ETV Bharat / bharat

ಎಂಬಿಬಿಎಸ್​ ಓದಿದವಳು ಡಾಕ್ಟರ್​ ಆಗುವ ಬದಲು ಭಿಕ್ಷುಕಿಯಾದ ಕಥೆ! - ಎಂಬಿಬಿಎಸ್​ ಪದವೀಧರೆಗೆ ಡಾಕ್ಟರ್​ ಆಗಲು ಇನ್ಸ್​​ಪೆಕ್ಟರ್​ ಸಹಾಯ

ಸಮಾಜದ ನಿಂದನೆ, ಟ್ರಾನ್ಸ್​ಜೆಂಡರ್​ ಪ್ರಮಾಣಪತ್ರ ಪಡೆಯಲು ನೂರಾರು ಅಡೆತಡೆ ಎದುರಾದ ಹಿನ್ನೆಲೆ ಚೆನ್ನೈನಲ್ಲಿ ಎಂಬಿಬಿಎಸ್​ ಮುಗಿಸಿದ್ದ ಟ್ರಾನ್ಸ್​​ಜೆಂಡರ್​ ಯುವತಿಯೊಬ್ಬಳು ಡಾಕ್ಟರ್​ ಆಗುವ ಬದಲು ಭಿಕ್ಷೆ ಬೇಡಿ ಜೀವನ ನಡೆಸುವಂತೆ ಮಾಡಿದೆ.

Transgender doctor found begging in streets
ಭಿಕ್ಷೆ ಬೇಡುತ್ತಿದ್ದ ಎಂಬಿಬಿಎಸ್​ ಪದವೀಧರೆ
author img

By

Published : Nov 24, 2020, 9:35 AM IST

ಚೆನ್ನೈ: ಎಂಬಿಬಿಎಸ್​​ ಮುಗಿಸಿದ್ದ ತೃತೀಯ ಲಿಂಗಿ ಯುವತಿಯೊಬ್ಬಳು ಡಾಕ್ಟರ್​ ಆಗುವ ಬದಲು ಭಿಕ್ಷುಕಿಯಾದ ದಾರುಣ ಘಟನೆ ತಮಿಳುನಾಡಿನ ಮಧುರೈನಲ್ಲಿ ಬೆಳಕಿಗೆ ಬಂದಿದೆ.

Transgender doctor found begging in streets
ಭಿಕ್ಷೆ ಬೇಡುತ್ತಿದ್ದ ಎಂಬಿಬಿಎಸ್​ ಪದವೀಧರೆ

ಮಧುರೈ ತಿಲಗರ್ ತಿಡಾಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕವಿತಾ ಅದೊಂದು ದಿನ ಗಸ್ತು ತಿರುಗುತ್ತಿದ್ದ ವೇಳೆ ಪೆರಿಯಾರ್ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯಲಿಂಗಿ ಯುವತಿಯೊಬ್ಬಳು ಕಣ್ಣಿಗೆ ಬಿದ್ದಳು. ಅವಳ ಬಳಿ ಹೋಗಿ ಆಕೆ ಮಾತನಾಡಿಸಿದ ಇನ್ಸ್‌ಪೆಕ್ಟರ್ ಕವಿತಾ , ಅವಳ ಬಗ್ಗೆ ವಿಚಾರಿಸಿದ್ರು.

ಆ ಯುವತಿ ಹೇಳಿದ ಸತ್ಯ ಕೇಳಿ ಒಂದು ಕ್ಷಣ ಇನ್ಸ್​​ಪೆಕ್ಟರ್​ ಕವಿತಾ ಅವರಿಗೆ ಶಾಕ್​ ಆಯ್ತು. ಯಾಕಂದ್ರೆ ಆ ಹುಡುಗಿ ಓದಿದ್ದು ಎಂಬಿಬಿಎಸ್​. ಟ್ರಾನ್ಸ್​ಜೆಂಡರ್​ ಪ್ರಮಾಣಪತ್ರ ಪಡೆಯಲು ಅಲೆದು ಅಲೆದು ಸುಸ್ತಾಗಿ ಹೋಗಿದ್ದಳು. ಇತ್ತ ಸಮಾಜ ಕೂಡ ಆಕೆಗೆ ಮಾನ್ಯತೆ ನೀಡದೇ ತುಚ್ಛವಾಗಿ ಕಂಡಿತು. ಕೊನೆಗೆ ಬೇರೆ ದಾರಿ ಕಾಣದೇ ಜೀವನ ನಡೆಸಲು ಭಿಕ್ಷೆ ಬೇಡಬೇಕಾಯಿತು ಎಂದು ವಿವರಿಸಿದಳು. ನಂತರ ಇನ್ಸ್​ಪೆಕ್ಟರ್​ ಕವಿತಾ ಆಕೆಯ ಪದವಿ ಪ್ರಮಾಣ ಪತ್ರ ಪಡೆದು ಪರಿಶೀಲನೆ ನಡೆಸಿದ್ರು,

ತಕ್ಷಣವೇ ಈ ವಿಷಯವನ್ನು ಉನ್ನತ ಪೊಲೀಸ್​ ಅಧಿಕಾರಿಗಳಿಗೆ ತಿಳಿಸಿದ್ರು. ಆಕೆಗೆ ಕ್ಲಿನಿಕ್​ ಒಂದನ್ನು ತೆರೆಯಲು ವ್ಯವಸ್ಥೆ ಮಾಡಿಕೊಟ್ರು. ಅಗತ್ಯ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಕೊಟ್ಟರು. ಸದ್ಯದಲ್ಲೇ ಕ್ಲಿನಿಕ್​​ ತೆರೆಯಲಿದ್ದು,ಈ ತೃತೀಯಲಿಂಗಿ ಯುವತಿ ತನ್ನ ಆಸೆಯಂತೆ ಸ್ವೆತಾಸ್ಕೋಪ್​ ಹಾಕಿಕೊಂಡು ಡಾಕ್ಟರ್​ ಆಗಲಿದ್ದಾಳೆ. ತೃತೀಯ ಲಿಂಗಿಗಳಿಗೆ ಬೆಲೆ ಕೊಡದ ಸಮಾಜದ ಮಧ್ಯೆ, ಈಕೆಯ ಕಷ್ಟವನ್ನು ಅರಿತು ಡಾಕ್ಟರ್​ ಆಗಲು ಅನುವು ಮಾಡಿಕೊಟ್ಟ ಇನ್ಸ್​ಪೆಕ್ಟರ್​ ಕವಿತಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.