ETV Bharat / bharat

ಆಹಾರ ಧಾನ್ಯಗಳ ಸುರಕ್ಷಾ ಪೆಟ್ಟಿಗೆ ‘ಉರ್ಸ್’ .. ಹಿಮಾಚಲ ಸಂಪ್ರದಾಯ - ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಉರ್ಸ್​

ಉರ್ಸ್ ಈಗ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಏಕೆಂದರೆ, ಜನರಿಗೆ ಈಗ ಸಾರಿಗೆ ಸೌಲಭ್ಯವಿದೆ. ಹಳ್ಳಿಗಳಲ್ಲಿ ಅಂಗಡಿಗಳು ಕೂಡ ಇರುವುದರಿಂದ, ಜನರು ಈಗ ಉರ್ಸ್ ಬಳಕೆಯನ್ನು ಮಾಡುವುದು ತೀರಾ ಕಡಿಮೆ. ಆದಾಗ್ಯೂ, ಕೆಲವರು ಇನ್ನೂ ತಮ್ಮ ಆಹಾರ ಪದಾರ್ಥಗಳನ್ನು ಉರ್ಸ್‌ನಲ್ಲಿ ಸಂಗ್ರಹಿಸುತ್ತಾರೆ.

traditional Ration locker in Himachal pradesh
ಆಹಾರ ಧಾನ್ಯಗಳ ಸುರಕ್ಷಾ ಪೆಟ್ಟಿಗೆ ‘ಉರ್ಸ್’
author img

By

Published : Feb 19, 2021, 6:04 AM IST

ಕಿನ್ನೌರ್ ( ಹಿಮಾಚಲ ಪ್ರದೇಶ ) : ಆಹಾರ ಪದಾರ್ಥಗಳನ್ನು ಸಾಮಾನ್ಯವಾಗಿ ಮನೆಯೊಳಗೆ ಸಂಗ್ರಹಿಸಲಾಗುತ್ತದೆ. ಈ ಆಧುನಿಕ ಯುಗದಲ್ಲಿ, ಧಾನ್ಯಗಳು ಮತ್ತು ಆಹಾರ ಪದಾರ್ಥಗಳನ್ನು ಹೆಚ್ಚಾಗಿ ದೊಡ್ಡ ಹೈಟೆಕ್ ಗೋದಾಮುಗಳಲ್ಲಿ ಅಥವಾ ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಿಸಿ ಅವುಗಳನ್ನು ರಕ್ಷಿಸಲಾಗುತ್ತದೆ. ಸಂರಕ್ಷಕಗಳು ಮತ್ತು ರಾಸಾಯನಿಕಗಳನ್ನು ಸಹ ತಿಂಗಳುಗಟ್ಟಲೆ ಆಹಾರವನ್ನು ಸುರಕ್ಷಿತವಾಗಿಡಲು ಬಳಸಲಾಗುತ್ತದೆ. ಆದರೆ ಹಿಮಾಚಲ ಪ್ರದೇಶದ ಕಿನ್ನೌರ್​ನಲ್ಲಿ ಜನರು ವರ್ಷಗಳಿಂದ ತಮ್ಮ ಮನೆಗಳ ಹೊರಗೆ ಪಡಿತರವನ್ನು ಸಂಗ್ರಹಿಸುತ್ತಿದ್ದಾರೆ.

ಇಲ್ಲಿ ಮಳೆ ಮತ್ತು ಹಿಮಪಾತದಿಂದ ಆಹಾರ ಪದಾರ್ಥಗಳು ಹಾಳಾಗುತ್ತವೆ. ಕಿನ್ನೌರ್​ನಲ್ಲಿ, ಜನರು ವರ್ಷಗಳಿಂದ ಉರ್ಸ್​ನಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಸ್ಥಳೀಯ ಜನರು ಇದನ್ನು ಕುಥರ್ ಎಂದೂ ಕರೆಯುತ್ತಾರೆ. ಉರ್ಸ್ ಅಥವಾ ಕುಥರ್ ಮರದಿಂದ ಮಾಡಿದ ಸಣ್ಣ ಉಗ್ರಾಣವಾಗಿದೆ. ಕಿನ್ನೌರ್‌ನಲ್ಲಿ ಜನರು ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಇದನ್ನು ಬಳಸುತ್ತಾರೆ. ಇದು ಧಾನ್ಯಗಳಿಗಾಗಿ ಮಾಡಿದ ಒಂದು ರೀತಿಯ ಸುರಕ್ಷಾ ಪೆಟ್ಟಿಗೆಯಂತಿರುತ್ತದೆ.

ಆಹಾರ ಧಾನ್ಯಗಳ ಸುರಕ್ಷಾ ಪೆಟ್ಟಿಗೆ ‘ಉರ್ಸ್’

ಉರ್ಸ್‌ನಲ್ಲಿ ಸಂಗ್ರಹಿಸಿದ ಆಹಾರ ಹಲವು ತಿಂಗಳುಗಳವರೆಗೆ ಕೆಡದೆ ಬಾಳಿಕೆ ಬರುತ್ತದೆ. ಉರ್ಸ್ ಅನ್ನು ಮರದಿಂದ ತಯಾರಿಸಲಾಗುತ್ತದೆ. ಉರ್ಸ್‌ನ ಗೋಡೆಗಳನ್ನು ಸೀಡರ್-ಆಕ್ರೋಡು ಮರದಿಂದ ಮಾಡಲಾಗುತ್ತದೆ. ಅದರೊಳಗೆ 8 ರಿಂದ 10 ಸಣ್ಣ ಪೆಟ್ಟಿಗೆ ಆಕಾರದ ವಿಭಾಗಗಳಿವೆ. ಈ ವಿಭಾಗಗಳ ಒಳಗೆ ಅಕ್ಕಿ, ಹಿಟ್ಟು, ಬೇಳೆಕಾಳುಗಳು, ಸಕ್ಕರೆ ಮತ್ತು ಇತರ ಧಾನ್ಯಗಳನ್ನು ವರ್ಷವಿಡೀ ಸಂಗ್ರಹಿಸಲಾಗುತ್ತದೆ. ಸೇಬು, ಒಣ ದ್ರಾಕ್ಷಿ, ವಾಲ್​ನಟ್ಸ್, ಪೈನ್ ಮತ್ತು ಒಣ ಹಣ್ಣುಗಳನ್ನು ಸಹ ಇದರಲ್ಲಿ ಸಂಗ್ರಹಿಸಲಾಗುತ್ತದೆ. ಉರ್ಸ್ ಒಳಗೆ ಸಂಗ್ರಹವಾಗಿರುವ ವಸ್ತುಗಳು 2 ರಿಂದ 3 ವರ್ಷಗಳವರೆಗೆ ಕೆಡುವುದಿಲ್ಲ.

ಕಿನ್ನೌರ್ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಗಳನ್ನು ಹೊಂದಿರುವ ದೂರದ ಪ್ರದೇಶವಾಗಿದೆ. ಚಳಿಗಾಲದಲ್ಲಿ ಹಿಮಪಾತ ಸಂಭವಿಸುತ್ತದೆ. ಈ ಸಮಯದಲ್ಲಿ, ಮನೆಯಿಂದ ಹೊರಬರಲು ಕಷ್ಟವಾಗುತ್ತದೆ. ಆದ್ದರಿಂದ, ಜನರು ತಿಂಗಳುಗಟ್ಟಲೇ ಬಳಸಲು ಬೇಕಾದ ಆಹಾರ ಪದಾರ್ಥಗಳನ್ನು ಒಟ್ಟಿಗೆ ಖರೀದಿಸುತ್ತಾರೆ. ಅದನ್ನು ಉರ್ಸ್‌ನಲ್ಲಿ ಸಂಗ್ರಹಿಸುತ್ತಾರೆ. ಏಕೆಂದರೆ ಭಾರೀ ಹಿಮಪಾತ ಮತ್ತು ಮಳೆಯಲ್ಲಿ ಕೂಡ ಅದರೊಳಗೆ ಇಟ್ಟುಕೊಂಡಿರುವ ಸರಕುಗಳು ಹಾಳಾಗುವುದಿಲ್ಲ.

ಉರ್ಸ್‌ನ ವೈಶಿಷ್ಟ್ಯವೆಂದರೆ ಅದರ ಬಾಗಿಲಿನ ದೊಡ್ಡ ಬೀಗ. ಈ ಮೊದಲು, ಈ ಬೀಗಗಳು ಟಿಬೆಟ್‌ನಿಂದ ಬರುತ್ತಿದ್ದವು. ಈ ಬೀಗಗಳ ತೂಕ ಒಂದೂವರೆಯಿಂದ ಎರಡು ಕೆ.ಜಿವರೆಗೆ ಇತ್ತು. ಕೀಲಿಯಿಲ್ಲದೆ ಅದನ್ನು ತೆರೆಯುವುದು ಅಸಾಧ್ಯವಾಗಿತ್ತು. ಬದಲಾಗುತ್ತಿರುವ ಕಾಲದಲ್ಲಿ, ಈ ಉರ್ಸ್ ಈಗ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಏಕೆಂದರೆ, ಜನರಿಗೆ ಈಗ ಸಾರಿಗೆ ಸೌಲಭ್ಯವಿದೆ. ಹಳ್ಳಿಗಳಲ್ಲಿ ಅಂಗಡಿಗಳು ಕೂಡ ಇರುವುದರಿಂದ, ಜನರು ಈಗ ಉರ್ಸ್ ಬಳಕೆ ಮಾಡುವುದು ತೀರಾ ಕಡಿಮೆ. ಆದಾಗ್ಯೂ, ಕೆಲವರು ಇನ್ನೂ ತಮ್ಮ ಆಹಾರ ಪದಾರ್ಥಗಳನ್ನು ಉರ್ಸ್‌ನಲ್ಲಿ ಸಂಗ್ರಹಿಸುತ್ತಾರೆ. ನೂರಾರು ವರ್ಷಗಳಿಂದಲೂ ಈ ಉರ್ಸ್​ ಪದ್ಧತಿ ಹಿಮಾಚಲ ಪ್ರದೇಶದಲ್ಲಿ ಇನ್ನೂ ಚಾಲ್ತಿಯಲ್ಲಿರುವುದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.