ತ್ರಿಶೂರ್/ಕೇರಳ: ತ್ರಿಶೂರ್ ಪೂರಂ ಕಾರ್ಯಕ್ರಮದಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 18 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಅವರಲ್ಲಿ ಹೆಚ್ಚಿನವರು ಅಂಗಡಿಯವರು ಮತ್ತು ಕಾರ್ಮಿಕರಾಗಿದ್ದು, ಈ ವ್ಯಕ್ತಿಗಳ ಸಂಪರ್ಕಕ್ಕೆ ಬಂದವರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ತ್ರಿಶೂರ್ ಪೂರಂ ನಲ್ಲಿ ಭಾಗವಹಿಸುವ ಎಲ್ಲರಿಗೂ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ.
ಸಾರ್ವಜನಿಕರ ಭಾಗವಹಿಸುವಿಕೆಗೆ ಅವಕಾಶ ನೀಡದೆ ತ್ರಿಶೂರ್ ಪೂರಂ ನಡೆಸಲು ನಿರ್ಧರಿಸಲಾಗಿದೆ. ಪೂರಂ ಸಂಘಟಕರು ಹಾಗೂ ಮಾವುತರಿಗೆ ಮಾತ್ರ ಈ ಉತ್ಸವದಲ್ಲಿ ಭಾಗವಹಿಸಲು ಅವಕಾಶವಿದೆ.
ಜನರು ಪೂರಂನ ನೇರ ಪ್ರಸಾರವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು. 'ಅಥಾಚಾಮಯಂ' ಮತ್ತು 'ಪಾಕಲ್ ಪೂರಂ' ಇರುವುದಿಲ್ಲ. ಕುಡಮಟ್ಟಂ ಆಚರಣೆಯನ್ನು ಅಲ್ಪಾವಧಿಗೆ ನಿರ್ಬಂಧಿಸಲಾಗುತ್ತದೆ. ಏಪ್ರಿಲ್ 23ರಂದು ತ್ರಿಶೂರ್ ಪೂರಂ ನಡೆಯಲಿದೆ.