ್ಲಿ ಆಯ್ಕೆಯ ಪ್ರಕ್ರಿಯೆ ನಡೆಸುತ್ತದೆ. ಇದರಲ್ಲಿ ಆಯ್ಕೆಯಾದವರಿಗೆ ನಕ್ಸಲ್​ ವಿರುದ್ಧ ಹೋರಾಟ ನಡೆಸಲು ತರಬೇತಿ ನೀಡಲಾಗುವುದು.

ಓದಿ: ನನ್ನ ಇಚ್ಛೆಗೆ ವಿರುದ್ಧವಾಗಿ ಲಿಂಗ ಬದಲಾವಣೆ: ಇಬ್ಬರು ತೃತೀಯ ಲಿಂಗಿಗಳ ವಿರುದ್ಧ ತೃತೀಯ ಲಿಂಗಿಯ ಆರೋಪ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.