ಕೋಲ್ಕತ್ತಾ: ಪಶ್ಚಿಮ ಬಂಗಾಳದಾದ್ಯಂತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ 23ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ಧ್ವಜವನ್ನು ಹಾರಿಸಿದ ಟಿಎಂಸಿ ಹಿರಿಯ ನಾಯಕರು, ಜನರ ಸೇವೆ ಸಲ್ಲಿಸುವಲ್ಲಿ ಕಾರ್ಯಕರ್ತರ ಶ್ರಮಕ್ಕಾಗಿ ಅವರನ್ನು ಅಭಿನಂದಿಸಿದರು.
ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಒಂದು ದಶಕ ಅಧಿಕಾರ ಪೂರ್ಣಗೊಳಿಸಲು ಟಿಎಂಸಿ ಸಜ್ಜಾಗುತ್ತಿದೆ. ಜನರಿಗಾಗಿ ತಮ್ಮ ಹೋರಾಟದ ಸಂಕಲ್ಪವನ್ನು ಮುಂದುವರೆಸುವುದಾಗಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರತಿಜ್ಞೆ ಮಾಡಿದ್ದಾರೆ.
-
On #TMCFoundationDay, I extend my sincere gratitude to our Maa-Mati-Manush and all our workers who continue to fight with us in making Bengal better and stronger each day.
— Mamata Banerjee (@MamataOfficial) January 1, 2021 " class="align-text-top noRightClick twitterSection" data="
The Trinamool family will carry on with this resolve for times to come! (2/2)
">On #TMCFoundationDay, I extend my sincere gratitude to our Maa-Mati-Manush and all our workers who continue to fight with us in making Bengal better and stronger each day.
— Mamata Banerjee (@MamataOfficial) January 1, 2021
The Trinamool family will carry on with this resolve for times to come! (2/2)On #TMCFoundationDay, I extend my sincere gratitude to our Maa-Mati-Manush and all our workers who continue to fight with us in making Bengal better and stronger each day.
— Mamata Banerjee (@MamataOfficial) January 1, 2021
The Trinamool family will carry on with this resolve for times to come! (2/2)
ಇದನ್ನೂ ಓದಿ: ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿಗೆ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಪತ್ರ
ಟ್ವೀಟ್ ಮಾಡಿ ಶುಭಕೋರಿದ ಮಮತಾ ಬ್ಯಾನರ್ಜಿ, ಪ್ರತಿದಿನ ಬಂಗಾಳವನ್ನು ಉತ್ತಮ ಮತ್ತು ಬಲಶಾಲಿಯನ್ನಾಗಿ ಮಾಡುವಲ್ಲಿ ನಮ್ಮೊಂದಿಗೆ ಹೋರಾಡುತ್ತಿರುವ ನಮ್ಮ ಎಲ್ಲಾ ಕಾರ್ಯಕರ್ತರಿಗೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ. 1998ರ ಜನವರಿ 1 ರಂದು ಪ್ರಾರಂಭಿಸಿದ ಪ್ರಯಾಣದತ್ತ ನಾನು ಹಿಂದಿರುಗಿ ನೋಡುತ್ತಿದ್ದೇನೆ. ನಮ್ಮ ವರ್ಷಗಳು ಅಪಾರ ಹೋರಾಟದಿಂದ ಕೂಡಿವೆ. ಆದರೆ ಈ ಸಮಯದುದ್ದಕ್ಕೂ ಜನರಿಗಾಗಿಯೇ ಬದ್ಧರಾಗಿರುವ ನಮ್ಮ ಉದ್ದೇಶವನ್ನು ಸಾಧಿಸುತ್ತಾ ಬಂದಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಪಕ್ಷದ ಸಾಧನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಪ್ರತಿ ಜಿಲ್ಲೆಗಳಲ್ಲಿ ಟಿಎಂಸಿ ನಾಯಕರು, ಕಾರ್ಯಕರ್ತರು ವಿವಿಧ ಕಾರ್ಯಗಳು ಮತ್ತು ಸಭೆಗಳನ್ನು ಏರ್ಪಡಿಸಿದ್ದಾರೆ.