ಬಗಾಹಾ (ಬಿಹಾರ): ಬಿಹಾರದ ಬಗಾಹಾದ ವಾಲ್ಮೀಕಿನಗರ ರಸ್ತೆಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಹುಲಿಯೊಂದು ನಡೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ. ನೂತನವಾಗಿ ನಿರ್ಮಿಸಲಾಗಿದ್ದ ಪದಾಧಿಕಾರಿಗಳ ನಿವಾಸದ ಗಡಿ ಗೋಡೆಯ ಮೇಲೆ ರಾತ್ರಿ ಹುಲಿ ಘರ್ಜನೆ ಮಾಡುತ್ತಿರುವುದನ್ನು ಕಂಡು ರೈಲು ಹಳಿ ದ್ವಿಗುಣಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿ ಓಡಿಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹುಲಿಯ ಚಲನವಲನದಿಂದ ಕಾರ್ಮಿಕರು ಹಾಗೂ ರೈಲ್ವೆ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ವಾಸ್ತವವಾಗಿ, ಮುಜಾಫರ್‌ಪುರ-ಗೋರಖ್‌ಪುರ ರೈಲು ಮಾರ್ಗವನ್ನು ದ್ವಿಗುಣಗೊಳಿಸುವ ಕೆಲಸವು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ವಾಲ್ಮೀಕಿನಗರ ರೈಲು ನಿಲ್ದಾಣದ ಆವರಣದಲ್ಲಿ ಹುಲಿ ಘರ್ಜನೆ ಮಾಡುತ್ತಿರುವುದನ್ನು ಕಂಡು ರೈಲ್ವೇ ಸಿಬ್ಬಂದಿ ಸೇರಿದಂತೆ ಕಾರ್ಮಿಕರು ಆತಂಕಗೊಂಡಿದ್ದರು.
ಹುಲಿಯ ಘರ್ಜನೆ ಕೇಳಿ ಎಲ್ಲರೂ ಓಡಿ ಹೋಗಿದ್ದಾರೆ : ಠಾಣೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅಧಿಕಾರಿ ನಿವಾಸದ ಗಡಿ ಗೋಡೆಯ ಮೇಲೆ ತಡರಾತ್ರಿ ಹುಲಿ ನಡೆದುಕೊಂಡು ಬರುತ್ತಿರುವುದನ್ನು ಕಾರ್ಮಿಕರು ನೋಡಿದ್ದಾರೆ. ಆ ಹುಲಿ ನಡಿಗೆಯ ವಿಡಿಯೋ ಕೂಡ ಮಾಡಿದ್ದಾರೆ. ಹುಲಿ ಓಡಾಡುತ್ತಿದ್ದ ಸಂದರ್ಭದಲ್ಲೂ ರೈಲ್ವೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಹುಲಿಯ ಘರ್ಜನೆ ಕೇಳಿ ಎಲ್ಲರೂ ಓಡಿ ಹೋಗಿದ್ದಾರೆ. ಕೆಲಸದ ಸ್ಥಳದಲ್ಲಿ ಇರುವ ಜನರು ಈಗ ತಮ್ಮ ಜೀವನದ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ. ವಾಲ್ಮೀಕಿ ನಗರ ರೈಲು ನಿಲ್ದಾಣವು ವಾಲ್ಮೀಕಿ ಹುಲಿ ಸಂರಕ್ಷಿತ ಅರಣ್ಯದ ಪಕ್ಕದಲ್ಲಿದೆ.
ರಾತ್ರಿ ವೇಳೆ ಕೆಲಸ ಮಾಡಲು ಹಿಂದೇಟು ಹಾಕುತ್ತಿರುವ ಸಿಬ್ಬಂದಿ : ಇಂತಹ ಪರಿಸ್ಥಿತಿಯಲ್ಲಿ ಕಾಡುಪ್ರಾಣಿಗಳು ಬಂದು ಹೋಗುವುದು ಇಲ್ಲಿ ಸಾಮಾನ್ಯ ಸಂಗತಿ. ಆದರೆ, ಹುಲಿಯ ಚಲನವಲನದಿಂದ ನಿಲ್ದಾಣದ ಪಕ್ಕದ ರೈಲು ಮಾರ್ಗ ಡಬ್ಲಿಂಗ್ ಕಾಮಗಾರಿ ನಡೆಸುತ್ತಿರುವ ಸಿಬ್ಬಂದಿ, ಅಧಿಕಾರಿಗಳು, ಕೂಲಿಕಾರರು ಭಯಗೊಂಡಿದ್ದು, ರಾತ್ರಿ ವೇಳೆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ರೈಲು ನಿಲ್ದಾಣವು ಬಿಹಾರದ ಏಕೈಕ ವಾಲ್ಮೀಕಿ ಹುಲಿ ಸಂರಕ್ಷಿತ ಅರಣ್ಯದ ಮಧ್ಯದಲ್ಲಿದೆ. ಅಲ್ಲಿ ಗಮನಾರ್ಹ ಸಂಖ್ಯೆಯ ಹುಲಿಗಳಿವೆ.
ನೀರು ಕುಡಿಯುತ್ತಾ ಸಂಚಾರ ಬಂದ್ ಮಾಡಿದ ಹುಲಿರಾಯ: ಇನ್ನೊಂದೆಡೆ ಉತ್ತರ ಪ್ರದೇಶದ ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬೆಂಗಾಲ್ ಟೈಗರ್ ಮಳೆ ನೀರು ಕುಡಿಯುತ್ತಿರುವ ವಿಡಿಯೋ (ಮೇ 2-2023) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹುಲಿಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಕತರ್ನಿಯಾಘಾಟ್ನಲ್ಲಿ ರೋಡ್ ಸ್ಟಾಪರ್ ಎಂದು ಬರೆದುಕೊಂಡಿದ್ದರು. ಇದು ವನ್ಯ ಪ್ರೇಮಿಗಳಿಗೆ ಸಂತಸ ತಂದಿತ್ತು.
ಇದನ್ನೂ ಓದಿ: ನಾನೇ ಇಲ್ಲಿ ಎಲ್ಲ! ರಸ್ತೆ ಬದಿ ನೀರು ಕುಡಿಯುತ್ತಾ ಸಂಚಾರ ಬಂದ್ ಮಾಡಿದ ಹುಲಿಯ!- ವಿಡಿಯೋ