ಕೋಲ್ಕತಾ : ಕಳೆದ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆಗಳು ಮತ್ತು ಹಕ್ಕುಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾರಣವೋ ಏನೋ ಈಗಿನ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ತೃಣಮೂಲ ಕಾಂಗ್ರೆಸ್ 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಚುನಾವಣೆ ಪ್ರಚಾರದ ವೇಳೆ, 'ದೀದಿ ಓ ದೀದಿ' (ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ) ನಂದಿಗ್ರಾಮದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕ್ಲೀನ್ ಬೋಲ್ಡ್ ಆಗಲಿರುವುದು ಯಾರು ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, ಮೇ 2ರ ಚುನಾವಣೆ ಫಲಿತಾಂಶದ ಬಳಿಕ ಮಮತಾ ಬ್ಯಾನರ್ಜಿ ಮತ್ತು ಅವರ ತಂಡ ರಾಜ್ಯದಿಂದ ಗಂಟು ಮೂಟೆ ಕಟ್ಟಲಿದೆ ಎಂದು ವ್ಯಂಗ್ಯವಾಡಿದ್ದರು.
ಅಂದು ಅವರು ಆಡಿದ ವ್ಯಂಗ್ಯದ ಮಾತುಗಳೇ ಈಗ ಅವರಿಗೆ ತಿರುಗು ಬಾಣವಾಗಿದೆಯಾ ಎಂಬ ಅನುಮಾನಗಳು ರಾಜಕೀಯ ಪಂಡಿತರು ವ್ಯಕ್ತಪಡಿಸಿದ್ದಾರೆ.
ಸತಾಯಗತಾಯ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕು ಎಂಬ ಧೋರಣೆಗೆ ಬಿದ್ದು ಪ್ರಧಾನಿ ಸೇರಿ ಕೇಂದ್ರದ ಹಲವು ಸಚಿವರು ಸರಣಿ ಚುನಾವಣೆ ಸಮಾವೇಶಗಳನ್ನು ನಡೆಸಿದ್ದರು.
ಮಧ್ಯಾಹ್ನ 12.50ರವರೆಗೆ ಅಐಟಿಸಿ 203 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೇ, ಬಿಜೆಪಿ 83 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಡರಂಗ 3 ಹಾಗೂ ಇತರೆ 3 ಸ್ಥಾನದ ಮುಖೇನ ಮುನ್ನಡೆ ಇದ್ದಾರೆ. 294 ವಿಧಾನಸಭಾ ಸದಸ್ಯರನ್ನು ಹೊಂದಿರುವ ಪಶ್ಚಿಮ ಬಂಗಾಳ, ಸರ್ಕಾರ ರಚನೆಗೆ 148 ಸಂಖ್ಯಾ ಬಲದ ಅಗತ್ಯವಿದೆ.