ಚಂಡೀಗಢ: ಪಂಜಾಬ್‌ನ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಪಂಜಾಬ್ ಸರ್ಕಾರವು ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ತರಬೇತಿ ನೀಡುತ್ತಿದೆ. ಈ ದಿಸೆಯಲ್ಲಿ ಇಂದು ಅಂದರೆ ಶುಕ್ರವಾರ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಎರಡನೇ ಬ್ಯಾಚಿನ ಶಾಲಾ ಮುಖ್ಯಸ್ಥರನ್ನು ಚಂಡೀಗಢದಿಂದ ಸಿಂಗಾಪುರಕ್ಕೆ ತರಬೇತಿಗಾಗಿ ಬೀಳ್ಕೊಟ್ಟರು. ಅವರು ಇಂದು ಸೆಕ್ಟರ್ -26 ನಲ್ಲಿರುವ ಮಹಾತ್ಮ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಪಂಜಾಬ್) ನಿಂದ ಎರಡನೇ ಬ್ಯಾಚ್ ಅನ್ನು ಫ್ಲ್ಯಾಗ್ ಆಫ್ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಭಗವಂತ್ ಮಾನ್, ಪಂಜಾಬ್ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಭರವಸೆಯನ್ನು ನಾವು ಪಂಜಾಬ್ ಜನರಿಗೆ ನೀಡಿದ್ದೇವೆ. ಅದೇ ರೀತಿಯಲ್ಲಿ ಶಾಲೆಗಳ ಮುಖ್ಯಸ್ಥರ ಎರಡನೇ ಬ್ಯಾಚ್ ಸಿಂಗಾಪುರಕ್ಕೆ ತೆರಳಿದೆ. ನಾಳೆ ಮಾರ್ಚ್ 4ರಿಂದ ಪ್ರಾಂಶುಪಾಲರ ತರಬೇತಿ ಆರಂಭವಾಗಲಿದ್ದು, ಮಾರ್ಚ್ 11ಕ್ಕೆ ಅವರು ಮರಳಲಿದ್ದಾರೆ ಎಂದರು.
ಈಗ ಪ್ರಾಂಶುಪಾಲರ ಆಯ್ಕೆ ಪಾರದರ್ಶಕವಾಗಿ ನಡೆಯುತ್ತಿದ್ದು, ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ತರಬೇತಿಯ ನಂತರ ನಾವು ಈ ಪ್ರಾಂಶುಪಾಲರನ್ನು ಬೇರೆ ಶಾಲೆಗಳಿಗೂ ನೇಮಿಸಿಕೊಳ್ಳಬಹುದು ಎಂದು ಅವರಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಪಂಜಾಬ್‌ನ ಶಾಲೆಗಳನ್ನು ದತ್ತು ಪಡೆಯಲು ಬಯಸುವುದಾಗಿ ವಿದೇಶಗಳಿಂದಲೂ ಸಂಘ ಸಂಸ್ಥೆಗಳಿಂದ ನಮಗೆ ಕರೆ ಬರುತ್ತಿವೆ ಎಂದು ಸಿಎಂ ಹೇಳಿದರು.
ಸಿಎಂ ಮಾನ್ ಇಂದು ಬೆಳಗ್ಗೆ 9.30ಕ್ಕೆ ಶಾಲಾ ಮುಖ್ಯಸ್ಥರ ಎರಡನೇ ಬ್ಯಾಚ್ ಅನ್ನು ಸಿಂಗಾಪುರಕ್ಕೆ ಕಳುಹಿಸಿದ್ದಾರೆ. ಕೆಲವು ದಿನಗಳ ಹಿಂದೆ ದೆಹಲಿ ಮತ್ತು ಪಂಜಾಬ್‌ನ ಶಾಲೆಗಳ ಮೊದಲ ಬ್ಯಾಚ್‌ನ ಪ್ರಾಂಶುಪಾಲರು ತರಬೇತಿ ಮುಗಿಸಿ ಸಿಂಗಾಪುರದಿಂದ ಮರಳಿದ್ದಾರೆ ಎಂಬುದು ಗಮನಾರ್ಹ. ಈ ಬ್ಯಾಚ್‌ನಲ್ಲಿ 36 ಶಾಲೆಗಳ ಪ್ರಾಂಶುಪಾಲರು ಸೇರಿದ್ದಾರೆ. ಪ್ರಾಂಶುಪಾಲರು ಮನೆಗೆ ಮರಳಿದ ನಂತರ ಹೊಸದಿಲ್ಲಿಯ ಎಸ್‌ಬಿವಿ ರೋಸ್ ಅವೆನ್ಯೂ ಸರ್ಕಾರಿ ಶಾಲೆಯಲ್ಲಿ ಅನುಭವ ಹಂಚಿಕೆ ಸಂವಾದ ನಡೆಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಭಗವಂತ್ ಮಾನ್: ಸಿಖ್ ಧರ್ಮ ಬೋಧಕ ಮತ್ತು ಖಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಅಮೃತಪಾಲ್ ಸಿಂಗ್ ಅವರ ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಅಮೃತಸರದ ಅಜ್ನಾಲಾದಲ್ಲಿ ಪೊಲೀಸ್ ಕಚೇರಿಗೆ ನುಗ್ಗಿದ ಕೆಲವು ದಿನಗಳ ನಂತರ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ವಾರ್ಷಿಕ ಹೋಲಾ ಮೊಹಲ್ಲಾ ಹಬ್ಬದ ಮೊದಲು ಪಂಜಾಬ್‌ಗೆ ಕ್ಷಿಪ್ರ ಕಾರ್ಯಾಚರಣೆಯ ಎಂಟು ಕಂಪನಿಗಳು ಸೇರಿದಂತೆ ಸುಮಾರು 2,430 ಭದ್ರತಾ ಸಿಬ್ಬಂದಿಯನ್ನು ಕಳುಹಿಸುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗೆ (CAPFs) ಸೂಚನೆ ನೀಡಿದ ಒಂದು ದಿನದ ನಂತರ ಈ ಚರ್ಚೆ ನಡೆದಿದೆ.
ಇದನ್ನೂ ಓದಿ: ಖಲಿಸ್ತಾನ್ ಬೆಂಬಲಿತ ಅಮೃತಪಾಲ್ ಸಿಂಗ್ಗೆ ಪಾಕಿಸ್ತಾನದಿಂದ ಹಣದ ನೆರವು ಶಂಕೆ