ಕತರ್ನಿಯಾಘಾಟ್ (ಉತ್ತರ ಪ್ರದೇಶ): ಕಾಡಿನ ದೈತ್ಯ ಪ್ರಾಣಿ ಹುಲಿಯನ್ನು ಕಂಡರೆ ಎಂಥವರಿಗೂ ಎದೆ ಜುಮ್ಮೆನ್ನಲೇಬೇಕು. ಉಗ್ರತೆಯ ಸಂಕೇತವಾದ ಹುಲಿಯನ್ನು ನೋಡುವುದೂ ಕೂಡಾ ಒಂದು ಸೊಬಗೇ ಸರಿ. ಇತ್ತೀಚೆಗೆ ಉತ್ತರ ಪ್ರದೇಶದ ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬೆಂಗಾಲ್ ಟೈಗರ್ ಮಳೆ ನೀರು ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಈ ಹುಲಿಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಕತರ್ನಿಯಾಘಾಟ್ನಲ್ಲಿ ರೋಡ್ ಸ್ಟಾಪರ್ ಎಂದು ಬರೆದುಕೊಂಡಿದ್ದಾರೆ. ಇದು ವನ್ಯ ಪ್ರೇಮಿಗಳಿಗೆ ಸಂತಸ ತಂದಿದೆ.
-
The road stopper !! From Katarniaghat WLS. @aakashbadhawan pic.twitter.com/etxOeJLF5B
— Parveen Kaswan, IFS (@ParveenKaswan) May 1, 2023 " class="align-text-top noRightClick twitterSection" data="
">The road stopper !! From Katarniaghat WLS. @aakashbadhawan pic.twitter.com/etxOeJLF5B
— Parveen Kaswan, IFS (@ParveenKaswan) May 1, 2023The road stopper !! From Katarniaghat WLS. @aakashbadhawan pic.twitter.com/etxOeJLF5B
— Parveen Kaswan, IFS (@ParveenKaswan) May 1, 2023
ರಸ್ತೆ ಬದಿಯಲ್ಲಿ ಹುಲಿ ನೀರು ಕುಡಿಯುತ್ತಿದ್ದಾಗ ಜನರು ಎರಡೂ ಬದಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಹುಲಿ ತನ್ನ ಬಾಯಾರಿಕೆಯನ್ನು ತಣಿಸಿಕೊಳ್ಳುವುದು ಒಂದೆಡೆಯಾದರೆ, ಇನ್ನೊಂದೆಡೆ ಅದು ರಾಜಾರೋಷವಾಗಿ ರಸ್ತೆ ಸಂಚಾರವನ್ನು ಬಂದ್ ಮಾಡಿತ್ತು.
"ಅಭಯಾರಣ್ಯದ ಬಫರ್ ಪ್ರದೇಶದಲ್ಲಿ ರೇಂಜ್ ಆಫೀಸರ್ ಒಬ್ಬರು ಕತರ್ನಿಯಾಘಾಟ್ನಲ್ಲಿನ ಹುಲಿಯ ಅಪರೂಪದ ಚಿತ್ರವನ್ನು ಕ್ಲಿಕ್ ಮಾಡಿದ್ದಾರೆ. ಅರಣ್ಯಾಧಿಕಾರಿ ಪರ್ವೀನ್ ಕಸ್ವಾನ್ ಅವರ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.
5 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾದ ವಿಡಿಯೊ ಟ್ವಿಟರ್‌ನಲ್ಲಿ 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಬಳಕೆದಾರರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಹುಲಿಯನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ಜನರು ಯಾವುದೇ ಸದ್ದು ಮಾಡದೇ ಅಥವಾ ಹಾರ್ನ್ ಮಾಡುತ್ತಿಲ್ಲ. ಇದು ನೋಡಲು ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
"ಬಹುಶಃ ಹುಲಿಗಳಿಗೆ ಅರಣ್ಯ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಬೇಕಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಸಲಹೆ ನೀಡಿದ್ದಾರೆ. "ಕಳೆದ ಡಿಸೆಂಬರ್‌ನಲ್ಲಿ ಕತರ್ನಿಯಾಘಾಟ್ ಡಬ್ಲ್ಯುಎಲ್‌ಎಸ್‌ಗೆ ಭೇಟಿ ನೀಡಿದ್ದೆ. ಅದ್ಭುತ ಪ್ರವಾಸವಾಗಿತ್ತು. ಹುಲಿಯನ್ನು ಕಾಣುವ ಅದೃಷ್ಟವಿರಲಿಲ್ಲ. ಸಾಕಷ್ಟು ಅಪರೂಪದ ಪಕ್ಷಿಗಳನ್ನು ನೋಡಿದೆ. ಈಗ ವಿಡಿಯೋದಲ್ಲಿ ನೋಡುತ್ತಿದ್ದೇನೆ ಎಂದು ಮೂರನೇ ಬಳಕೆದಾರ ಹೇಳಿದರೆ, ಎಂತಹ ಸುಂದರ ನೋಟ ಎಂದು ನಾಲ್ಕನೇ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಚೆನ್ನೈನಿಂದ ಬಂದ ಬಿಳಿ ಹುಲಿ: ಆನೇಕಲ್ ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಬಪಾ) ಮೃಗಾಲಯಕ್ಕೆ ತಮಿಳುನಾಡಿನಿಂದ ಬಿಳಿ ಹುಲಿಯನ್ನು ತರಲಾಗಿದೆ. ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಚೆನ್ನೈನ ವಂಡಲೂರ್ ಅರಿಗ್ನಾರ್ ಅಣ್ಣಾ ಝೂಯಾಲಾಜಿಕಲ್ ಪಾರ್ಕ್‌ನಿಂದ ಬಿಳಿ ರಾಯಲ್ ಬಂಗಾಳ ಗಂಡು ಹುಲಿಯನ್ನು ತರಲಾಗಿದೆ.
ದೇಶದ ಹುಲಿಗಳ ಸಂಖ್ಯೆ ಬಿಡುಗಡೆ: ಈಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ದೇಶದ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು. 2022ರ ವರದಿಯಂತೆ ದೇಶದಲ್ಲಿ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜಾಸ್ತಿಯಾಗಿದೆ. 2022ರಲ್ಲಿ ದೇಶಾದ್ಯಂತ 3,167 ಹುಲಿಗಳಿವೆ. 2006ರಲ್ಲಿ 1411, 2010 ರಲ್ಲಿ 1706, 2014 ರಲ್ಲಿ 2226, 2018ರಲ್ಲಿ 2967 ಹುಲಿಗಳಿದ್ದವು. ಕಳೆದ 10 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ.75 ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ: ಜಿಎಸ್ಟಿ ಸಂಗ್ರಹ ದಾಖಲೆಯ ₹1.87 ಲಕ್ಷ ಕೋಟಿಗೆ ಏರಿಕೆ: ಕರ್ನಾಟಕಕ್ಕೆ 2ನೇ ಸ್ಥಾನ