ETV Bharat / bharat

ತೃತೀಯ ಲಿಂಗಿಗಳು ಅಸ್ತಿತ್ವದಲ್ಲಿರುವ ಮೀಸಲಾತಿ ಅಡಿ ಪ್ರಯೋಜನ ಪಡೆಯಲು ಅವಕಾಶ: ಸುಪ್ರೀಂಕೋರ್ಟ್‌ಗೆ ತಿಳಿಸಿದ ಕೇಂದ್ರ..!

ತೃತೀಯಲಿಂಗಿಗಳು ಎಸ್ಸಿ, ಎಸ್ಟಿ, ಎಸ್​ಇಬಿಒಸಿ ಹಾಗೂ ಇಡಬ್ಲ್ಯೂಎಸ್​ ವರ್ಗಗಳ ಅಡಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಸ್ತಿತ್ವದಲ್ಲಿರುವ ಮೀಸಲಾತಿಯ ವರ್ಗಗಳ ಅಡಿ ಬಂದರೆ, ಅವರು ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

Centre to SC Transgender persons can avail quota
ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌
author img

By

Published : Jul 26, 2023, 3:24 PM IST

ನವದೆಹಲಿ: ''ತೃತೀಯಲಿಂಗಿಗಳು ಉದ್ಯೋಗಗಳು ಮತ್ತು ಶಿಕ್ಷಣವನ್ನು ಎಸ್‌ಸಿ, ಎಸ್‌ಟಿ, ಎಸ್‌ಇಬಿಸಿ, ಇಡಬ್ಲ್ಯೂಎಸ್ ವರ್ಗಗಳ ಕೋಟಾ ಅಡಿ ಪ್ರಯೋಜನಗಳನ್ನು ಪಡೆಯಬಹುದು'' ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಹೇಳಿದೆ. ಸುಪ್ರೀಂಕೋರ್ಟ್, 2014ರ ತೀರ್ಪಿನಲ್ಲಿ, ತೃತೀಯಲಿಂಗಿಗಳನ್ನು "ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು" ಎಂದು ಪರಿಗಣಿಸಲು ಮತ್ತು ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣದಲ್ಲಿ ಎಲ್ಲ ರೀತಿಯ ಮೀಸಲಾತಿಗಳನ್ನು ವಿಸ್ತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿತ್ತು.

ಮೀಸಲಾತಿ ವಿವರ ಇಲ್ಲಿದೆ ಗಮನಿಸಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪ್ರತಿವಾದಿ ಅಫಿಡವಿಟ್‌ನಲ್ಲಿ, ಬಡವರು ಮತ್ತು ಸೌಲಭ್ಯವಂಚಿತರನ್ನು ಮುಖ್ಯವಾಹಿನಿಗೆ ತರುವ ಉದ್ದೇಶಕ್ಕಾಗಿ ಸರ್ಕಾರ ಮೀಸಲಾತಿ ನೀಡುತ್ತಿದೆ. ಶಿಕ್ಷಣ ಅಥವಾ ಉದ್ಯೋಗದಲ್ಲಿ ಟ್ರಾನ್ಸ್‌ಜೆಂಡರ್ (ತೃತೀಯಲಿಂಗಿಗಳು) ವ್ಯಕ್ತಿಗಳಿಗೆ ಪ್ರತ್ಯೇಕ ಮೀಸಲಾತಿ ಇಲ್ಲ ಎಂದು ಹೇಳಿದೆ. ಕೇಂದ್ರ ಸರ್ಕಾರಿ ಸೇವೆಗಳಲ್ಲಿ ನೇರ ನೇಮಕಾತಿ ಮತ್ತು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಮೀಸಲಾತಿ ಪ್ರಯೋಜನಗಳು ಈ ಕೆಳಗಿನಂತಿವೆ ಎಂದು ಅಫಿಡವಿಟ್ ಹೇಳಿದೆ. ಪರಿಶಿಷ್ಟ ಜಾತಿಗಳು (ಎಸ್‌ಸಿ) 15%, ಪರಿಶಿಷ್ಟ ಪಂಗಡಗಳು (ಎಸ್​ಟಿ) 7.5%, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು (ಎಸ್​ಇಬಿಸಿ) 27%, ಆರ್ಥಿಕವಾಗಿ ದುರ್ಬಲ ವಿಭಾಗಗಳು (ಇಡಬ್ಲ್ಯೂಎಸ್​) 10% ರಷ್ಟು ಮೀಸಲಾತಿ ಇದೆ.

ಸಂಸತ್ತು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆಯನ್ನು ಅಂಗೀಕರಿಸಿತು. ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಕಲ್ಯಾಣಕ್ಕಾಗಿ ಆದರೆ, ಸಮುದಾಯಕ್ಕೆ ಕೋಟಾ ಪ್ರಯೋಜನಗಳನ್ನು ಒದಗಿಸಲಿಲ್ಲ. ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ, '' ಈ ಮೇಲಿನ 4 ಮೀಸಲಾತಿಗಳನ್ನು ಒಳಗೊಂಡಂತೆ ಯಾವುದೇ ಮೀಸಲಾತಿ ಪ್ರಯೋಜನಗಳನ್ನು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಸೇರಿದಂತೆ ದೇಶದ ಸೌಲಭ್ಯವಂಚಿತ ಮತ್ತು ಅರ್ಹ ಜನಸಂಖ್ಯೆಯು ಪಡೆಯಬಹುದು'' ಎಂದು ಕೇಂದ್ರ ಸರ್ಕಾರ ಹೇಳಿದೆ.

ಎಸ್‌ಸಿ, ಎಸ್‌ಟಿ, ಎಸ್‌ಇಬಿಸಿ ಸಮುದಾಯಗಳಿಗೆ ಸೇರಿದ ಟ್ರಾನ್ಸ್‌ಜೆಂಡರ್‌ಗಳು ಈಗಾಗಲೇ ಈ ಸಮುದಾಯಗಳಿಗೆ ಮೀಸಲಿಟ್ಟ ಮೀಸಲಾತಿಗೆ ಅರ್ಹರಾಗಿದ್ದಾರೆ ಎಂದು ಕೇಂದ್ರವು ಒತ್ತಿ ಹೇಳಿದೆ. 8 ಲಕ್ಷ ರೂ.ಗಿಂತ ಕಡಿಮೆ ಕುಟುಂಬದ ಆದಾಯ ಹೊಂದಿರುವ ಎಸ್‌ಸಿ, ಎಸ್‌ಟಿ, ಎಸ್‌ಇಬಿಸಿ ಸಮುದಾಯಗಳ ಹೊರಗಿನ ಯಾವುದೇ ಟ್ರಾನ್ಸ್‌ಜೆಂಡರ್ ಅನ್ನು ಸ್ವಯಂಚಾಲಿತವಾಗಿ ಇಡಬ್ಲ್ಯೂಎಸ್ ವರ್ಗದಲ್ಲಿ ಸೇರಿಸಲಾಗುತ್ತದೆ. ದೇಶದ ಸಂಪೂರ್ಣ ಸೌಲಭ್ಯವಂಚಿತ ಮತ್ತು ಅರ್ಹ ಜನಸಂಖ್ಯೆಯು (ಟ್ರಾನ್ಸ್‌ಜೆಂಡರ್‌ಗಳನ್ನು ಒಳಗೊಂಡಂತೆ) ಪ್ರಸ್ತುತ ಮೇಲಿನ 4 ವರ್ಗಗಳಲ್ಲಿ ಯಾವುದಾದರೂ ಒಂದರ ಅಡಿ ಒಳಗೊಂಡಿದೆ ಎಂದು ಹೇಳಿದೆ.

ಸಮಾಜ ಕಲ್ಯಾಣ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸುಪ್ರೀಂ ಸೂಚನೆ: 2014 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ತೃತೀಯಲಿಂಗಿಗಳಿಗೆ ವೈಯಕ್ತಿಕ ಸ್ವಾಯತ್ತತೆ ಮತ್ತು ಮಾನವ ಘನತೆಗೆ ಸಮಾನವಾದ ಆಯ್ಕೆಯ ಹಕ್ಕಿನ ಮೂಲಕ ತೃತೀಯಲಿಂಗಿಗಳಿಗೆ ಕಾನೂನು ಮಾನ್ಯತೆ ನೀಡಿತ್ತು. ಮೀಸಲಾತಿ ಪ್ರಯೋಜನಗಳನ್ನು ಪಡೆಯುವ ಉದ್ದೇಶಗಳಿಗಾಗಿ ಅವರನ್ನು ಎಸ್​ಇಬಿಸಿ ಎಂದು ಪರಿಗಣಿಸಲಾಗುತ್ತದೆ. ಅವರ ಉನ್ನತಿಗಾಗಿ ಸಮಾಜ ಕಲ್ಯಾಣ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ.

ತರಬೇತಿ ಮಾಡ್ಯೂಲ್ ಅಭಿವೃದ್ಧಿ: 2014 ರಲ್ಲಿ ನ್ಯಾಯಾಲಯವು ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಗುಂಪಿನ ಮನವಿಯ ಮೇರೆಗೆ ಈ ವರ್ಷದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಶೋಕಾಸ್ ನೋಟಿಸ್ ನೀಡಿತು. ಸಮುದಾಯದ ಕಲ್ಯಾಣಕ್ಕಾಗಿ ತೆಗೆದುಕೊಂಡ ಕ್ರಮಗಳ ವಿವರ, ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಮಂಡಳಿಯನ್ನು ಆಗಸ್ಟ್ 21, 2020 ರಂದು ರಚಿಸಲಾಗಿದೆ ಎಂದು ಹೇಳಿದೆ. ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ನೀತಿಗಳು, ಕಾರ್ಯಕ್ರಮಗಳು, ಶಾಸನಗಳು ಮತ್ತು ಯೋಜನೆಗಳ ಕುರಿತು ಕೌನ್ಸಿಲ್ ಸರ್ಕಾರಕ್ಕೆ ಸಲಹೆ ನೀಡುತ್ತದೆ. ಎನ್‌ಸಿಇಆರ್‌ಟಿಯು ಶಾಲಾ ಶಿಕ್ಷಣದಲ್ಲಿ ಟ್ರಾನ್ಸ್‌ಜೆಂಡರ್ ಮಕ್ಕಳ ಸೇರ್ಪಡೆ: ಕಾಳಜಿಗಳು ಮತ್ತು ಮಾರ್ಗಸೂಚಿ ಎಂಬ ಶೀರ್ಷಿಕೆಯ ತರಬೇತಿ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಇದನ್ನೂ ಓದಿ: Parliament Monsoon Session: ಸಂಸತ್ತಿನ ಉಭಯ ಸದನಗಳಲ್ಲಿ ಮಣಿಪುರ ವಿಚಾರವಾಗಿ ಪ್ರತಿಪಕ್ಷಗಳ ಗದ್ದಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.