ಅಮರಾವತಿ(ಆಂಧ್ರಪ್ರದೇಶ): ಅಮರಾವತಿಯಲ್ಲಿ ಜ 1 ರಿಂದ ತೃತೀಯ ಲಿಂಗಿಗಳ ರಾಷ್ಟ್ರೀಯ ಮಟ್ಟದ ಸಮಾವೇಶ ಪ್ರಾರಂಭಗೊಂಡಿದ್ದು, ಜನವರಿ 15 ರವರೆಗೆ ಈ ಸಮಾವೇಶ ನಡೆಯಲಿದೆ. ನಗರದ ಚಾರಿಟಬಲ್ ಕಾಟನ್ ಮಾರ್ಕೆಟ್ ಆವರಣದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಸಮಾವೇಶ ನಡೆಯುತ್ತಿದೆ. ಸಮಾವೇಶದ ಅಂಗವಾಗಿ ಇಂದು ನಗರದ ವಲ್ಕಟ್ ಕಾಂಪೌಂಡ್ನಿಂದ ತೃತೀಯ ಲಿಂಗಿಗಳಿಂದ ಕಲಶಯಾತ್ರೆ ನಡೆಯಿತು. ಡೋಲುಗಳ ಸದ್ದು ಹಾಗೂ ಅದ್ಧೂರಿಯಾಗಿ ಇಲ್ಲಿಂದ ಪ್ರಾರಂಭಗೊಂಡ ಕಲಶಯಾತ್ರೆ ಅಂಬಾದೇವಿ ಮತ್ತು ಏಕವೀರ ದೇವಿಯ ದರ್ಶನ ಪಡೆದು ಎರಡೂ ಸ್ಥಳಗಳಿಗೆ ಹಿತ್ತಳೆ ಗಂಟೆಗಳನ್ನು ಅರ್ಪಿಸಿ ಸಮಾವೇಶ ನಡೆಯುವ ಸ್ಥಳಕ್ಕೆ ಸಾಗಿದೆ.
ಈ ರಾಷ್ಟ್ರೀಯ ಸಮಾವೇಶದಲ್ಲಿ ದೇಶದ ಮೂಲೆ ಮೂಲೆಯಿಂದ ಬಂದ ಸುಮಾರು 500 ತೃತೀಯ ಲಿಂಗಿಗಳು ಭಾಗವಹಿಸಲು ಬಂದಿದ್ದಾರೆ. ನಮ್ಮ ತೃತೀಯ ಲಿಂಗಿಗಳ ಸಮಾಜದ ನಿರ್ಧಾರಗಳನ್ನು ಸಮಾವೇಶದಲ್ಲಿ ತೆಗೆದುಕೊಳ್ಳಲಾಗುವುದು. ಕೊರೊನಾ ಸಮಯದಲ್ಲಿ ನಮ್ಮ ಸಮಾಜದವರು ದೊಡ್ಡ ಪ್ರಮಾಣದ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ. ಈ ಸಮಾವೇಶದಿಂದಾಗಿ ಅವರೆಲ್ಲರು ತಮ್ಮ ನಷ್ಟವನ್ನು ಸರಿದೂಗಿಸುವಂತಾಗಬೇಕು. ಮದುವೆ ಆಗದವರಿಗೆ ಸೂಕ್ತ ವಧು ವರರು ಸಿಕ್ಕು ಶೀಘ್ರ ಕಲ್ಯಾಣ ಭಾಗ್ಯ ಕೂಡಿ ಬರಲಿ ಎಂದು ಈ ಕಲಶಯಾತ್ರೆ ವೇಳೆ ಆಶೀರ್ವಾದ ಮಾಡುತ್ತೇನೆ ಎಂದು ತೃತೀಯ ಲಿಂಗಿ ನೇಹಾ ನಾಯಕ್ ಹೇಳಿದರು.
1 ರಿಂದ 15 ವರೆಗೆ ತೃತೀಯ ಲಿಂಗಿಗಳ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ. ದೇಶದೆಲ್ಲೆಡೆಯ ತೃತೀಯ ಲಿಂಗಿಗಳು ಸಮಾವೇಶದಲ್ಲಿ ಭಾಗವಹಿಸಲು ಅಮರಾವತಿಗೆ ಆಗಮಿಸಿದ್ದಾರೆ. ಅಂಕೋಲಾ, ಮೂರ್ತಿಜಾಪುರ, ಯವತ್ಮಾಲ್, ನಾಗ್ಪುರ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಹರಿಯಾಣ, ಇಂದೋರ್, ಜಮ್ಮು ಕಾಶ್ಮೀರ, ಹರಿಯಾಣ, ಪಂಜಾಬ್, ಆಂಧ್ರಪ್ರದೇಶ, ಬಿಹಾರ, ಗುಜರಾತ್ ಸೇರಿದಂತೆ ಬೇರೆ ಬೇರೆ ರಾಜ್ಯಗಳು ಈ ಸಭೆಯಲ್ಲಿ ಭಾಗವಹಿಸುತ್ತಿವೆ. ಈ ಸಮಾವೇಶದಲ್ಲಿ ತೃತೀಯ ಲಿಂಗಿಗಳ ವಿವಿಧ ಸಾಮಾಜಿಕ ಹಾಗೂ ಜೀವನೋಪಾಯದ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
ರಾಜ್ಯದಲ್ಲಿ ಶೇ 1 ರಷ್ಟು ಮೀಸಲು: ಇತ್ತೀಚೆಗೆ ತೃತೀಯ ಲಿಂಗಿಗಳು ಅಭಿವೃದ್ಧಿ ಹೊಂದುತ್ತಿದ್ದು, ಸಮಾಜದ ಅಂಗವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಭಿಕ್ಷೆ ಬೇಡುವ ತಮ್ಮ ಕಾಯಕವನ್ನು ಬಿಟ್ಟು ಸಮಾಜದ ಅವಿಭಾಜ್ಯ ಅಂಗವಾಗುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮೀಸಲು ಜಾರಿ ಮಾಡಿದೆ. ಇದನ್ನು ರಾಜ್ಯದ ತೃತೀಯ ಲಿಂಗಿಗಳ ಸಂಘ ಸ್ವಾಗತ ಕೂಡಾ ಮಾಡಿದೆ.
ಇದನ್ನು ಓದಿ: ಟ್ರಾನ್ಸ್ಜೆಂಡರ್ಗೆ 1 ಮೀಸಲಾತಿ ಸ್ವಾಗತಾರ್ಹ ಸಮರ್ಪಕ ಅನುಷ್ಠಾನಕ್ಕೆ ಸಂಗಮ ಸಂಸ್ಥೆ ಆಗ್ರಹ
ದೇಶದಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆಯಲ್ಲಿ ಮಂಗಳಮುಖಿ ಕಾರ್ಯ: ದೇಶದಲ್ಲಿ ಮೊದಲ ಬಾರಿಗೆ ಅರಣ್ಯ ವಲಯದಲ್ಲಿ ಮಂಗಳಮುಖಿಯೊಬ್ಬರು ಕೆಲಸ ಗಿಟ್ಟಿಸಿಕೊಂಡಿದ್ದು, 2019ರಿಂದಲೇ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಅರಣ್ಯ ವಿಭಾಗದಲ್ಲಿ ದೀಪ್ತಿ ಕೇಲಸ ಮಾಡುತ್ತಿರುವ ತೃತೀಯಲಿಂಗಿಯಾಗಿದ್ದಾರೆ. ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಮಣಿ ಕುಡಿಯಾಗಿರುವ ದೀಪ್ತಿ ಬಿಕಾಂ ಪದವಿ ಪಡೆದಿದ್ದಾರೆ. 2007ರಲ್ಲಿ ರಸ್ತೆ ಅಪಘಾತದಲ್ಲಿ ದೀಪ್ತಿ ತನ್ನ ತಂದೆಯನ್ನು ಕಳೆದುಕೊಂಡಿದ್ದರು.
ಇದನ್ನೂ ಓದಿ: ರೈಲಿನಲ್ಲಿ ಉಪದ್ರವ, ದುರ್ವರ್ತನೆ: 1,200ಕ್ಕೂ ಹೆಚ್ಚು ತೃತೀಯ ಲಿಂಗಿಗಳು ಅರೆಸ್ಟ್