ಚೆನ್ನೈ: ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸುವ ಮೂಲಕ ಜೂನ್ 14 ರವರೆಗೆ ಲಾಕ್ಡೌನ್ ವಿಸ್ತರಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.
ಯಾವ್ಯಾವ ಸೇವೆಗಳಿಗೆ ವಿನಾಯ್ತಿ?
ಹೊಸ ಮಾರ್ಗಸೂಚಿ ಹೊರಡಿಸಿರುವ ಎಂ.ಕೆ.ಸ್ಟಾಲಿನ್ ಸರ್ಕಾರ, ಕೋವಿಡ್ ಸಕ್ರಿಯ ಪ್ರಕರಣಗಳು ಕಡಿಮೆ ಇರುವ ಜಿಲ್ಲೆಗಳಲ್ಲಿ ದಿನಸಿ, ತರಕಾರಿ, ಮಾಂಸ ಮಾರಾಟ ಮಳಿಗೆಗಳನ್ನು ಬೆಳಗ್ಗೆ 6 ರಿಂದ ಸಂಜೆ 5 ಗಂಟೆವರೆಗೆ ತೆರೆಯಲು ಅವಕಾಶ ನೀಡಿದೆ.
ಇದನ್ನೂ ಓದಿ: COVID: ಕೊರೊನಾಕ್ಕೆ ಸಿಂಹಿಣಿಯೂ ಬಲಿ: 9 ಸಿಂಹಗಳಿಗೆ ಪಾಸಿಟಿವ್
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇಕಡಾ 30 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಬಹುದು. ಓಲಾ, ಉಬರ್, ಆಟೋರಿಕ್ಷಾಗಳನ್ನು ಇ ನೋಂದಣಿಯೊಂದಿಗೆ ಓಡಿಸಲು ಅವಕಾಶ ಕಲ್ಪಿಸಲಾಗಿದೆ.
11 ಜಿಲ್ಲೆಗಳಿಗಿಲ್ಲ ರಿಯಾಯಿತಿ..!
ಆದರೆ, ಕೋವಿಡ್ ಪ್ರಕರಣಗಳು ಹೆಚ್ಚಿರುವ ಕೊಯಮತ್ತೂರು, ನೀಲಗಿರಿ, ತಿರುಪುರ್, ಈರೋಡ್, ಸೇಲಂ, ಕರುರು, ನಾಮಕ್ಕಲ್, ತಂಜಾವೂರು, ತಿರುವರೂರು, ನಾಗಪಟ್ಟಣಂ ಮತ್ತು ಮಾಯಿಲಾಡುತುರೈನಲ್ಲಿ ಈ ವಿನಾಯ್ತಿಗಳನ್ನು ನೀಡಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.