ETV Bharat / bharat

ಚೀನಾದಿಂದ ಮರಳಿದ ಆಗ್ರಾ ವ್ಯಕ್ತಿಗೆ ಕೋವಿಡ್ ಪಾಸಿಟಿವ್: BF.7 ಆತಂಕ - ಆರೋಗ್ಯ ಸೌಲಭ್ಯಗಳ ಪರೀಕ್ಷೆಗಾಗಿ ಮಾಕ್ ಡ್ರಿಲ್

ಚೀನಾಗೆ ಹೋಗಿದ್ದ ಆಗ್ರಾ ವ್ಯಕ್ತಿಗೆ ವಕ್ಕರಿಸಿದ ಕೋವಿಡ್- BF.7 ರೂಪಾಂತರಿ ವೈರಸ್​ ಆತಂಕ- ಲಕ್ನೋದ ಕಿಂಗ್​ ಜಾರ್ಜ್​ ಆಸ್ಪತ್ರೆಗೆ ಸ್ಯಾಂಪಲ್​ ರವಾನೆ

ಚೀನಾದಿಂದ ಮರಳಿದ ಆಗ್ರಾ ವ್ಯಕ್ತಿಗೆ ಕೋವಿಡ್ ಪಾಸಿಟಿವ್: BF7 ಆತಂಕ
trader-corona-infected-returned-to-agra-two-days-before-china
author img

By

Published : Dec 25, 2022, 5:47 PM IST

ಆಗ್ರಾ( ಉತ್ತರ ಪ್ರದೇಶ): ನೆರೆಯ ರಾಷ್ಟ್ರ ಚೀನಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಕೋವಿಡ್​ನ BF7 ವೇರಿಯಂಟ್ ಆತಂಕದ ನಡುವೆ, ಉತ್ತರ ಪ್ರದೇಶದ ಆಗ್ರಾದ ವ್ಯಕ್ತಿಯೊಬ್ಬರು ಇತ್ತೀಚೆಗೆ ಚೀನಾದಿಂದ ಹಿಂದಿರುಗಿದ ನಂತರ ಕೋವಿಡ್ -19 ಪಾಸಿಟಿವ್ ಆಗಿದ್ದಾರೆ. 40 ವರ್ಷದ ವ್ಯಕ್ತಿ ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಜಿಲ್ಲೆಯ ಶಹಗಂಜ್ ಪ್ರದೇಶದವರಾಗಿದ್ದಾರೆ. ಇವರು ಡಿಸೆಂಬರ್ 23 ರಂದು ಚೀನಾದಿಂದ ಮರಳಿದ್ದರು.

ಅನಾರೋಗ್ಯ ಪೀಡಿತರಾಗಿದ್ದ ಇವರು, ಖಾಸಗಿ ಲ್ಯಾಬ್‌ನಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು. ಭಾನುವಾರ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಆರೋಗ್ಯ ಇಲಾಖೆಯ ಕ್ಷಿಪ್ರ ಪ್ರತಿಕ್ರಿಯೆ ತಂಡವು ಉದ್ಯಮಿಯ ಮೇಲೆ ನಿಗಾ ಇರಿಸಿದೆ ಮತ್ತು ಜಿನೋಮ್ ಸಿಕ್ವೆನ್ಸಿಂಗ್ ಮಾಡಿಸಲು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ (ಕೆಜಿಎಂಯು) ಅವರ ಹೊಸ ಸ್ಯಾಂಪಲ್ ಅನ್ನು ಕಳುಹಿಸಲಾಗಿದೆ.

ಅಧಿಕಾರಿಗಳು ಅವರ ಮನೆ ಸೀಲ್ ಮಾಡಿದ್ದಾರೆ ಮತ್ತು ಅವರ ಸಂಪರ್ಕಗಳನ್ನು ಪತ್ತೆಹಚ್ಚಲಾಗುತ್ತಿದೆ. ಅವರ ಸಂಪರ್ಕಕ್ಕೆ ಬಂದವರನ್ನೂ ಕೂಡ ಟೆಸ್ಟ್​ಗೆ ಒಳಪಡಿಸಲಾಗುವುದು. ವಿದೇಶದಿಂದ ಬರುವವರ ಮೇಲೆ 7 ದಿನಗಳ ಕಾಲ ನಿಗಾ ಇಡಲಾಗುವುದು ಎಂದು ಆಗ್ರಾದ ಪ್ರಮುಖ ಆರೋಗ್ಯ ಅಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. ವಿದೇಶದಿಂದ ಬರುವವರನ್ನು ಅವರ ಮನೆಯಲ್ಲಿಯೇ ಐಸೊಲೇಟ್​ ಮಾಡಲಾಗುವುದು. ಈ ಸಮಯದಲ್ಲಿ ಯಾರಾದರೂ ಶೀತ ಮತ್ತು ಜ್ವರದ ಲಕ್ಷಣಗಳನ್ನು ಹೊಂದಿದ್ದರೆ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಕೋವಿಡ್ ವಿರುದ್ಧ ಕೇಂದ್ರ ಸರ್ಕಾರ ನಿಗಾ ಕ್ರಮಗಳನ್ನು ಹೆಚ್ಚಿಸಿದೆ. ರಾಜ್ಯಗಳು ತಮ್ಮ ಆರೋಗ್ಯ ಸೌಲಭ್ಯಗಳ ಪರೀಕ್ಷೆಗಾಗಿ ಮಾಕ್ ಡ್ರಿಲ್ ನಡೆಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ. ಮಂಗಳವಾರದಿಂದ ಮಾಕ್ ಡ್ರಿಲ್ ನಡೆಸುವಂತೆ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಹಾಸಿಗೆಗಳು, ಮಾನವ ಸಂಪನ್ಮೂಲಗಳು, ಲಾಜಿಸ್ಟಿಕ್ಸ್ ಮತ್ತು ಇತರ ವಿಷಯಗಳ ಜೊತೆಗೆ ವೈದ್ಯಕೀಯ ಆಮ್ಲಜನಕದ ಪೂರೈಕೆ ಸರಪಳಿಗಳ ಲಭ್ಯತೆಯನ್ನು ಪರಿಶೀಲಿಸಲು ಆಸ್ಪತ್ರೆಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ.

ವಿಶೇಷವಾಗಿ ಚೀನಾದಲ್ಲಿ ಶೂನ್ಯ-ಕೋವಿಡ್ ನೀತಿಯನ್ನು ತೆಗೆದುಹಾಕುವುದರಿಂದ ಅಲ್ಲಿ ಸೋಂಕು ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಇನ್ನು ನಿತ್ಯ ಹೊಸ ಕೋವಿಡ್ ಪ್ರಕರಣಗಳ ಅಪ್ಡೇಟ್​ ನೀಡಲ್ಲ ಎಂದ ಚೀನಾ ಸರ್ಕಾರ!​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.